Breaking News

ಮರ್ಯಾದಾ ಹತ್ಯೆ: ಕೋಳಿ ಕಟ್​ ಮಾಡುವ ಚಾಕುವಿನಿಂದ ಮಗಳ ಕತ್ತು ಕೊಯ್ದು ಕೊಲೆ!

Spread the love

ಬೆಂಗಳೂರು : ಮರ್ಯಾದೆಗೆ ಹೆದರಿ ತಂದೆಯೇ ಮಗಳನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕವನ ( 20 ) ಮೃತ ಯುವತಿ ಎಂದು ಗುರುತಿಸಲಾಗಿದೆ. ತಂದೆ ಮಂಜುನಾಥ್ ಎಂಬುವವನು ಮಗಳನ್ನ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾರೆ.

ತಂದೆ ಮಂಜುನಾಥ್ ಎಂಬುವವನು ಮಗಳನ್ನ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾರೆ. ರಾತ್ರಿ ಮಲಗಿದ್ದ ವೇಳೆ‌ ಮಗಳ‌ ಕತ್ತು ಕೊಯ್ದು, ಕಟ್ಟಿಗೆಯಿಂದ ತಲೆಗೆ ಹೊಡೆದು ಭೀಕರವಾಗಿ ಮಗಳ ಕೊಲೆ ಮಾಡಿದ್ದಾನೆ. ಮಗಳು ಅನ್ಯ ಜಾತಿ ಯುವಕನನ್ನ ಪ್ರೀತಿ ಮಾಡುತ್ತಿದ್ದಾಳೆ ಅಂತ ಮರ್ಯಾದೆಗೆ ಹೆದರಿ ಈ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.

ಮಗಳ ಕೊಲೆ ಮಾಡಿ ನಂತರ ಪೊಲೀಸ್ ಠಾಣೆಗೆ ಬಂದ ತಂದೆ ಮಂಜುನಾಥ್ ಶರಣಾಗಿದ್ದಾನೆ. ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಅಂದಹಾಗೆ ಮಕ್ಕಳ ಸರಣಿ‌ ಪ್ರೀತಿಯಿಂದ ತಂದೆ ಮನನೊಂದಿದ್ದ ಎನ್ನಲಾಗಿದೆ.

ಇಬ್ಬರು ಹೆಣ್ಣು ಮಕ್ಕಳು ಪ್ರೀತಿ ಬಲೆಗೆ ಬಿದ್ದಿದ್ದಾರೆ ಅಂತ ಮರ್ಯಾದೆಗೆ ಅಂಜಿದ್ದ. ಕಳೆದ ಮಂಗಳವಾರವಷ್ಟೇ ಬೆರೊಬ್ಬನ ಜೊತೆ ಪ್ರೀತಿ ಮಾಡಿದ್ದ ಕಿರಿಯ ಮಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಠಾಣೆಯಲ್ಲಿ ಪ್ರೀತಿಸಿದವನ ಜೊತೆ ಹೋಗೋದಾಗಿ ಕಿರಿ ಮಗಳು ಹೇಳಿದ್ದಳು. ಹೀಗಾಗಿ ಪೊಲೀಸರು ಮಂಜುನಾಥ್​ ಅವರ ಕಿರಿ ಮಗಳನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿ ಕೊಟ್ಟಿದ್ದರು.

ಇದರ ಬೆನ್ನಲ್ಲೇ ಹಿರಿ‌ ಮಗಳು ಸಹ ಪ್ರೀತಿ ಬಲೆಗೆ ಬಿದ್ದಿರುವ ವಿಚಾರ ತಂದೆಗೆ ತಿಳಿದಿದೆ. ಹೀಗಾಗಿ ಇಬ್ಬರ ನಡುವೆ ನಿನ್ನೆ ರಾತ್ರಿ ಜಗಳವಾಗಿದೆಯಂತೆ. ಚಿಕ್ಕ ಮಗಳು ಮರ್ಯಾದೆ ಕಳೆದಳು. ಈಗ ಇವಳು ಮರ್ಯಾದೆ ಕಳೆಯುತ್ತಾಳೆ ಅಂತಾ ರಾತ್ರಿ ಹೊತ್ತು ಮಲಗಿದ್ದ ಮಗಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಇನ್ನು ಮಂಜುನಾಥ್​ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಆರೋಪಿ ತಂದೆ ಕೋಳಿ ಕೊಯ್ಯುವ ಚಾಕುವಿನಿಂದಲೇ ಮಗಳ ಕತ್ತು ಕೊಯ್ದು ಭೀಕರ ಕೊಲೆ ಮಾಡಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ