Breaking News

ಗ್ರೇಮಿಂಗ್​ ಆಯಪ್​ನಲ್ಲಿ 1.5 ಕೋಟಿ ರೂ. ಬಹುಮಾನ ಗೆದ್ದ ಪಿಎಸ್​ಐ: ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಅಧಿಕಾರಿ

Spread the love

Gaming app: ಮಹಾರಾಷ್ಟ್ರದ ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಕಮಿಷನರೇಟ್‌ನ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ (ಪಿಎಸ್‌ಐ) ಗೇಮಿಂಗ್​ ಆಯಪ್​​ನಲ್ಲಿ 1.5 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾರೆ. ಈ ಪೊಲೀಸ್ ಸಬ್ ಇನ್ಸ್​​ಪೆಕ್ಟರ್​​ ಹೆಸರು ಸೋಮನಾಥ್ ಝೆಂಡೆ. ಈ ಪಿಎಸ್​ಐ ಒಂದೇ ದಿನದಲ್ಲಿ ಕೋಟ್ಯಧಿಪತಿಯಾಗಿದ್ದಾರೆ.

 

ಪುಣೆ (ಮಹಾರಾಷ್ಟ್ರ): ದೇಶದೆಲ್ಲೆಡೆ ವಿಶ್ವಕಪ್ ಜ್ವರ ಕಾಣಿಸಿಕೊಂಡಿದೆ. ಕ್ರಿಕೆಟ್ ಪ್ರೇಮಿಗಳಿಗೆ ಇದು ಅತ್ಯಂತ ಸಂತಸದ ಕ್ಷಣ. ಕ್ರಿಕೆಟ್ ಎಲ್ಲರ ಅಚ್ಚುಮೆಚ್ಚಿನ ಆಟ. ಕೆಲವರು ಮೈದಾನದಲ್ಲಿ ಆಡುತ್ತಾರೆ ಮತ್ತು ಕೆಲವರು ಮೊಬೈಲ್‌ನಲ್ಲಿಯೂ ಆಡುತ್ತಾರೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೋಮನಾಥ್ ಝೆಂಡೆ ಗೇಮಿಂಗ್ಸ್​​​​​ನಲ್ಲಿ 1.5 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾರೆ.

ಹಲವು ಬಾರಿ ಸೋತಿದ್ದ ಸೋಮನಾಥ್ ಝೆಂಡೆ: ಪಿಎಸ್‌ಐ ಸೋಮನಾಥ್ ಝೆಂಡೆ ಅವರನ್ನು ಪಿಂಪ್ರಿ ಚಿಂಚ್ವಾಡ್ ಪೊಲೀಸ್ ಹೆಡ್​ ಕ್ವಾರ್ಟರ್ಸ್​ನಲ್ಲಿ ಆರ್​ಸಿಪಿಯಲ್ಲಿ ನಿಯೋಜಿಸಲಾಗಿದೆ. ಅವರು ಕ್ರಿಕೆಟ್‌ನಲ್ಲಿ ಒಲವು ಹೊಂದಿರುವ ಕಾರಣ, ಅವರು ಆನ್​​ಲೈನ್​​ನಲ್ಲಿ ಗೇಮಿಂಗ್ಸ್​ನಲ್ಲಿ ತಮ್ಮ ನೆಚ್ಚಿನ ತಂಡ ಆಯ್ಕೆ ಮಾಡಿ ಬಹುಮಾನ ಪಡೆದುಕೊಂಡಿದ್ದಾರೆ.

ಕುಟುಂಬದಲ್ಲಿ ಮೂಡಿದ ಸಂತಸ: ನಿನ್ನೆ (ಅಕ್ಟೋಬರ್​ 10ರಂದು) ಮಂಗಳವಾರವೂ ಕರ್ತವ್ಯದಲ್ಲಿರುವಾಗಲೇ ಗೇಮ್ಸ್​​ನಲ್ಲಿ ತಂಡವನ್ನು ಕಣಕ್ಕಿಳಿಸುವ ಮೂಲಕ ಬಾಂಗ್ಲಾದೇಶ ವರ್ಸಸ್ ಇಂಗ್ಲೆಂಡ್ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ್ದರು. ಕೆಲವೇ ಸಮಯದಲ್ಲಿ, ಅವರ ತಂಡವು ನಂಬರ್​ ಸ್ಥಾನ ಪಡೆದುಕೊಂಡಿದ್ದರಿಂದ ಅವರು ಬಹುಮಾನ ಪಡೆದಿದ್ದಾರೆ. ಆ ಬಹುಮಾನವನ್ನು ನೋಡಿ ಅವರು ಆಶ್ಚರ್ಯಚಕಿತರಾಗಿದ್ದಾರೆ. ಒಂದೂವರೆ ಕೋಟಿ ರೂಪಾಯಿ ಬಹುಮಾನ ಸಿಕ್ಕಿದ್ದು ಸೋಮನಾಥ್ ಝೆಂಡೆ ಕುಟುಂಬಕ್ಕೆ ತುಂಬಾ ಖುಷಿ ತಂದಿದೆ.

ಮೊದಮೊದಲು ನಂಬಲಿಲ್ಲ- ಪಿಎಸ್​ಐ: ಪಿಎಸ್​ಐ ಸೋಮನಾಥ ಝೆಂಡೆ ಮಾತನಾಡಿ, ”ಕಳೆದ ಹಲವು ತಿಂಗಳಿಂದ ಬಿಡುವಿನ ವೇಳೆಯಲ್ಲಿ ಗೇಮ್ಸ್​ನಲ್ಲಿ ನನ್ನ ಆಯ್ಕೆ ತಂಡವನ್ನು ಸೆಲೆಕ್ಟ್​ ಮಾಡುತ್ತಿದ್ದೆ. ಆದರೆ, ನಾನು ಎಂದಿಗೂ ಯಶಸ್ವಿಯಾಗಿರಲಿಲ್ಲ. ನಿನ್ನೆಯೂ ನಾನು ಕರ್ತವ್ಯದಲ್ಲಿದ್ದಾಗ ನಾನು ಆಟಕ್ಕಾಗಿ ತಂಡವನ್ನು ಕಣಕ್ಕಿಳಿಸಿದೆ. ಆ ತಂಡ ಮೇಲುಗೈ ಸಾಧಿಸಿತು. ಆರಂಭದಲ್ಲಿ ನನಗೆ ಒಂದೂವರೆ ಕೋಟಿ ಬಹುಮಾನ ಬಂದಿದೆ ಎಂಬ ಸಂದೇಶ ಬಂದಿದೆ. ನಾನು ಮೊದಲು ನಂಬಲಿಲ್ಲ. ಆದರೆ, ನನಗೆ ತಲಾ ಎರಡು ಲಕ್ಷ ರೂಪಾಯಿ ಸಿಗಲಾರಂಭಿಸಿದಾಗ ನನಗೆ ತುಂಬಾ ಖುಷಿಯಾಯಿತು” ಎಂದು ತಿಳಿಸಿದರು. ”ಸಾಮಾನ್ಯ ಕುಟುಂಬದ ವ್ಯಕ್ತಿಯೊಬ್ಬರು ಇಷ್ಟು ದೊಡ್ಡ ಮೊತ್ತವನ್ನು ಪಡೆದ ನಂತರ, ಆಕಾಶದೆತ್ತರದಷ್ಟು ಸಂತೋಷವಾಗುತ್ತದೆ. ಈ ಪ್ರಶಸ್ತಿಯು ನನ್ನ ಕುಟುಂಬ ಮತ್ತು ಸ್ನೇಹಿತರ ಸಂತೋಷವನ್ನು ಮತ್ತಷ್ಟು ಹೆಚ್ಚು ಮಾಡಿತು” ಎಂದು ಪಿಎಸ್‌ಐ ಸೋಮನಾಥ್ ಝೆಂಡೆ ಸಂತಸ ವ್ಯಕ್ತಪಡಿಸಿದ್ದಾರೆ.

ಆನ್​​​ಲೈನ್​​​​​​​​​​​​ ಗೇಮಿಂಗ್​ ನಿಷೇಧಿಸಲು ಬೇಡಿಕೆ: ಇದೊಂದು ಆನ್‌ಲೈನ್ ಆಟವಾಗಿದೆ. ಹೀಗಾಗಿ ಇಂತಹ ಆನ್ ಲೈನ್ ಗೇಮಿಂಗ್ ನಿಷೇಧಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.


Spread the love

About Laxminews 24x7

Check Also

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು

Spread the loveಸನ್ಮಾನ್ಯ ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಹಾಗೂ ಬೆಳಗಾವಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ