Breaking News

ಏಷ್ಯನ್​ ಗೇಮ್ಸ್: ಭಾರತೀಯ ಅಥ್ಲೀಟ್‌ಗಳು 107 ಪದಕ ಗೆದ್ದಿರುವುದು ಐತಿಹಾಸಿಕ ಸಾಧನೆ- ಪ್ರಧಾನಿ ಮೋದಿ ಮೆಚ್ಚುಗೆ

Spread the love

ನವದೆಹಲಿ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ವಿವಿಧ ಸ್ಪರ್ಧೆಗಳಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಜಯಿಸಿ ಅಥ್ಲೀಟ್‌ಗಳು ಸಂಭ್ರಮಿಸಿದ್ದಾರೆ.

ಈ ಸ್ಮರಣೀಯ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ಒಟ್ಟು 107 ಪದಕಗಳನ್ನು ಗೆದ್ದಿರುವುದನ್ನು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ್ದಾರೆ. ‘ನಮ್ಮ ಅಥ್ಲೀಟ್‌ಗಳ ಸಾಧನೆಯನ್ನು ರಾಷ್ಟ್ರವೇ ಸಂಭ್ರಮಿಸುತ್ತಿದ್ದು, ಆಟಗಾರರ ಅಚಲ ಸಂಕಲ್ಪ ಮತ್ತು ಕಠಿಣ ಪರಿಶ್ರಮ ರಾಷ್ಟ್ರಕ್ಕೆ ಹೆಮ್ಮೆ ತಂದಿದೆ’ ಎಂದಿದ್ದಾರೆ.

“ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಐತಿಹಾಸಿಕ ಸಾಧನೆ! ನಮ್ಮ ಹೆಮ್ಮೆಯ ಅಥ್ಲೀಟ್‌ಗಳು 107 ಪದಕಗಳನ್ನು ತಂದುಕೊಟ್ಟಿದ್ದಾರೆ. ಇಡೀ ರಾಷ್ಟ್ರವೇ ಹೆಮ್ಮೆ ಪಡುತ್ತಿದೆ. ಕಳೆದ 60 ವರ್ಷಗಳಲ್ಲೇ ಅತ್ಯುತ್ತಮ ಪ್ರದರ್ಶನವಿದು. ನಮ್ಮ ಆಟಗಾರರ ಅಚಲ ದೃಢತೆ, ಕಠಿಣ ಪರಿಶ್ರಮ ರಾಷ್ಟ್ರದ ಹಿರಿಮೆ ಹೆಚ್ಚಿಸಿದೆ. ಈ ವಿಜಯ ನಮಗೆಲ್ಲರಿಗೂ ಸ್ಫೂರ್ತಿ ನೀಡಿದೆ. ಶ್ರೇಷ್ಠತೆಯಲ್ಲಿ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದೆ”- ನರೇಂದ್ರ ಮೋದಿ, ಪ್ರಧಾನಿ

 

 

ಭಾರತದ ಪದಕ ಗಳಿಕೆ ವಿವರ: ಪ್ರತಿಷ್ಟಿತ ಕೂಟದಲ್ಲಿ ಭಾರತ28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕ ಸೇರಿ ಒಟ್ಟು 107 ಪದಕಗಳನ್ನು ಗೆದ್ದುಕೊಂಡಿದೆ. 2018 ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಸ್ಪರ್ಧಿಗಳು ಗೆದ್ದ 70 ಪದಕಗಳಿಗೆ ಹೋಲಿಸಿದರೆ ಪದಕಗಳ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಈ ಸಾಲಿನ ಏಷ್ಯನ್ ಗೇಮ್ಸ್‌ ಇಂದು ಕೊನೆಯಾಗಲಿದೆ.


Spread the love

About Laxminews 24x7

Check Also

ಬಾನು ಮುಷ್ತಾಕ್ ಆಯ್ಕೆಯನ್ನು ಧರ್ಮಾಂದರು ಮಾತ್ರ ವಿರೋಧಿಸುತ್ತಾರೆ: ಸಿಎಂ ಸಿದ್ದರಾಮಯ್ಯ

Spread the loveಮೈಸೂರು: “ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಆಯ್ಕೆ ವಿಚಾರದಲ್ಲಿ ಬಿಜೆಪಿ ನಾಯಕರು ಕುಂಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ