ಬೆಳಗಾವಿಯಲ್ಲಿ ರಾಜ್ಯ ಗ್ರಾಹಕ ಆಯೋಗದ ಪೀಠ ಮಂಜೂರಾಗಿ 2 ವರ್ಷ ಕಳೆದರೂ ಕಟ್ಟಡದ ಕೊರತೆಯಿಂದ ಇನ್ನೂ ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಮುಂದಿನ 8 ದಿನಗಳಲ್ಲಿ ಆಯೋಗದ ಪೀಠಕ್ಕೆ ಕಟ್ಟಡ ಸಿಗುವಂತೆ ಮಾಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಬೆಳಗಾವಿಯ ವಕೀಲರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಗ್ರಾಹಕ ಆಯೋಗದ ಶಾಶ್ವತ ಪೀಠವನ್ನು ಬೆಳಗಾವಿಯಲ್ಲಿ ಸ್ಥಾಪಿಸಬೇಕು ಎಂದು ವಕೀಲರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು. ಇದಕ್ಕಾಗಿ ಅನೇಕ ಮೆರವಣಿಗೆಗಳು, ಆಂದೋಲನಗಳು ನಡೆದವು. ಅಂದಿನ ಸಚಿವರು-ಸಂಸದರೂ ಈ ಬೇಡಿಕೆಯನ್ನು ಬೆಂಬಲಿಸಿದ್ದರು.
ಕೊನೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಗಾವಿಯಲ್ಲಿ ರಾಜ್ಯ ಗ್ರಾಹಕ ಆಯೋಗದ ಕಾಯಂ ಪೀಠಕ್ಕೆ ಅನುಮೋದನೆ ನೀಡಿ ಕಟ್ಟಡ ಸರಿಪಡಿಸಲು ಶಿಫಾರಸು ಮಾಡಲಾಗಿತ್ತು. ಆದರೆ, ಕಟ್ಟಡ ಕೊರತೆಯಿಂದ 2 ವರ್ಷ ಕಳೆದರೂ ಗ್ರಾಹಕರ ಪೀಠ ಕಾರ್ಯಾರಂಭ ಮಾಡಿಲ್ಲ. ಹೀಗಾಗಿ ಇಂದು ಬೆಳಗಾವಿಯಲ್ಲಿ ವಕೀಲರು. ಎನ್. ಆರ್. ಲಾತೂರ್ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಈ ಕುರಿತು ಮನವಿ ಸಲ್ಲಿಸಲಾಯಿತು