Breaking News

ಕಾವೇರಿ ಜಲಾನಯನ ಪ್ರದೇಶದ ಜನರಿಗೆ, ರೈತರಿಗೆ ಸಂಕಷ್ಟ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Spread the love

ಹಾವೇರಿ : ಕಾವೇರಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿಗಳು ಇಂದು ಸರ್ವಪಕ್ಷ ಸಭೆ ಕರೆದಿದ್ದರು.

ಇದಕ್ಕೆ ಹೋಗಲು ನನಗೆ ತಡರಾತ್ರಿ ಆಹ್ವಾನ‌ ಬಂದಿತ್ತು. ಹೀಗಾಗಿ ಅದಕ್ಕೆ ಅಟೆಂಡ್ ಮಾಡೊಕೆ ಆಗಿಲ್ಲ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಹಾವೇರಿ ಜಿಲ್ಲಾ ಸವಣೂರಲ್ಲಿ ಮಾತನಾಡಿದ ಅವರು, ನಾನು ಇಂದು ಪ್ರವಾಸದಲ್ಲಿದ್ದೇನೆ. ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ. ಈಗಾಗಲೇ 15,16 ಟಿಎಂಸಿಯ 15,000 ಕ್ಯೂಸೆಕ್​ ನೀರು ಹರಿಸಿದ್ದಾರೆ. ಮತ್ತೆ ನೀರು ಬಿಡಿ ಎನ್ನುವುದು ಸಾಧ್ಯವಾಗದ ಮಾತು. ಅಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಕಾವೇರಿ ಜಲಾನಯನ ಪ್ರದೇಶದ ಜನರಿಗೆ, ರೈತರಿಗೆ ಸಂಕಷ್ಟ ಇದೆ. ಮಳೆಗಾಲ ಇಲ್ಲ. ಹೀಗಾಗಿ ಕುಡಿವ ನೀರಿಗಾಗಿ ಸಂಗ್ರಹ ಮಾಡುವ ಅವಶ್ಯವಿದೆ. ತಮಿಳುನಾಡಿನವರು 1.8 ಲಕ್ಷ ಹೆಕ್ಟೇರ್​​ ಮಾಡಬೇಕು ಅಂತಾ ಕೇಳಿದ್ರು. ಆದರೆ, ಅವಶ್ಯಕತೆಗಿಂತ ಹೆಚ್ಚು 4 ಲಕ್ಷ ಹೆಕ್ಟೇರ್ ಮಾಡಿ ಅಕ್ರಮವಾಗಿ ನೀರು ಕೇಳ್ತಾ ಇದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು.

ಕಾವೇರಿ ವಿಚಾರದಲ್ಲಿ ಸರ್ಕಾರಕ್ಕೆ ಪದೇ ಪದೆ ಹಿನ್ನಡೆಯ ವಿಚಾರ ಕುರಿತಂತೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಗೆ ನೀರು ಕೊಡೊಲ್ಲಾ ಅಂತಾ 12ನೇ ತಾರೀಖಿನಂದೇ ಹೇಳಿದೆ. ಅದಕ್ಕೆ ಸರ್ಕಾರ ಬದ್ದವಾಗಿ ಇರಬೇಕು. ಯಾವುದೇ ಕಾರಣಕ್ಕೂ ನೀರು ಬಿಡಕೂಡದು. ಕೂಡಲೇ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿ, ನೀರು ಯಾಕೆ ಬಿಡೊಕೆ ಆಗೋದಿಲ್ಲ ಎಂದು ಗಟ್ಟಿಯಾಗಿ ಪ್ರತಿಪಾದಿಸಬೇಕು. ಇದನ್ನೇ ಸರ್ಕಾರಕ್ಕೆ ಹೇಳಿದ್ದೇನೆ. ಇದೇ ನಮ್ಮ ಆಗ್ರಹ. ಮತ್ತೆ ಸರ್ವಪಕ್ಷ ಸಭೆ ಕರೆದಿರುವುದು ನೋಡಿದ್ರೆ. ಸುಪ್ರೀಂಕೋರ್ಟ್​ನಲ್ಲಿ ಪ್ರತಿಪಾದಿಸೋಕೆ ಆಗ್ತಾ ಇಲ್ಲ, ಮತ್ತೆ ಒತ್ತಡಕ್ಕೆ ಸಿಲುಕಿದ್ದಾರೆ ಎನಿಸುತ್ತೆ ಎಂದು ಬೊಮ್ಮಾಯಿ ಅನುಮಾನ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ