Breaking News

ಸೆಪ್ಟೆಂಬರ್‌ ಕೊನೆಯಲ್ಲಿ ಈ 3 ಸಿನಿಮಾಗಳು ತೆರೆಗೆ

Spread the love

ಸೆಪ್ಟೆಂಬರ್​ 28ರಂದು ಬಹುನಿರೀಕ್ಷಿತ ಮೂರು ಸಿನಿಮಾಗಳು ಬಿಡುಗಡೆಯಾಗಲಿವೆ.

ಭಾರತೀಯ ಚಿತ್ರರಂಗದಲ್ಲಿ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಅತ್ಯುತ್ತಮ ಸಿನಿಮಾಗಳು ತೆರೆ ಕಾಣುತ್ತಿವೆ. ಕಾಂತಾರ, ಕೆಜಿಎಫ್​, ಪಠಾಣ್​, ಜೈಲರ್​ ಹೀಗೆ ಸಾಕಷ್ಟು ಸಿನಿಮಾಗಳು ಪ್ರೇಕ್ಷಕರ ಮನರಂಜಿಸುವಲ್ಲಿ ಯಶಸ್ವಿಯಾಗಿವೆ.

ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯುವಲ್ಲಿಯೂ ಸಫಲವಾಗಿವೆ. ವಿಶ್ವಾದ್ಯಂತ ಭಾರತದ ಸಿನಿಮಾಗಳು ತಿಂಗಳುಗಟ್ಟಲೆ ಪ್ರದರ್ಶನ ಕಾಣುತ್ತಿವೆ. ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾ ಇದೀಗ ಎಲ್ಲೆಡೆ ಧೂಳೆಬ್ಬಿಸುತ್ತಿದೆ. ಈ ನಡುವೆ ಇದೇ ತಿಂಗಳು ಮತ್ತೆ ಮೂರು ಸಿನಿಮಾಗಳು ಒಂದೇ ದಿನ ಸಿಲ್ವರ್ ಸ್ಟ್ಕೀನ್‌ನಲ್ಲಿ ಮಿಂಚಲು ಸಜ್ಜಾಗಿವೆ.

ಸೆಪ್ಟೆಂಬರ್​ 28ರಂದು ಬಹುನಿರೀಕ್ಷಿತ 3 ಸಿನಿಮಾಗಳು ಬಿಡುಗಡೆ ಕಾಣುತ್ತಿವೆ. ಗೋಲ್ಡನ್​ ಸ್ಟಾರ್​ ಗಣೇಶ್​ ನಟನೆಯ ‘ಬಾನ ದಾರಿಯಲಿ’, ರಾಘವ​ ಲಾರೆನ್ಸ್​​ ಮತ್ತು ಕಂಗನಾ ರಣಾವತ್ ಮುಖ್ಯಭೂಮಿಕೆಯಲ್ಲಿರುವ ‘ಚಂದ್ರಮುಖಿ 2’ ಹಾಗೂ ‘ದಿ ಕಾಶ್ಮೀರಿ ಫೈಲ್ಸ್​’ ಖ್ಯಾತಿಯ ವಿವೇಕ್​​ ರಂಜನ್​ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್​ ವಾರ್’ ಸಿನಿಮಾ ಇದೇ ತಿಂಗಳ ಕೊನೆಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಈ ಸಿನಿಮಾಗಳಿಗಾಗಿ ಸಿನಿ ಪ್ರೇಮಿಗಳು ಕಾತುರರಾಗಿದ್ದಾರೆ. ‘ಬಾನ ದಾರಿಯಲಿ’ ಕನ್ನಡ ಸಿನಿಮಾವಾದರೆ, ಉಳಿದೆರಡು ಸಿನಿಮಾ ಕೂಡ ಕನ್ನಡ ಭಾಷೆಯಲ್ಲೂ ಬಿಡುಗಡೆಯಾಗಲಿದೆ. ​

 

 

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಕಾಂಬೋದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಬಾನದಾರಿಯಲಿ’. ಸಿನಿಮಾದಲ್ಲಿ ಗಣೇಶ್​ಗೆ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಈ ಚಿತ್ರಕ್ಕೆ ಅಭಿಷೇಕ್ ಕಲ್ಲತ್ತಿ ಛಾಯಾಗ್ರಾಹಣ, ಮಾಸ್ತಿ ಅವರ ಸಂಭಾಷಣೆ ಹಾಗೂ ಅರ್ಜುನ್ ಜನ್ಯ ಸಂಗೀತವಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ