Breaking News

JDS ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸುದೀರ್ಘವಾದ ಚರ್ಚೆ ಆಗಬೇಕು ಎಂದ ಬೊಮ್ಮಾಯಿ

Spread the love

ಬಳ್ಳಾರಿ: ಕರ್ನಾಟಕದಲ್ಲಿ 4 ತಿಂಗಳ ಆಡಳಿತ ನೋಡಿದಾಗ ಎಲ್ಲರೂ ಸೇರಿ ಜನರ ಪರವಾಗಿ ಮತ್ತು ರಾಜಕೀಯವಾಗಿ ಸರ್ಕಾರವನ್ನು ವಿರೋಧ ಮಾಡುವ ಅವಶ್ಯಕತೆ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಕುರಿತಂತೆ ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ಏನು ಹೇಳಿಕೆ ನೀಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸುದೀರ್ಘವಾದ ಚರ್ಚೆ ಎಲ್ಲಾ ಹಂತದಲ್ಲೂ ಆಗಬೇಕು ಎಂದರು.

ಶನಿವಾರ ಕುಮಾರಸ್ವಾಮಿ ಹೇಳಿರುವುದನ್ನು ನೋಡಿದಾಗ ಮೈತ್ರಿ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಮುಂಬರುವ ದಿನಗಳಲ್ಲಿ ಆಗುವ ಸಾಧ್ಯತೆ ಇದೆ ಎಂದರು. ಕಾಂಗ್ರೆಸ್​ ನಾಯಕ ಬಿ ಕೆ ಹರಿಪ್ರಸಾದ್​ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯ ಒನ್​ ಹಾಗೂ ಸಿದ್ದರಾಮಯ್ಯ ಟೂ. 2013ರ ರಿಂದ 2018ರ ವರೆಗೆ ಇದ್ದ ಸಿದ್ದರಾಮಯ್ಯರಿಗೂ, ಈಗಿನ ಸಿದ್ದರಾಮಯ್ಯರಿಗೂ ಬಹಳ ವ್ಯತ್ಯಾಸ ಇದೆ. ಈ ವ್ಯತ್ಯಾಸ ಅವರ ಆಡಳಿತದ ಮೇಲೂ ಇದೆ, ರಾಜಕೀಯದ ಮೇಲೂ ಇದೆ. ಬಹಳಷ್ಟು ಜನರಿಗೆ ಇದರ ಬಗ್ಗೆ ಗೊತ್ತಾಗಿ ಬೇಗುದಿ ಇದೆ. ಅದರ ಒಂದು ಭಾಗ ಹರಿಪ್ರಸಾದ್​ ಅವರು ಮಾತನಾಡಿರುವುದು ಎಂದರು.

ಹರಿಪ್ರಸಾದ್ ಸಂಪೂರ್ಣವಾಗಿ ಮಾತನಾಡಿದರು ಕೂಡ ಅದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿಲ್ಲ ಎಂದರೆ ಬಿ.ಕೆ ಹರಿಪ್ರಸಾದ್​ ಅವರು ಪಕ್ಷದಲ್ಲಿ ಪ್ರಬಲವಾಗಿದ್ದಾರೆ ಎಂದು ಸಾಬೀತಾಗುತ್ತದೆ. ಹಿಂದೆ ಸಿದ್ದರಾಮಯ್ಯ ಅವರು ಅಧಿಕಾರಿದಲ್ಲಿದ್ದಾಗ ಸ್ವತಂತ್ರವಾಗಿ ಆಡಳಿತ ಮಾಡಿದ್ದರು. ಈಗ ಅವರಿಗೆ ಸ್ವಾತಂತ್ರ್ಯ ಇಲ್ಲ, ಬಹಳ ಒತ್ತಡದಲ್ಲಿ ಆಡಳಿತ ಮಾಡುತ್ತಿದ್ದಾರೆ ಮತ್ತು ಆಂತರಿಕವಾಗಿ ಬಹಳಷ್ಟು ಅಡೆತಡೆಗಳಿವೆ. ಅವರ ಆರ್ಥಿಕ ನಿರ್ವಹಣೆ ನಿಯಂತ್ರಣ ಕಳೆದುಕೊಂಡಿದೆ ಎಂದು ಬೊಮ್ಮಾಯಿ ಹೇಳಿದರು.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ