ಗೋಕಾಕ : ನಗರದ ನದಾಫ್ ಗಲ್ಲಿ ಮಸ್ತಾನ್ ಸಾಬ್ ದರ್ಗಾ ಹತ್ತಿರ ನಿತ್ಯ ಹತ್ತಾರು ಯುವಕರು ಗಾಂಜಾ ಬಲೆಗೆ ಬೀಳುತ್ತಿದ್ದು ಗಾಂಜಾ ಸೇವನೆಗೆ ಬಳಸುವ ವಸ್ತುಗಳು ದಿನನಿತ್ಯ ಈ ಪ್ರದೇಶದಲ್ಲಿ ಕಂಡು ಬರುತ್ತಿವೆ.
ಯುವಕರು ಸಿಗರೇಟ್ ಸೆದುತ್ತಿರುವಂತೆ ಕಂಡು ಬಂದರು ಸಹಿತ ಅದು ಸಿಗರೇಟ್ ಆಗಿರುವುದಿಲ್ಲ. ಬದಲಾಗಿ ಅದರೊಂದಿಗೆ ಗಾಂಜಾ ಕೂಡ ಸೇರಿಸಿ ಸಿಗರೇಟ್ ಸೆದುತ್ತಿರುವುದು ಕಂಡು ಬರುತ್ತದೆ.
ಪೋಷಕರಿಗೆ ಆತಂಕ!
ನಮ್ಮ ಮಗನೊಬ್ಬ ಗಾಂಜಾಗೆ ಬಲೆಗೆ ಸಿಲುಕಿದ್ದು ,ನಾವು ಎಷ್ಟೇ ತಿಳಿ ಹೇಳಿದರು ಕೇಳುತ್ತಿಲ್ಲ, ಗಾಂಜಾ ಸೇವಿಸಿ ಪ್ರತಿ ನಿತ್ಯ ಮನೆಯಲ್ಲಿ ಜಗಳ ಮಾಡುತ್ತಾನೆ ಮೋಮಿನ ಗಲ್ಲಿ ಪೋಷಕರು ತಿಳಿಸಿದ್ದಾರೆ.
ಸುತ್ತುವರಿದ ಪ್ರದೇಶದಲ್ಲಿ ಹಲವು ಯುವಕರು ಗಾಂಜಾ ಬಲೆಗೆ ಸಿಲುಕಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಹಲವು ಬಾರಿ ದೂರು ನೀಡಿದರೂ ಅವರು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ಮುಖಂಡರು ತಿಳಿಸಿದ್ದಾರೆ
ಈ ಗಾಂಜಾ ಗೋಕಾಕ ನಗರಕ್ಕೆ ಎಲ್ಲಿಂದ ಬರ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ?? ಈ ಕುರಿತು ಹಲವು ಪ್ರಕರಣಗಳು ದಾಖಲಾಗಿದ್ದರೂ ಇನ್ನೂ ಗಾಂಜಾ ನಿಲ್ಲಿಸಿಲ್ಲ ?? ಅಂತ ಗೋಕಾಕ ನಿವಾಸಿಗಳು ಪೊಲೀಸ್ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.