Breaking News

ಬೆಂಗಳೂರು: ಇನ್ಸ್​ಪೆಕ್ಟರ್​​​ ವಿರುದ್ಧವೇ ದೂರು ನೀಡಿದ ಪತ್ನಿ

Spread the love

ಬೆಂಗಳೂರು : ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್​ಸ್ಪೆಕ್ಟರ್ ಮಲ್ಲಿಕಾರ್ಜುನ್ ವಿರುದ್ಧ ಪತ್ನಿಯೇ ಯಶವಂತಪುರ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ನಿ ನೀಡಿದ ದೂರಿನ ಮೇರೆಗೆ ಇನ್​ಸ್ಪೆಕ್ಟರ್ ಮಲ್ಲಿಕಾರ್ಜುನ ಸೇರಿ ಒಟ್ಟು ನಾಲ್ವರ ವಿರುದ್ಧ ವಂಚನೆ ಹಾಗೂ ವರದಕ್ಷಿಣೆಯಡಿ ಪ್ರಕರಣ ದಾಖಲಾಗಿದೆ.

 

ದೂರಿನಲ್ಲಿ ಇರುವುದೇನು?: ದೂರುದಾರ ಮಹಿಳೆ ದೂರಿನಲ್ಲಿ ಹೇಳಿರುವ ಪ್ರಕಾರ, ನಾನು ಹಾಗೂ ಮಲ್ಲಿಕಾರ್ಜುನ್ ಇಬ್ಬರು 2012ರಲ್ಲಿ ಮದುವೆ ಮಾಡಿಕೊಂಡಿದ್ದೆವು. ವಿವಾಹದ ವೇಳೆ 8 ಲಕ್ಷ‌ ನಗದು, 250 ಗ್ರಾಂ ಚಿನ್ನ ಹಾಗೂ 5 ಕೆ.ಜಿ ಬೆಳ್ಳಿ ನೀಡಿ ನಮ್ಮ ತಂದೆ ತಾಯಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆರಂಭದಲ್ಲಿ ದಾಂಪತ್ಯ ಅನ್ಯೋನ್ಯವಾಗಿಯೇ ಇತ್ತು. ಅನಂತರ ಹಣಕ್ಕಾಗಿ ಪತಿ ಮಲ್ಲಿಕಾರ್ಜುನ್ ಪೀಡಿಸಲು ಆರಂಭಿಸಿದರು . ಇವರಿಗೆ ಸಹೋದರ ಬಸಪ್ಪ, ಅತ್ತಿಗೆ ಶಿವಮ್ಮ ಸಾಥ್ ನೀಡುತ್ತಿದ್ದರು. ಒಂದು ವರ್ಷ ತುಂಬುವಷ್ಟರಲ್ಲೆ ಗರ್ಭ ಧರಿಸಿದ್ದ ತಮಗೆ ಅಬಾರ್ಷನ್‌ ಮಾಡಿಸುವಂತೆ ಒತ್ತಡ ಹೇರಿ, ಪತಿ ಕಿರುಕುಳ ನೀಡಿದ್ದ. ಅಷ್ಟರ ನಡುವೆಯೂ ನಾನು ಗಂಡು ಮಗುವಿಗೆ ಜನ್ಮ ನೀಡಿದ್ದೆ ಎಂದು ದೂರುದಾರೆ ತಮ್ಮ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.

ಮುಂದುವರೆದು ವಿವರಿಸಿರುವ ಅವರು, ಬಾಣಂತನಕ್ಕಾಗಿ‌ ತವರು ಮನೆ ಸೇರಿದ ಬಳಿಕ ಪತಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧ ಬೆಸೆದುಕೊಂಡಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ತಾವು ಪೊಲೀಸ್‌ ಠಾಣೆಗೆ ಬಂದು ದೂರು ನೀಡಬೇಕಾಯಿತು. ಈ ಹಿಂದೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಸಬ್​ಇನ್ಸ್​ಪೆಕ್ಟರ್​ ಆಗಿ ಕಾರ್ಯನಿರ್ವಹಿಸುವಾಗ ದೂರು ನೀಡಲು ಬಂದಿದ್ದ ಮಹಿಳೆಯೊಂದಿಗೂ ತಮ್ಮ ಪತಿ ಸಲುಗೆ ಬೆಳೆಸಿಕೊಂಡಿದ್ದ ಎಂದು ತಮ್ಮ ದೂರಿನಲ್ಲಿ ಅವರು ಆರೋಪಿಸಿದ್ದಾರೆ. ಈ ನಡುವೆ ಮಹಿಳೆ ನೀಡಿದ ದೂರಿನ ಮೇರೆಗೆ ಪತಿ ವಿರುದ್ಧ ಯಶವಂತಪುರ‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಪ್ರಧಾನಿ ಮೋದಿ ಒಂದು ದಿನ ತಮ್ಮ ಕೃತ್ಯಗಳಿಗೆ ಪಶ್ಚಾತ್ತಾಪ ಪಡುತ್ತಾರೆ: ಮಲ್ಲಿಕಾರ್ಜುನ ಖರ್ಗೆ

Spread the loveಕಲಬುರಗಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುವಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ