Breaking News

ವಿಶ್ವಕಪ್​ ತಂಡದಿಂದ ಚಹಾಲ್​ ಕೈಬಿಡಲು ಕಾರಣ ಏನು?

Spread the love

Why Yuzvendra Singh Chahal Missing From World Cup Team :ಭಾರತ ತಂಡದಲ್ಲಿ ಈ ಹಿಂದೆ ಸ್ಟಾರ್​ ಸ್ಪಿನ್ನರ್​ ಆಗಿದ್ದ ಯಜುವೇಂದ್ರ ಚಹಾಲ್​ಗೆ ಈ ವರ್ಷದ ವಿಶ್ವಕಪ್​ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಅವರು ತೆರೆಮರೆಗೆ ಸರಿಯಲು ಕಾರಣ ಏನು ಎಂಬುದಕ್ಕೆ ಇಲ್ಲಿದೆ ಕಾರಣ..

 

ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಲೆಗ್ ಬ್ರೇಕ್ ಮತ್ತು ಗೂಗ್ಲಿ ಸ್ಪೆಷಲಿಸ್ಟ್ ಯಜುವೇಂದ್ರ ಚಹಾಲ್ ಅವರನ್ನು ವಿಶ್ವಕಪ್​ಗೆ ಏಕೆ ಆಯ್ಕೆ ಮಾಡಿಲ್ಲ ಎಂಬುದರ ಬಗ್ಗೆ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಆದರೆ, ತಂಡದಲ್ಲಿ ಇತ್ತೀಚಿನ ಸಂಯೋಜನೆಯನ್ನು ನೋಡಿದರೆ ಹೆಚ್ಚು ಆಲ್​ರೌಂಡರ್​​ಗಳಿಗೆ ಮಣೆ ಹಾಕಲಾಗುತ್ತಿರುವ ಕಾರಣ ಆಡುವ ಹನ್ನೊಂದರಲ್ಲಿ ಅವಕಾಶ ಸಿಗುತ್ತಿರಲಿಲ್ಲ.

 

  •  

 

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ನ ಬ್ಯಾಟಿಂಗ್​ ಕಾಂಬಿನೇಷನ್​ನಲ್ಲಿ 8 ಮತ್ತು 9ನೇ ವಿಕೆಟ್​ವರೆಗೂ ಬ್ಯಾಟಿಂಗ್​ ಸಾಮರ್ಥ್ಯ ಇರುವುದನ್ನು ಕಾಣುತ್ತೇವೆ. ಇತ್ತೀಚೆಗೆ ಹೆಚ್ಚಿನ ತಂಡಗಳು ಡೆತ್​ ಓವರ್​ಗಳಲ್ಲಿ ಟೇಲ್​ ಎಂಡ್​ ಬ್ಯಾಟರ್​ಗಳು ಕನಿಷ್ಠ 20 ರನ್​ ಗಳಿಸ ಬೇಕು ಎಂದು ಆಪೇಕ್ಷಿಸಲಾಗುತ್ತಿದೆ. ಹೀಗಾಗಿ ಅಕ್ಷರ್​ ಪಟೇಲ್​ ಮತ್ತು ಜಡೇಜಾ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಜೊತೆಗೆ ಸ್ಪಿನ್ ವಿಭಾಗದಲ್ಲಿ ಕುಲದೀಪ್​ ಯಾದವ್​ ಸ್ಥಾನ ಪಡೆದಿದ್ದಾರೆ. ವೇಗದ ವಿಭಾಗದಲ್ಲಿ ಹಾರ್ದಿಕ್​ ಪಾಂಡ್ಯ ಮತ್ತು ಶಾರ್ದೂಲ್​ ಠಾಕೂರ್​ ಅವರನ್ನು ಆಲ್​ರೌಂಡರ್​ಗಳಾಗಿ ಆಯ್ಕೆ ಮಾಡಲಾಗಿದೆ.

 2016 ರಿಂದ ಈ ವರೆಗೆ ಚಹಾಲ್​ ಏಕದಿನ ಬೌಲಿಂಗ್​ ರೆಕಾರ್ಡ್​

ಯುಜ್ವೇಂದ್ರ ಚಹಾಲ್ ಅವರ ಏಕದಿನ ವೃತ್ತಿಜೀವನದ ಅಂಕಿ – ಅಂಶಗಳನ್ನು ಗಮನಿಸಿದರೆ 2017 ರಿಂದ 2019ರ ವರೆಗೆ ಪೀಕ್ ಟೈಮ್​ ಎಂದು ಪರಿಗಣಿಸಬಹುದಾಗಿದೆ. 2020 ಮತ್ತು 21 ರಲ್ಲಿ ಕೊವಿಡ್​ ಕಾರಣಕ್ಕೆ ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶ ಆಟಗಾರರಿಗೆ ದೊರೆತಿಲ್ಲ. ಇದಾದ ನಂತರ ಚಹಾಲ್​ ತಂಡದ ಆಯ್ಕೆಯ ವಿಚಾರದಲ್ಲಿ ತೆರೆಮರೆಗೆ ಹೋದರು. ಈ ವೇಳೆ, ಅಕ್ಷರ್​ ಪಟೇಲ್​ ಆಲ್​ರೌಂಡರ್​​ ಮತ್ತು ಸ್ಪಿನ್ನರ್​ ಆಗಿ ತಂಡದಲ್ಲಿ ಹೆಚ್ಚು ಅವಕಾಶಗಳನ್ನು ಪಡೆದುಕೊಂಡರು. ಆದರೆ 2022 ರಲ್ಲಿ ಚಹಾಲ್​ಗೆ ಹೆಚ್ಚಿನ ಅವಕಾಶ ಸಿಕ್ಕಿ ಉತ್ತಮ ಪ್ರರ್ದನ ನೀಡಿದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ