Breaking News

ನೀರಜ್​ ಚೋಪ್ರಾ ಪ್ರತಿಮೆಯಲ್ಲಿದ್ದ ಜಾವೆಲಿನ್​ ಕಳ್ಳತನ.. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿ ಸಾರ್ವಜನಿಕರು

Spread the love

ಮೀರತ್ (ಉತ್ತರ ಪ್ರದೇಶ): ಸ್ಟಾರ್ ಜಾವೆಲಿನ್ ಥ್ರೋವರ್ ಮತ್ತು ಒಲಿಂಪಿಕ್ ಚಾಂಪಿಯನ್‌, ಇತ್ತಿಚೆಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಚಿನ್ನ ಗೆದ್ದ ನೀರಜ್​ ಚೋಪ್ರಾ ಅವರ ಪ್ರತಿಮೆಯನ್ನು ಇಲ್ಲಿನ ಹಾಪುರ್​ನ ಸರ್ಕಲ್ ಸ್ಥಾಪಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಈ ಪ್ರತಿಮೆಯ ಕೈಯಲ್ಲಿದ್ದ ಜಾವೆಲಿನ್ ಬದಲಾಗಿತ್ತು. ಮೂರ್ತಿ ಸ್ಥಾಪಿಸಿದಾಗ ಫೈಬರ್​ನಿಂದ ಮಾಡಿದ ಜಾವೆಲಿನ್ ಇಡಲಾಗಿತ್ತು. ಈಗ ಆ ಜಾಗದಲ್ಲಿ ಕಿಡಿಗೇಡಿಗಳು ಮರದ ಕೋಲನ್ನು ಇಟ್ಟಿದ್ದಾರೆ. ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಈ ಬಗ್ಗೆ ಕೇಳಿದರೆ ಅದು ನಗರ ಸಭೆಗೆ ಸೇರಿದ ವಿಚಾರ ಎಂದು ವಿಷಯವನ್ನು ತಳ್ಳಿ ಹಾಕುತ್ತಿದ್ದಾರೆ.

ಸ್ಪೋರ್ಟ್ಸ್ ಸಿಟಿಯ ಪ್ರಚಾರಕ್ಕಾಗಿ ನೀರಜ್ ಚೋಪ್ರಾ ಅವರ ಪ್ರತಿಮೆಗಳನ್ನು ನಗರದ ಅನೇಕ ಭಾಗಗಳಲ್ಲಿ ಸ್ಥಾಪಿಸಲಾಗಿದೆ. ಹಾಪುರ್​ದಲ್ಲಿ ರಸ್ತೆಯ ಸರ್ಕಲ್​ ಒಂದರಲ್ಲಿ ವಿವಿಧ ಭಂಗಿಗಳಲ್ಲಿ ನೀರಜ್​ ಅವರ ನಾಲ್ಕು ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಒಂದು ಪ್ರತಿಮೆಯ ಕೈಯಲ್ಲಿ ಫೈಬರ್ ಜಾವೆಲಿನ್ ಅನ್ನು ಹೊಂದಿತ್ತು. ಆದರೆ, ಇಂದು ಆ ಪ್ರತಿಮೆಯ ಕೈಯಲ್ಲಿ ಫೈಬರ್​ ಜಾವೆಲಿನ್ ಬದಲಿಗೆ ಮರದ ಕೋಲು ಇಡಲಾಗಿತ್ತು. ಇದರಿಂದಾಗಿ ನಗರದಲ್ಲಿ ಜಾವೆಲಿನ್ ಕಳ್ಳತನದ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದ ಸಾರ್ವಜನಿಕರು ಪೊಲೀಸರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಜಾವೆಲಿನ್​ ಕಳ್ಳತಕ್ಕೆ ಪೊಲೀಸರ ಭದ್ರತಾ ವ್ಯವಸ್ಥೆಯ ಲೋಪವೇ ಕಾರಣ ಎಂದು ಜನ ಸಾಮಾನ್ಯರು ದೂರುತ್ತಿದ್ದಾರೆ.

ಎಂಡಿಎ ಸ್ಪಷ್ಟನೆ: ಮೀರತ್ ಅಭಿವೃದ್ಧಿ ಪ್ರಾಧಿಕಾರ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದೆ. ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಅವರ ಪ್ರತಿಮೆಯಿಂದ ಜಾವೆಲಿನ್​ ಕಳ್ಳತನವಾಗಿದೆ ಎಂಬ ಸುದ್ದಿ ಸರಿಯಲ್ಲ ಎಂದು ಹೇಳಲಾಗಿದೆ. ಹಿಂದೆ ಬಳಸಿದ ಜಾವೆಲಿನ್​ ಈಗಲೂ ಇದೆ. ಅದನ್ನು ಕದ್ದಿಲ್ಲ ಅಥವಾ ಯಾವುದೇ ರೀತಿಯಲ್ಲಿ ಹಾನಿ ಮಾಡಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಪ್ರತಿಮೆಯ ಹಿಂದಿನ ಚಿತ್ರದಲ್ಲಿ ದೊಡ್ಡ ಜಾವೆಲಿನ್​ ಇತ್ತು, ಆದರೆ ಈಗ ಈಟಿ ತುಂಬಾ ಚಿಕ್ಕದಾಗಿದೆ. ಈ ಜಾವೆಲಿನ್ ಮರದ ಕೋಲಿನಂತೆ ಕಾಣುತ್ತದೆ ಎಂದು ಎಂಡಿಎ ಕಾರ್ಯನಿರ್ವಾಹಕ ಇಂಜಿನಿಯರ್ ಸ್ಪಷ್ಟನೆಯ ನಂತರವೂ ಸ್ಥಳೀಯರು ಈ ಆರೋಪ ಮಾಡಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ