Breaking News

ಇಸ್ರೋ) ಖಗೋಳಶಾಸ್ತ್ರದ ವೈಜ್ಞಾನಿಕ ತಿಳುವಳಿಕೆಯ ಮಟ್ಟ ಹೆಚ್ಚಿಸುವ ಕುರಿತಾದ ಮಹತ್ವದ ಯೋಜನೆಗೆ ಅಣಿಯಾಗುತ್ತಿದೆ.

Spread the love

ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೊದಲ ಸೌರ ಯೋಜನೆ ಆದಿತ್ಯ-L1 ಅನ್ನು ನಿನ್ನೆ (ಶನಿವಾರ) ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಇದಕ್ಕೂ ಮೊದಲು ಆಗಸ್ಟ್ 23ರಂದು ಚಂದ್ರಯಾನ-3 ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಬಾಹ್ಯಾಕಾಶ ಪ್ರಪಂಚದಲ್ಲಿ ಇತಿಹಾಸ ಸೃಷ್ಟಿಸಿತ್ತು. ಚಂದ್ರ ಮತ್ತು ಸೂರ್ಯನ ನಂತರ ಇಸ್ರೋ ಹೊಸ ಮಿಷನ್ ಸಿದ್ಧಪಡಿಸಿದೆ. ಈ ಮಿಷನ್ ಏನು? ಉದ್ದೇಶವೇನು? ನೋಡೋಣ.

ಇಸ್ರೋ ಸಂಸ್ಥೆಯು ಖಗೋಳಶಾಸ್ತ್ರದ ಬಗ್ಗೆ ವೈಜ್ಞಾನಿಕ ತಿಳುವಳಿಕೆ ಹೆಚ್ಚಿಸುವ ಉದ್ದೇಶದಿಂದ ಹೊಸ ಯೋಜನೆಯನ್ನು ವಿನ್ಯಾಸಗೊಳಿಸಿದೆ. XPoSat (ಎಕ್ಸ್-ರೇ ಪೋಲಾರಿಮೀಟರ್ ಸ್ಯಾಟಲೈಟ್) ಎಂಬ ಭಾರತದ ಮೊದಲ ಪೋಲಾರಿಮೆಟ್ರಿ ಯೋಜನೆ ಅನುಷ್ಠಾನಕ್ಕೆ ತಯಾರಿ ಭರದಿಂದ ಸಾಗಿದೆ. ಇದು ತೀವ್ರ ಪರಿಸ್ಥಿತಿಗಳಲ್ಲಿ ಪ್ರಕಾಶಮಾನವಾದ ಖಗೋಳ ಎಕ್ಸ್-ರೇ ಮೂಲಗಳ ವಿವಿಧ ಡೈನಾಮಿಕ್ಸ್ ಅನ್ನು ಅಧ್ಯಯನ ಮಾಡುತ್ತದೆ.

ಮಾಹಿತಿ ಪ್ರಕಾರ, ಬಾಹ್ಯಾಕಾಶ ನೌಕೆಯು ಎರಡು ಪೇಲೋಡ್‌ಗಳನ್ನು (ಉಪಕರಣಗಳು) ಹೊತ್ತೊಯ್ಯುತ್ತದೆ. ಮೊದಲ ಪೇಲೋಡ್ POLIX (ಎಕ್ಸ್-ಕಿರಣಗಳಲ್ಲಿನ ಪೋಲಾರಿಮೀಟರ್ ಉಪಕರಣ). ಇದು 8-30 ಕೆವಿ ಪ್ರೋಟಾನ್‌ಗಳ ಮಧ್ಯಮ ಎಕ್ಸ್-ರೇ ಶಕ್ತಿಯ ಶ್ರೇಣಿಯಲ್ಲಿ ಧ್ರುವೀಯತೆಯ ನಿಯತಾಂಕಗಳನ್ನು ಅಂದರೆ ಡಿಗ್ರಿ ಮತ್ತು ಧ್ರುವೀಕರಣದ ಕೋನವನ್ನು ಅಳೆಯುತ್ತದೆ.

ಎರಡನೇ ಪೇಲೋಡ್, XSPECT (ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್). ಇದು 0.8-1.5 ಕೆವಿ ಶಕ್ತಿಯ ವ್ಯಾಪ್ತಿಯಲ್ಲಿ ರೋಹಿತ ದರ್ಶಕದ ಮಾಹಿತಿ ಒದಗಿಸುತ್ತದೆ. ಇದು ವಿವಿಧ ಮೂಲಗಳನ್ನು ಪರಿಶೀಲಿಸುತ್ತದೆ. ಉದಾಹರಣೆಗೆ, ಎಕ್ಸ್-ರೇ ಪಲ್ಸರ್‌ಗಳು, ಕಪ್ಪು ಕುಳಿಗಳು, ಬೈನರಿಗಳು, LMXB ಗಳು, AGN ಗಳು ಮತ್ತು ಮ್ಯಾಗ್ನೆಟಾರ್‌ಗಳಲ್ಲಿ ಕಡಿಮೆ ಕಾಂತೀಯ ಕ್ಷೇತ್ರಗಳು, ನ್ಯೂಟ್ರಾನ್ ನಕ್ಷತ್ರಗಳು


Spread the love

About Laxminews 24x7

Check Also

ಧಾರವಾಡದಕ್ಲಿ ಸಾರ್ವಜನಿಕ ಗಣೇಶನ ಮೂರ್ತಿಗಳ ದರ್ಶನ ಪಡೆದ ಕೇಂದ್ರ ಸಚಿವ ಜೋಶಿ…. ವಿಘ್ನ ನಿವಾರಕ ಮೂರ್ತಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದ ಜೋಶಿ.

Spread the love ಧಾರವಾಡದಕ್ಲಿ ಸಾರ್ವಜನಿಕ ಗಣೇಶನ ಮೂರ್ತಿಗಳ ದರ್ಶನ ಪಡೆದ ಕೇಂದ್ರ ಸಚಿವ ಜೋಶಿ…. ವಿಘ್ನ ನಿವಾರಕ ಮೂರ್ತಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ