Breaking News

ತಮಿಳು ನೆಲದಲ್ಲಿ ಕಿಂಗ್​ ಖಾನ್​ ಶಾರುಖ್​ ಹವಾ

Spread the love

ಚೆನ್ನೈನ ಶ್ರೀ ಸಾಯಿರಾಮ್​ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಜವಾನ್​ ಪ್ರೀ ರಿಲೀಸ್​ ಈವೆಂಟ್​ ನಡೆಯಲಿದ್ದು, ಶಾರುಖ್​ ಖಾನ್​ ಆಗಮಿಸಿದ್ದಾರೆ.

ಬಾಲಿವುಡ್​ ಕಿಂಗ್​ ಖಾನ್​​ ಶಾರುಖ್​​ ಮತ್ತೊಮ್ಮೆ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯಲು ಸಜ್ಜಾಗಿದ್ದಾರೆ.

ಪಠಾಣ್​ ಬಳಿಕ ಮತ್ತೊಂದು ಆಯಕ್ಷನ್​ ಪ್ಯಾಕ್ಡ್​ ಸಿನಿಮಾದೊಂದಿಗೆ ಗಲ್ಲಾಪೆಟ್ಟಿಗೆ ದಾಖಲೆಗಳನ್ನು ಮುರಿಯಲು ಬರುತ್ತಿದ್ದಾರೆ. ನಟನ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಜವಾನ್’​. ಸೆಪ್ಟೆಂಬರ್​ 7 ರಂದು ವಿಶ್ವಾದ್ಯಂತ ಚಿತ್ರಮಂದಿಗಳಲ್ಲಿ ಜವಾನ್​ ಬಿಡುಗಡೆ ಆಗಲಿದ್ದು, ಪ್ರಮೋಶನ್​​ ವರ್ಕ್ ಜೋರಾಗೇ ನಡೆಯುತ್ತಿದೆ.

 

 

ಚೆನ್ನೈ ತಲುಪಿದ ಎಸ್​ಆರ್​ಕೆ: ಇಂದು ತಮಿಳುನಾಡು ರಾಜಧಾನಿ ಚೆನ್ನೈನ ಶ್ರೀಸಾಯಿರಾಮ್​ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಜವಾನ್​ ಪ್ರೀ ರಿಲೀಸ್​ ಈವೆಂಟ್​ ನಡೆಯಲಿದೆ. ಚಿತ್ರಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಇಂದು ಚಿತ್ರತಂಡ ಹಂಚಿಕೊಳ್ಳಲಿದೆ. ಈ ಅದ್ಧೂರಿ ಸಮಾರಂಭಕ್ಕೆ ಸಾಕ್ಷಿಯಾಗಲು ಕಿಂಗ್​ ಖಾನ್​ ಶಾರುಖ್​ ಚೆನ್ನೈಗೆ ತಲುಪಿದ್ದಾರೆ. ತಮಿಳುನಾಡು ಜನತೆ ನಟನನ್ನು ಬಹಳ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ನಟನ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

 

 

ಈವೆಂಟ್ ಫೋಟೋಗಳು ವೈರಲ್​: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋ ಕಂಡ ಅಭಿಮಾನಿಗಳು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಶಾರುಖ್​ ಅವರ ಮ್ಯಾನೇಜರ್​ ಪೂಜಾ ದದ್ಲಾನಿ ಕೂಡ ಜವಾನ್​ ಪ್ರೀ ರಿಲೀಸ್​ ಈವೆಂಟ್ ನಡೆಯುವ ವೇದಿಕೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ.

 

 

ಸೋಷಿಯಲ್​ ಮೀಡಿಯಾದಲ್ಲಿ ಜವಾನ್​ ಟ್ರೆಂಡಿಂಗ್​ನಲ್ಲಿದೆ. ಶಾರುಖ್​ ಖಾನ್​ ಸಿನಿಮಾ ಎಂದ ಮೇಲೆ ಕ್ರೇಜ್​ ಕೊಂಚ ಹೆಚ್ಚೇ ಅಲ್ವೇ?. ಮತ್ತೊಂದೆಡೆ ನಿರ್ದೇಶಕ ಅಟ್ಲೀ ಈವೆಂಟ್​ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಮಾಹಿತಿ ಶೇರ್ ಮಾಡಿದ್ದಾರೆ. ಜವಾನ್​ ಪ್ರೀ ರಿಲೀಸ್​ ಈವೆಂಟ್ 3 ಗಂಟೆಯಿಂದ 7 ಗಂಟೆವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಸೂಪರ್​ ಸ್ಟಾರ್ ಶಾರುಖ್​ ಖಾನ್​​ ಚೆನ್ನೈ ತಲುಪಿದ್ದು, ಕಾರ್ಯಕ್ರಮ ಆರಂಭಗೊಂಡಿದೆ. ಈವೆಂಟ್​ನ ವೇದಿಕೆ ಅದ್ಧೂರಿಯಾಗಿ ರೆಡಿಯಾಗಿದ್ದು, ಅದರ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ