Breaking News

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆಮರಿಗೆ ಜನ್ಮದಿನ

Spread the love

ಆನೇಕಲ್ (ಬೆಂಗಳೂರು): ಸಿಲಿಕಾನ್ ಸಿಟಿ ಬೆಂಗಳೂರಿಗೆ ಹತ್ತಿರದಲ್ಲೇ ಇರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ಒಂದಲ್ಲ ಒಂದು ವಿಶೇಷತೆಗಳಿಂದ ಪ್ರವಾಸರಿಗೆ ಅಚ್ಚುಮೆಚ್ಚಿನ ತಾಣ.

ಆನೆಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇಂದು ವಿಶೇಷ ಹುಟ್ಟುಹಬ್ಬದ ಸಂಭ್ರಮ ನಡೆಯಿತು.

ಹೌದು, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನೆ ‘ವನಶ್ರೀಯ’ ಹೆಣ್ಣು ಮರಿ ‘ಓಂ ಗಂಗಾ’ ಇಂದು ಮೊದಲನೇ ವರ್ಷದ ಹುಟ್ಟುಹಬ್ಬ. ಅಂತೆಯೇ ಪಾರ್ಕಿನ ಆವರಣದಲ್ಲಿ ಆನೆ ಮರಿಗೆ ಇಷ್ಟ ಆಗುವ ತರಕಾರಿ ಹಾಗೂ ಹಣ್ಣುಗಳನ್ನು ಕೇಕ್​ ರೀತಿಯಲ್ಲಿ ಜೋಡಿಸಿ ವಿಭಿನ್ನವಾಗಿ ಜನ್ಮದಿನವನ್ನು ಸಿಬ್ಬಂದಿ ಆಚರಿಸಿ ಸಂಭ್ರಮಿಸಿದರು.

 ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆಮರಿಗೆ ಜನ್ಮದಿನಓಂ ಗಂಗಾ ಜನ್ಮದಿನಕ್ಕೆ ತರಕಾರಿ ಮತ್ತು ಹಣ್ಣುಗಳ ಕೇಕ್: ಇಲ್ಲಿನ ಸಿಬ್ಬಂದಿ ಆನೆ ಮರಿ ಜನ್ಮದಿನಕ್ಕಾಗಿ ಅನ್ನದ ಪೊಂಗಲ್, ಬೆಲ್ಲ, ತೆಂಗಿನಕಾಯಿ, ಕ್ಯಾರೆಟ್, ಬಾಳೆಹಣ್ಣು, ಕಬ್ಬು ಮತ್ತು ಕಲ್ಲಂಗಡಿಗಳಲ್ಲಿ ವಿಶೇಷವಾಗಿ ಕೇಕ್ ತಯಾರು ಮಾಡಿದ್ದರು. ಕ್ಯಾರೆಟ್, ಕಬ್ಬು, ಕಲ್ಲಂಗಂಡಿಯಲ್ಲೇ ಓಂ ಗಂಗಾ ಎಂದು ಕೇಕ್ ಮುಂದೆ ಬರೆದಿದ್ದರು. ಆನೆ ಮರಿಗೆ ಈ ವಿಶೇಷವಾದ ಕೇಕ್​ ಅ ನೀಡುವ ಮೂಲಕ ಸಿಬ್ಬಂದಿಯು ಜನ್ಮದಿನದ ಶುಭಾಶಯ ಕೋರಿದರು.

 ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆಮರಿಗೆ ಜನ್ಮದಿನಓಂ ಗಂಗಾ ಜನ್ಮದಿನ ಹಿನ್ನೆಲೆಯಲ್ಲಿ ಆನೆಗಳ ಆರೈಕೆ ಕೇಂದ್ರದಲ್ಲಿರುವ ಎಲ್ಲ ಆನೆಗಳಿಗೂ ಈ ವಿಶೇಷವಾದ ಕೇಕ್ ನೀಡಲಾಯಿತು. ಬೆಂಗಳೂರಿನ ಜಿ-ಗ್ರೂಪ್ ಈ ಆನೆ ಮರಿಯನ್ನು ದತ್ತು ಪಡೆದು ‘ಓಂ ಗಂಗಾ’ ಎಂದು ಹೆಸರಿಟ್ಟಿತ್ತು.


Spread the love

About Laxminews 24x7

Check Also

ವಿಶ್ವಪ್ರಸಿದ್ಧ ಮೈಸೂರು ದಸರಾ ಉದ್ಘಾಟನೆಯಲ್ಲಿ ಬಾನು ಮುಷ್ತಾಕ್‌ ಅವರಿಂದ ಶೋಭೆಯ ಸಂದೇಶ

Spread the love ವಿಶ್ವಪ್ರಸಿದ್ಧ ಮೈಸೂರು ದಸರಾ ಉದ್ಘಾಟನೆಯಲ್ಲಿ ಬಾನು ಮುಷ್ತಾಕ್‌ ಅವರಿಂದ ಶೋಭೆಯ ಸಂದೇಶ ಮೈಸೂರು: ಕನ್ನಡಕ್ಕೆ ಮೊದಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ