ಪುಣೆ (ಮಹಾರಾಷ್ಟ್ರ): ಪುಣೆ ನಗರದಲ್ಲಿ ಸಂಬಂಧಗಳಿಗೆ ಕಳಂಕ ತರುವ ಪ್ರಕರಣವೊಂದು ನಡೆದಿದೆ.
ಕೆಲ ದಿನಗಳ ಹಿಂದೆ ಬಾಲಕಿಗೆ ತಂದೆ ಕಿರುಕುಳ ನೀಡಿದ ಘಟನೆ ನಡೆದಿತ್ತು. ಇದೀಗ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಯೊಬ್ಬ ತನ್ನ ಪತ್ನಿಯನ್ನು ಮೂರು ಸಾವಿರ ರೂಪಾಯಿಗೆ ವೇಶ್ಯಾವಾಟಿಕೆಗೆ ತಳ್ಳಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಯ ಪತಿ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಬುಧವಾರ ಬಂಧಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಪುಣೆ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ನಗರದಲ್ಲಿ ವಿವಿಧ ರೀತಿಯ ಅಪರಾಧಗಳು ದಾಖಲಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ ಹಣಕ್ಕಾಗಿ ಪತಿಯೊಬ್ಬ ತನ್ನ ಪತ್ನಿಯನ್ನು ವೇಶ್ಯಾವಾಟಿಕೆಗೆ ಬಲವಂತವಾಗಿ ತಳ್ಳಿರುವ ಆಘಾತಕಾರಿ ಘಟನೆ ಪುಣೆಯ ಹಡಪ್ಸರ್ ಪ್ರದೇಶದಲ್ಲಿ ನಡೆದಿದೆ. ಸಂತ್ರಸ್ತೆಯ ಪತಿಯು ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಯಾಗಿದ್ದಾರೆ. ಈ ಪ್ರಕರಣದಲ್ಲಿ ಪದಾಧಿಕಾರಿ ಸೇರಿದಂತೆ ಆತನ ಇಬ್ಬರು ಸ್ನೇಹಿತರನ್ನು ಹಡಪ್ಸರ್ ಹೆಡೆಮುರಿ ಕಟ್ಟಿದ್ದಾರೆ.
ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದೇನು?: ಈ ಕುರಿತು 25 ವರ್ಷದ ಸಂತ್ರಸ್ತೆ ಹಡಪ್ಸರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿ ಏನೆಂದರೆ, ಸಂತ್ರಸ್ತ ಮಹಿಳೆಗೆ ಮದುವೆಯಾದಂದಿನಿಂದ ಪತಿಯಿಂದ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ. ಪತಿ ಹಣದ ದುರಾಸೆಯಿಂದ ಪತ್ನಿಗೆ ಥಳಿಸಿದ್ದಾನೆ. ಆಕೆಯನ್ನು ವೇಶ್ಯಾವಾಟಿಕೆಗಾಗಿ ಉಂಡ್ರಿ ಹಂಡೇವಾಡಿ ರಸ್ತೆಯಲ್ಲಿ ನಿಲ್ಲುವಂತೆ ಒತ್ತಾಯಿಸಿದ್ದನಂತೆ.
ಕಳೆದ ಮೂರು ವರ್ಷಗಳಿಂದ ಕಿರುಕುಳ ನೀಡಲಾಗುತ್ತಿದೆ. ಪತ್ನಿ ಮೇಲೆ ಪತಿ ಪದೇ ಪದೇ ಹಲ್ಲೆ ನಡೆಸಿದ್ದಾನೆ. ಈ ರೀತಿಯ ಕೃತ್ಯ ಅಲ್ಲಿಗೆ ಮುಗಿದಿಲ್ಲ. ಪತಿಯು ತನ್ನ ಇಬ್ಬರು ಸ್ನೇಹಿತರನ್ನು ಗ್ರಾಹಕರನ್ನಾಗಿ ಮಾಡಿಕೊಂಡಿದ್ದಾನೆ. ಸ್ನೇಹಿತರಿಂದ ತಲಾ ಮೂರು ಸಾವಿರ ರೂ. ಪಡೆದಿದ್ದಾನೆ. ಪತಿಯು ಹೆಂಡತಿಯನ್ನು ತನ್ನ ಸ್ನೇಹಿತರೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯಿಸಿದ್ದನು. ಆತನ ಸ್ನೇಹಿತರಿಬ್ಬರೂ ಸಂತ್ರಸ್ತೆಯ ಇಚ್ಛೆಗೆ ವಿರುದ್ಧವಾಗಿ ಅವಳೊಂದಿಗೆ ಅಸಹಜ ಲೈಂಗಿಕ ಕ್ರಿಯೆವನ್ನು ನಡೆಸಿದ್ದರು. ನಂತರ ಇಬ್ಬರೂ ಸೇರಿ ಈ ಮಹಿಳೆಗೆ ಕಿರುಕುಳ ನೀಡುತ್ತಿದ್ದರು