Breaking News

ವಿಕ್ರಮ್ ಲ್ಯಾಂಡರ್​ಗೆ ಬಿಡಿಭಾಗಗಳ ಪೂರೈಕೆ.. ಚಂದ್ರಲೋಕಕ್ಕೂ ಹಬ್ಬಿದ ಬೆಳಗಾವಿ ಕೀರ್ತಿ

Spread the love

ಬೆಳಗಾವಿ: ಚಂದ್ರಯಾನ 3 ಯಶಸ್ಸಿನಲ್ಲಿ ಬೆಳಗಾವಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದು, ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ ಆಂಡ್ ಟೆಕ್ನಾಲಜಿ ಕಂಪನಿಯು ವಿಕ್ರಮ್​ ಲ್ಯಾಂಡರ್​ಗೆ ಬಿಡಿಭಾಗಗಳನ್ನು ಪೂರೈಕೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಚಂದ್ರಲೋಕಕ್ಕೂ ಹರಡುವಂತೆ ಮಾಡಿದೆ.

ಇಡೀ ವಿಶ್ವವೇ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ವಿಕ್ರಮ್​ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಅಂಗಳಕ್ಕೆ ಇಳಿಯುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೊಸ ಮೈಲಿಗಲ್ಲು ನಿರ್ಮಿಸಿದೆ. ಇನ್ನು ಚಂದ್ರಯಾನ 3 ಕ್ಕೆ ಕೆಲವು ಬಿಡಿ ಭಾಗಗಳನ್ನು ಪೂರೈಕೆ ಮಾಡಿದ್ದು ಬೆಳಗಾವಿಯ ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ ಆಯಂಡ್ ಟೆಕ್ನಾಲಜಿ ಕಂಪನಿ. ಇದು ಕುಂದಾನಗರಿ ಜನ ಮತ್ತಷ್ಟು ಹೆಮ್ಮೆ ಪಡುವಂತೆ ಮಾಡಿದೆ.

ಇನ್ನು, ಈ ಕಂಪನಿಯ ಎಂಡಿ ದೀಪಕ್​ ಧಡೋತಿ ಈಟಿವಿ ಭಾರತ ಜೊತೆಗೆ ಮಾತನಾಡಿ, “ಚಂದ್ರಯಾನ-3 ಯಶಸ್ಸು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಿಂದ ಬರೆಯುವ ದಿನ. ಬಹಳ ಖುಷಿಯಾಗುತ್ತಿದೆ. ರಾಕೆಟ್​ಗೆ ಕ್ರಯೋಜನಿಕ್, ವಿಕ್ರಮ್ ಲ್ಯಾಂಡರ್​ಗೆ ಕ್ರಿಟಿಕಲ್ ಹೈಡ್ರೋಲಿಕ್ ಹೆಸರಿನ ಸೆನ್ಸಾರ್ ನೀಡಿದ್ದೆವು. ನಾವು ಕಳುಹಿಸಿರುವ ಸೆನ್ಸಾರ್​ಗಳು ಸೋಲಾರ್ ಪ್ಯಾನಲ್ ಓಪನ್ ಆಗಲು ಬಳಕೆ ಆಗುತ್ತವೆ. ಸದ್ಯ ವಿಕ್ರಮ್ ಲ್ಯಾಂಡರ್ ಚಲನವಲನ ಎಲ್ಲವೂ ಸೆನ್ಸಾರ್ ಮೇಲೆ ನಡೆಯುತ್ತಿದೆ. ಇಸ್ರೋ ಜೊತೆಗೆ 16 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಚಂದ್ರಯಾನ-2 ರಲ್ಲೂ ಕೂಡ ಬಿಡಿಭಾಗಗಳನ್ನ ಪೂರೈಸಿದ್ದೆವು. ಮುಂದೆ ಗಗನಯಾನಕ್ಕೂ ನಮ್ಮಲ್ಲಿ ಬಿಡಿ ಭಾಗಗಳು ತಯಾರು ಆಗುತ್ತಿವೆ” ಎಂದು ಮಾಹಿತಿ ಹಂಚಿಕೊಂಡರು.

ಭರತೇಶ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಯಾಟ್​ಲೈಟ್ ಲ್ಯಾಬ್: ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರದ ಬಗ್ಗೆ ಅಧ್ಯಯನ ಮಾಡಲು ಅನುಕೂಲ ಆಗಲಿ ಎಂಬ ಉದ್ದೇಶದಿಂದ ಬೆಳಗಾವಿ ತಾಲೂಕಿನ ಶಿಂಧೊಳ್ಳಿಯ ಭರತೇಶ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅತ್ಯಾಧುನಿಕ ಸ್ಯಾಟ್​ಲೈಟ್ ಲ್ಯಾಬ್​ಅನ್ನು ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ ಆಯಂಡ್ ಟೆಕ್ನಾಲಜಿ ಕಂಪನಿ ನಿರ್ಮಿಸಿದೆ. ಇಲ್ಲಿ ಚಂದ್ರಯಾನ-3 ರ ವಿಕ್ರಮ್​ ಲ್ಯಾಂಡರ್ ಯಾವ ರೀತಿ ಕೆಲಸ ಮಾಡುತ್ತದೆ ಎಂಬ ಮಾದರಿಯನ್ನೂ ಪ್ರದರ್ಶನಕ್ಕೆ ಇಡಲಾಗಿತ್ತು


Spread the love

About Laxminews 24x7

Check Also

ಮಹಾನ್ ನಾಯಕರೊಬ್ಬರು ಮುಖ್ಯಮಂತ್ರಿ ಆಗಬೇಕು ಎಂಬ ಮಹದಾಸೆಯಿಂದ ಸರ್ಕಾರಉರುಳಿಸಲು ಸಾವಿರ ಕೋಟಿ ತೆಗೆದಿಟ್ಟಿದ್ದಾರೆ: ಯತ್ನಾಳ

Spread the love ದಾವಣಗೆರೆ: ಮಹಾನ್ ನಾಯಕರೊಬ್ಬರು ಮುಖ್ಯಮಂತ್ರಿ ಆಗಬೇಕು ಎಂಬ ಮಹದಾಸೆಯಿಂದ ರಾಜ್ಯ ಸರ್ಕಾರವನ್ನು ಉರುಳಿಸಲು ಸಾವಿರ ಕೋಟಿ ತೆಗೆದಿಟ್ಟಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ