ನವದೆಹಲಿ : ಪ್ರತಿ ವರ್ಷ ಒಂದಲ್ಲ ಒಂದು ಕಾರಣದಿಂದ ದಿನಬಳಕೆಯ ವಸ್ತುಗಳ ದರ ಸ್ವಲ್ಪ ಸಮಯದವರೆಗೆ ಏರಿಕೆ ಕಾಣುತ್ತಲೇ ಇರುತ್ತದೆ.
ಇತ್ತೀಚೆಗೆ ಟೊಮೆಟೊ ಬೆಲೆ ಗಗನಕ್ಕೇರಿತ್ತು. ಈ ಬೆನ್ನಲ್ಲೇ ಇದೀಗ ಈರುಳ್ಳಿ ದರದಲ್ಲಿ ಹೆಚ್ಚಳ ಕಂಡುಬಂದಿದೆ. ಈಗಾಗಲೇ ಬೆಲೆ ಏರಿಕೆ ತಡೆಗೆ ಸರ್ಕಾರ ಕ್ರಮಕೈಗೊಂಡಿದ್ದು, ಗ್ರಾಹಕರಿಗೆ ಮಾತ್ರ ಇನ್ನೂ ಪ್ರಯೋಜನ ತಲುಪಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಹೌದು, ದೇಶೀಯ ಮಾರುಕಟ್ಟೆಯಲ್ಲಿ ಲಭ್ಯತೆ ಹೆಚ್ಚಿಸಲು ಈರುಳ್ಳಿ ರಫ್ತಿನ ಮೇಲೆ ಶೇ.40 ರಷ್ಟು ಸುಂಕ ವಿಧಿಸಲು ಕೇಂದ್ರ ನಿರ್ಧರಿಸಿದ್ದರೂ ಈರುಳ್ಳಿ ಬೆಲೆ ಇನ್ನೂ ಕಡಿಮೆಯಾಗಿಲ್ಲ. ಸರ್ಕಾರದ ಅಂಕಿ – ಅಂಶಗಳ ಪ್ರಕಾರ, ಶನಿವಾರದಂದು ದೆಹಲಿಯಲ್ಲಿ ತರಕಾರಿ ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆಜಿ ಈರುಳ್ಳಿಯು 37 ರೂ.ಗೆ ಮಾರಾಟವಾಗಿದೆ. ಭೋಪಾಲ್, ಬೆಂಗಳೂರು ಮತ್ತು ಜೈಪುರದಂತಹ ನಗರಗಳಲ್ಲಿ ಮಾರಾಟಗಾರರು ಮತ್ತು ಸ್ಥಳೀಯರು ಈರುಳ್ಳಿ ಬೆಲೆ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವಾರದಲ್ಲಿ ಸಗಟು ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿಯು 12 ರೂ. ಗೆ ಮಾರಾಟವಾಗುತ್ತಿತ್ತು. ಇದೀಗ ದಿಢೀರ್ ದರ ಏರಿಕೆಯಾಗಿದೆ. ನಾಸಿಕ್‌ನಲ್ಲಿ ಅಕಾಲಿಕ ಮಳೆಯಿಂದ ಈರುಳ್ಳಿ ಪೂರೈಕೆ ಕುಂಠಿತವಾಗಿದ್ದು, ಬೆಲೆ ಮೇಲೆ ಪರಿಣಾಮ ಬೀರಿದೆ.
Laxmi News 24×7