Breaking News

ಮುತ್ತಯ್ಯ ಮುರಳೀಧರನ್‌ ಧಾರವಾಡದಲ್ಲಿ ತಂಪು ಪಾನೀಯ ಮತ್ತು ಕ್ಯಾನ್ ತಯಾರಿಸುವ ಕಂಪನಿ ಸ್ಥಾಪಿಸಲು ಯೋಜಿಸಿದ್ದು, ಇದೀಗ ಇಲ್ಲಿನ ಪರಿಸರವಾದಿಗಳು ಉದ್ಯಮಕ್ಕೆ ವಿರೋಧ

Spread the love

ಧಾರವಾಡ: ಶ್ರೀಲಂಕಾದ ಮಾಜಿ ಸ್ಪಿನ್‌ ಬೌಲರ್ ಮುತ್ತಯ್ಯ ಮುರಳೀಧರನ್‌ ಅವರು ಧಾರವಾಡದಲ್ಲಿ ಸ್ಥಾಪನೆ ಮಾಡಲು ಮುಂದಾಗಿರುವ ತಂಪು ಪಾನೀಯ ಉದ್ಯಮಕ್ಕೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗಿದೆ. ಪರಿಸರವಾದಿ ಸುರೇಶ್ ಹೆಬ್ಳೀಕರ್ ನೇತೃತ್ವದಲ್ಲಿ ವಿರೋಧ ವ್ಯಕ್ಯವಾಗಿದ್ದು, ತಂಪು ಪಾನೀಯ, ಎನರ್ಜಿ ಡ್ರಿಂಕ್ ಹಾಗೂ ಅವುಗಳ ಕ್ಯಾನ್ ತಯಾರಿಸುವ ಕಂಪನಿ ಸ್ಥಾಪಿಸಲು ಮೆ.ಸಿಲೋನ್ ಬಿವರೇಜ್ ಕ್ಯಾನ್ ಪ್ರೆವೈಟ್ ಲಿಮಿಟೆಡ್ ಕಂಪನಿ ಸ್ಥಾಪನೆಗೆ ಮುತ್ತಯ್ಯ ಮುರಳಿಧರನ್‌ ಮುಂದಾಗಿದ್ದರು.

ಕಂಪನಿ ಅಡಿ 900 ಕೋಟಿ ಹೂಡಿಕೆಗೆ ಧಾರವಾಡ ತಾಲೂಕಿನ ಮುಮ್ಮಿಗಟ್ಟಿಯಲ್ಲಿ ಸ್ಥಳ ಫೈನಲ್ ಮಾಡಿದ್ದರು. ಎಫ್‌ಎಂಸಿಜಿ ಘಟಕದ ಅಡಿ ಘಟಕ ಸ್ಥಾಪನೆಗೆ ಈಗಾಗಲೇ ಬಹುತೇಕ ಸರ್ಕಾರ ಒಪ್ಪಿಕೊಂಡಿದೆ. ಕೆಲ ಷರತ್ತುಗಳಿಗೆ ಸರ್ಕಾರ ಒಪ್ಪಿಗೆ ಕೂಡಾ ನೀಡಿದೆ. ಷರತ್ತಿನ ಪ್ರಕಾರ ನಿತ್ಯ 20 ಲಕ್ಷ ಲೀಟರ್ ನೀರು ಪೂರೈಕೆಯಾಗಬೇಕು. ಇಷ್ಟು ಪ್ರಮಾಣದ ನೀರಿಗೆ ಬೇಡಿಕೆ ಇಟ್ಟಿರೋ ಕಂಪನಿ ನಮಗೆ ಬೇಕಾ ಎಂದು ಹೆಬ್ಳೀಕರ್ ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸರವಾದಿ ಸುರೇಶ್​ ಹೆಬ್ಳೀಕರ್​ ನೇತೃತ್ವದಲ್ಲಿ ವಿರೋಧ ವ್ಯಕ್ತವಾಗಿದೆ.

20 ಲಕ್ಷ ಲೀಟರ್​ ನೀರು ನಿತ್ಯ 15 ಲಕ್ಷ ಜನರಿಗೆ ಕೊಡಬಹುದು. ಧಾರವಾಡದಲ್ಲಿ ಸ್ಥಳೀಯ ಜಲಮೂಲ ಇಲ್ಲದಾಗಿದೆ. ಹೀಗಿರುವಾಗ ಇಷ್ಟೊಂದು ನೀರು ಬೇಡುವ ಉದ್ಯಮ ಬೇಡ ಎನ್ನುವ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಮುತ್ತಯ್ಯ ಮುರಳೀಧರನ್ ಫ್ಯಾಕ್ಟರಿ ಸ್ಥಾಪನೆಗೆ ಕಂಟಕ ಎದುರಾಗೋ ಸಾಧ್ಯತೆಯಿದೆ


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ