Breaking News

ಲೋಕಸಭೆ ಚುನಾವಣೆಗೆ ಮೊದಲು ಅಥವಾ ನಂತರ ಕಾಂಗ್ರೆಸ್ ಸರ್ಕಾರ ಪತನ ಖಚಿತ: ಯತ್ನಾಳ್

Spread the love

ವಿಜಯಪುರ: ರಾಜ್ಯದಲ್ಲಿ ಆಡಳಿತ ಹಿಡಿದ ಕಾಂಗ್ರೆಸ್​ ಪಕ್ಷ ಮೂರು ತಿಂಗಳಿನ ಹಿಂದಿದ್ದ ಹಾಗೆ ಇಲ್ಲ.

ಇನ್ನು ಆರು ತಿಂಗಳಲ್ಲಿ ಪಕ್ಷದ ಹಣೆಬರಹ ಏನಾಗಲಿದೆ ಎಂಬುದನ್ನು ನೀವೇ ನೋಡಿ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದರು. ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್​​ ಅಧಿಕಾರಕ್ಕೆ ಬಂದಮೇಲೆ ಭ್ರಷ್ಟಾಚಾರ ವ್ಯಾಪಕವಾಗಿದೆ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಓರ್ವ ಗುತ್ತಿಗೆದಾರ ಡಿಸಿಎಂ ಡಿಕೆಶಿ ಅವರಿಗೆ ಸವಾಲು ಹಾಕಿದ್ದಾರೆ. ನೀವು ಎಲ್ಲ ಗುತ್ತಿಗೆದಾರರಲ್ಲಿ ಶೇ 15 ಕಮಿಷನ್​ ಕೇಳಿದ್ದೀರಿ. ಈ ಬಗ್ಗೆ ನಿಮ್ಮ ಗುರುಗಳಾದ ಅಜ್ಜಪ್ಪಯ್ಯ ಅವರ ಮಠಕ್ಕೆ ಬಂದು ಪ್ರಮಾಣ ಮಾಡಿ ಎಂದು ಸವಾಲು ಎಸೆದಿದ್ದಾರೆ. ಆದರೆ ಡಿಕೆಶಿ ಇನ್ನೂ ಉತ್ತರಿಸಿಲ್ಲ ಎಂದರು.

ಈ ಹಿಂದೆ ಈಶ್ವರಪ್ಪನವರ ಮೇಲೆ ಆಪಾದನೆ ಬಂದಾಗ ಅವರು ನಿರಪರಾಧಿಯಾಗಿದ್ದರೂ ರಾಜೀನಾಮೆ ನೀಡಿದ್ದರು. ಇದೇ ರೀತಿಯ ನಿರ್ಧಾರವನ್ನು ಸಿದ್ದರಾಮಯ್ಯ ತೆಗೆದುಕೊಳ್ಳುವರೇ?. ಗುತ್ತಿಗೆದಾರರು ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ. ನೈತಿಕತೆ ಇದ್ದರೆ ಕೂಡಲೇ ಡಿಕೆಶಿ​ ರಾಜಿನಾಮೆ ನೀಡಬೇಕು ಎಂದು ಹೇಳಿದರು.

ಬೆಂಗಳೂರು ಮಹಾನಗರದಲ್ಲಿ ಸಿಎಂ ಅವರದ್ದು ಏನೂ ನಡೀತಿಲ್ಲ. ಡಿಕೆಶಿ ಎಲ್ಲ ಶಾಸಕರುಗಳ ಬಾಯಿ ಮುಚ್ಚಿಸಿ ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ಗುತ್ತಿಗೆದಾರರು ಹೇಳುತ್ತಿದಾರೆ. ಸಿಎಂ ಅಸಹಾಯಕತೆ ತೋರಿಸುತ್ತಿದ್ದಾರೆ. ಕಮಿಷನರ್​ ಗ್ರೇಡ್​ಗೆ ಅರ್ಹತೆ ಇಲ್ಲದವರನ್ನು ಆ ಹುದ್ದೆಗೆ ನೇಮಕ ಮಾಡಿದ್ದಾರೆ. ಇದರ ಉದ್ದೇಶ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸುವುದೇ ಆಗಿದೆ. ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್​ ಈ ರೀತಿಯ ಕೆಟ್ಟ ವರ್ತನೆಯನ್ನು ಜಿಲ್ಲೆಯಲ್ಲಿ ನಡೆಸುತ್ತಿದ್ದಾರೆ. 5 ವರ್ಷಗಳ ಕಾಲ ಸರ್ಕಾರ ಆಡಳಿತದಲ್ಲಿರುತ್ತದೆ ಎಂದು ಅವರು ಭಾವಿಸಿದ್ದಾರೆ.

ಆದರೆ​ ಸರ್ಕಾರ ಲೋಕಸಭೆ ಚುನಾವಣೆಗೆ ಮೊದಲು ಅಥವಾ ನಂತರ ಪತನಗೊಳ್ಳುವುದು ಖಚಿತ. ನೀವು ಮನೆಗೆ ಹೋಗುವುದು ನಿಶ್ಚಿತ. ಇಂದು ರಾಜ್ಯದಲ್ಲಿ ವರ್ಗಾವಣೆ ದಂಧೆ, ಪಂಚ ಗ್ಯಾರಂಟಿ ಯೋಜನೆಯಲ್ಲಿ ಮೋಸ, ಶಾಸಕರಲ್ಲಿನ ಅಸಮಾಧಾನ ಹಾಗೂ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡದೇ ಇರುವುದು ಕಾಂಗ್ರೆಸ್​ ಪತನಕ್ಕೆ ಕಾರಣವಾಗಲಿದೆ. ಈ ಗಾಗಲೇ 135 ಶಾಸಕರ ಪೈಕಿ ಸಚಿವರಾಗಿದ್ದವರನ್ನು ಹೊರತುಪಡಿಸಿ ಉಳಿದ ಶಾಸಕರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆ ಇನ್ನೂ ಎರಡು ಮೂರು ತಿಂಗಳಲ್ಲಿ ಕಾಂಗ್ರೆಸ್​ ಸರ್ಕಾರ ಪತನಗೊಳ್ಳಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಭವಿಷ್ಯ ನುಡಿದರು.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ