Breaking News

ಫೋರ್ಜರಿ ಮಾಡಿದ್ದ ಬಸವತೀರ್ಥ ಮಠದ ಸ್ವಾಮೀಜಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ DC ಆದೇಶ

Spread the love

ಬೀದರ್, (ಆಗಸ್ಟ್ 09): ಕೋರ್ಟ್​ ತೀರ್ಪು (Court Verdict) ಫೋರ್ಜರಿ ಮಾಡಿದ್ದ ಹುಮ್ನಾಬಾದ್(humnabad) ತಾಲೂಕಿನ ಬಸವತೀರ್ಥ ಮಠದ  ಸ್ವಾಮೀಜಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಬೀದರ್ ಜಿಲ್ಲಾಧಿಕಾರಿ (Bidar DC) ಆದೇಶಿಸಿದ್ದಾರೆ. ಭೂವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದ(ಕೆಎಟಿ ) ತೀರ್ಪನ್ನು ತಿದ್ದಿದ್ದ ಪ್ರಕರಣಕ್ಕೆ  ಬಸವತೀರ್ಥ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ತಹಶೀಲ್ದಾರ್​​ಗೆ ಜಿಲ್ಲಾಧಿಕಾರಿ ಗೋಂವಿದರೆಡ್ಡಿ ಸೂಚನೆ ನೀಡಿದ್ದಾರೆ.

ದೂರುದಾರ ಚಂದ್ರಕಾಂತ ಜಲಾದಾರ, ಸ್ವಾಮೀಜಿ ನಡುವೆ ಭೂವಿವಾದಕ್ಕೆ ಸಂಬಂಧಿಸಿದಂತೆ 2017ರ ನವೆಂಬರ್ 17ರಂದು ಕೆಎಟಿಯ ಅಧಿಕೃತ ತೀರ್ಪನ್ನು ಬಸವತೀರ್ಥ ಮಠದ ಸ್ವಾಮೀಜಿ ಫೋರ್ಜರಿ ಮಾಡಿ ಸಿಕ್ಕಿಬಿದ್ದಿದ್ದರು. ಇದೀಗ ಕೋರ್ಟ್ ಆದೇಶದಂತೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಹುಮ್ನಾಬಾದ್ ತಹಶೀಲ್ದಾರ್​ಗೆ ಬೀದರ್ ಡಿಸಿ ಗೋಂವಿದರೆಡ್ಡಿ ಆದೇಶಿಸಿದ್ದಾರೆ.ಸಿದ್ಧಲಿಂಗ ಸ್ವಾಮಿ ಕೋರ್ಟ್​ನ ತೀರ್ಪನ್ನು ಫೋರ್ಜರಿ 5-12-2017ರಂದು ಜಿಲ್ಲಾಧಿಕಾಗಳಿಗೆ ಅರ್ಜಿ ಸಲ್ಲಿಸಿ ತೀರ್ಪಿನಲ್ಲಿ ಇಲ್ಲದೇ ಇರುವುದನ್ನು ಸೇರಿಸಿರುವುದು ದೃಢಪಟ್ಟಿದ್ದು, ಕರ್ನಾಟಕ ಹೈಕೋರ್ಟ್​ ಕಲಬುರಗಿ ಪೀಠ ಕ್ರಮ ಜರುಗಿಸುವಂತೆ ನಿರ್ದೆಶಿಸಿರುವಂತೆ ಹುಮನಾಬಾದ್​ನ ಬಸವತೀರ್ಥ ಮಠದ ಗುರು ಚನ್ನಬಸಪ್ಪಯ್ಯ ಮಠಾಧಿಪತಿಗಳು ಡಾ. ಸಿದ್ದಲಿಂಗ ಸ್ವಾಮಿ ವಿರುದ್ಧ ದಂಡ ಸಂಹಿತೆ ಕಲಂ 466 ಮತ್ತ ಅನ್ವಯವಾಗುವಂತೆ ಇತರೆ ಕಾನೂನಿ ಸೆಕ್ಷನ್​ಗಳ ಪ್ರಕಾರ ಸಂಬಂಧಿಸಿದ ಪೊಲೀಸ್​ ಠಾಣೆಯಲ್ಲಿ ಕ್ರಿಮಿನಲ್​ ಮೊಕದ್ದಮೆ ಕೂಡಲೇ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ