Breaking News

ಇನ್ಮುಂದೆ ಕನ್ನಡ ಸೇರಿದಂತೆ ಈ ಪ್ರಾದೇಶಿಕ ಭಾಷೆಯಲ್ಲೂ ಪಡೆಯಬಹುದು ಫೋನ್​ ಪೇ ಪೇಮೆಂಟ್​ ನೋಟಿಫಿಕೇಶನ್​

Spread the love

ಬೆಂಗಳೂರು: ಡಿಜಿಟಲ್​ ಪೇಮೆಂಟ್​ ಪ್ಲಾಟ್​​ಫಾರ್ಮ್​​ನಲ್ಲಿ ಜನಸಾಮಾನ್ಯರ ಜನಪ್ರಿಯ ತಾಣವಾಗಿರುವ ಫೋನ್​ಪೇ ಇದೀಗ ಮತ್ತಷ್ಟು ವ್ಯಾಪಾರಿ ಸ್ನೇಹಿಯಾಗುವತ್ತ ಹೆಜ್ಜೆ ಇಟ್ಟಿದೆ.

ಈ ಹಿಂದೆ ವ್ಯಾಪಾರಿಗಳಿಗೆ ಗ್ರಾಹಕರ ಪೇಮೆಂಟ್​ ಇತಿಹಾಸವನ್ನು ಸುಲಭವಾಗಿ ತಿಳಿಯುವ ಉದ್ದೇಶದಿಂದ ಪಾವತಿ ಕುರಿತು ಸ್ಮಾರ್ಟ್​ ಸ್ಪೀಕರ್​ ನೋಟಿಫಿಕೇಶನ್​ ಅನ್ನು ಪರಿಚಯಿಸಿತು. ಇಷ್ಟು ದಿನ ಇಂಗ್ಲಿಷ್​ನಲ್ಲಿ ಈ ನೋಟಿಫಿಕೇಶನ್​ ಧ್ವನಿ ಕೇಳಿ ಬರುತ್ತಿತ್ತು. ಆದರೆ, ಇದೀಗ ಪ್ರಾದೇಶಿಕ ಭಾಷೆಗಳಲ್ಲೂ ಪರಿಚಯಿಸಿದೆ.

ಈ ಸ್ಮಾರ್ಟ್​ ಸ್ಪೀಕರ್​ ಇನ್ಮುಂದೆ ಹಣದ ವಾಹಿವಾಟಿನ ಮಾಹಿತಿಯನ್ನು ಕನ್ನಡ, ತಮಿಳು, ಮಲಯಾಳಂ, ತೆಲುಗಿನಲ್ಲಿ ನೀಡಲು ಸಿದ್ಧವಾಗಿದೆ. ಶೀಘ್ರದಲ್ಲೇ ಮರಾಠಿ ಸೇರಿದಂತೆ ಇನ್ನಿತರ ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆ ಮಾಡುವ ಸಿದ್ಧತೆಯನ್ನು ಕಂಪನಿ ನಡೆಸಿದೆ.

ವರ್ನಾಕ್ಯುಲರ್​(ಭಾಷೆ) ವಾಯ್ಸ್​ ನೋಟಿಫಿಕೇಶನ್ ಮೂಲಕ ಇದೀಗ ವ್ಯಾಪಾರಿಗಳು ತಮ್ಮ ಗ್ರಾಹಕರ ಹಣದ ವಹಿವಾಟಿನ ಮಾಹಿತಿಯನ್ನು ತಮ್ಮ ಭಾಷೆಗಳಲ್ಲಿ ಪಡೆಯುವ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದರಿಂದ ಅವರು ಪೇಮೆಂಟ್​ ಕುರಿತಾದ ವಿವರಗಳ ಧೃಢೀಕರಣಕ್ಕೆ ಗ್ರಾಹಕರ ಸ್ಕ್ರೀನ್​ ನಲ್ಲಿ ನೋಡುವ ಅವಶ್ಯಕತೆ ಎದುರಾಗುವುದಿಲ್ಲ. ಜೊತೆಗೆ ತಮ್ಮ ಭಾಷೆಗಳಲ್ಲೇ ಕೇಳುವುದರಿಂದ ಅವರಿಗೆ ಮತ್ತಷ್ಟು ಖಾತ್ರಿ ದೊರಕಲಿದೆ ಎಂದು ಸಂಸ್ಥೆ ತಿಳಿಸಿದೆ.

ಸದ್ಯ ಈ ಪೋನ್​ ಪೇ ಸ್ಮಾರ್ಟ್​ ಸ್ಪೀಕರ್​ ಭಾರತದ ಉದ್ಯಮದಲ್ಲಿ ಹೆಚ್ಚು ಮನ್ನಣೆ ಪಡೆದಿದ್ದು, ವ್ಯಾಪಾರಿಗಳು ಶೇ 90ರರಷ್ಟು ಬಳಕೆ ಮಾಡುತ್ತಿದ್ದಾರೆ. ಇದೀಗ ಭಾಷೆಗಳ ಸೌಲಭ್ಯ ಮತ್ತಷ್ಟು ವ್ಯಾಪಾರಿಗಳನ್ನು ಸೆಳೆಯಲಿದೆ. ವ್ಯಾಪಾರಿಗಳು ತಮ್ಮ ಬ್ಯುಸಿನೆಸ್​ ಆಪ್​​ ಮೂಲಕ ಯಾವುದೇ ಹೆಚ್ಚುವರಿ ಪಾವತಿ ಇಲ್ಲದೇ ಈ ಭಾಷಾ ಸೌಲಭ್ಯದ ಸೆಟ್ಟಿಂಗ್​​ ಪಡೆಯಬಹುದಾಗಿದೆ.

ಹೀಗೆ ಸೆಟ್​ ಮಾಡಿ: ಇನ್ನು ವ್ಯಾಪಾರಿಗಳು ಹೇಗೆ ಈ ಪ್ರಾದೇಶಿಕ ಭಾಷಾ ಆಯ್ಕೆಯನ್ನು ಈ ಫೋನ್​ ಪೇ ಸ್ಮಾರ್ಟ್​ ಸ್ಪೀಕರ್​ನಲ್ಲಿ ಪಡೆಯಬಹುದು ಎಂಬುದರ ಕುರಿತು ಸುಲಭ ಸೂಚನೆಗಳು ಇಲ್ಲಿವೆ.

ವ್ಯಾಪಾರಿಗಳು ತಮ್ಮ ಫೋನ್​ಪೇ ಬ್ಯುಸಿನೆಸ್​ ಆಯಪ್ ಅನ್ನು ತೆರೆಯಬೇಕು, ಇಲ್ಲಿ ಹೋಂ ಸ್ಕ್ರೀನ್​ನ ಸ್ಮಾರ್ಟ್​ ಸ್ಪೀಕರ್​ ಸೆಕ್ಷನ್​ಗೆ ಭೇಟಿ ನೀಡಿ, ಅಲ್ಲಿ ಲಾಕ್ವೆಜ್​ ಬಾರ್​ನಲ್ಲಿ ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಬಹುದು. ನೀವು ಆಯ್ಕೆ ಮಾಡಿದ ಭಾಷೆ ಸ್ಮಾರ್ಟ್​ ಸ್ಪೀಕರ್​ ಸಾಧನದಲ್ಲಿ ಡೌನ್​ಲೋಡ್​ ಆಗಲಿದ್ದು, ಈ ಸಾಧನವೂ ಹೊಸ ಅಪ್​ಡೇಟ್​ ಭಾಷೆಯೊಂದಿಗೆ ರೀಬೂಟ್​​ ಆಗುತ್ತದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ