Breaking News

ವೀಸಾ – ಪಾಸ್‌ಪೋರ್ಟ್ ಇಲ್ಲದ ವಿದೇಶಿ ಪ್ರಜೆ ಬಂಧನ

Spread the love

ಧರ್ಮಶಾಲಾ(ಹಿಮಾಚಲ ಪ್ರದೇಶ): ಕಾಂಗ್ರಾ ಜಿಲ್ಲೆಯ ಗ್ಲೋಬಲ್ ಸಿಟಿ ಎಂದು ಕರೆಯಲ್ಪಡುವ ಮೆಕ್ಲಿಯೋಡ್‌ಗಂಜ್‌ನಲ್ಲಿ ಮಾನ್ಯವಾದ ವೀಸಾ ಮತ್ತು ಪಾಸ್‌ಪೋರ್ಟ್ ಹೊಂದಿರದ ವಿದೇಶಿ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಾಹಿತಿಯ ಪ್ರಕಾರ ಈ ವಿದೇಶಿ ಪ್ರಜೆ 2021 ರಿಂದ ಮೆಕ್ಲಿಯೋಡ್‌ಗಂಜ್‌ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಕಾಂಗ್ರಾ ಪೊಲೀಸರು ವೀಸಾ ಮತ್ತು ಪಾಸ್‌ಪೋರ್ಟ್ ಕೇಳಿದಾಗ ಈ ವಿದೇಶಿ ಪ್ರಜೆಯ ಬಳಿ ಮಾನ್ಯವಾಗಿರುವ ವೀಸಾ ಅಥವಾ ಪಾಸ್‌ಪೋರ್ಟ್ ಇರಲಿಲ್ಲ. ಧರ್ಮಶಾಲಾದ ಮೆಕ್ಲಿಯೋಡ್‌ಗಂಜ್‌ನಲ್ಲಿ ವೀಸಾ ಅಥವಾ ಪಾಸ್‌ಪೋರ್ಟ್ ಇಲ್ಲದೇ ಈ ವಿದೇಶಿ ವ್ಯಕ್ತಿ ಇಷ್ಟು ದಿನ ಹೇಗೆ? ವಾಸಿಸುತ್ತಿದ್ದರು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಮುಖ್ಯವಾಗಿ ಮೆಕ್ಲಿಯೋಡ್‌ಗಂಜ್ ಟಿಬೆಟಿಯನ್ ಧಾರ್ಮಿಕ ಮುಖಂಡ ದಲೈ ಲಾಮಾ ಅವರ ನಿವಾಸವಾಗಿದೆ. ಇದರೊಂದಿಗೆ ಮೆಕ್ಲಿಯೋಡ್‌ಗಂಜ್‌ನಲ್ಲಿ ಪ್ರಸಿದ್ಧ ಬೌದ್ಧ ದೇವಾಲಯವೂ ಇಲ್ಲಿದೆ. ಈ ದೇವಾಲಯವನ್ನು ನೋಡಲು ಪ್ರತಿವರ್ಷ ಸಾವಿರಾರು ವಿದೇಶಿ ಪ್ರಜೆಗಳು ಮೆಕ್ಲಿಯೋಡ್‌ಗಂಜ್‌ಗೆ ಬರುತ್ತಾರೆ. ಈ ಸಮಯದಲ್ಲಿಅನೇಕ ಬಾರಿ ಈ ವಿದೇಶಿ ಪ್ರಜೆಗಳು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರ ಬೋಧನೆಗಳಲ್ಲಿ ಭಾಗವಹಿಸುತ್ತಾರೆ. ಸದ್ಯ ವಿದೇಶಿ ಪ್ರಜೆಯೊಬ್ಬ ವೀಸಾ ಮತ್ತು ಪಾಸ್‌ಪೋರ್ಟ್ ಇಲ್ಲದೇ ಮೆಕ್ಲಿಯೋಡ್‌ಗಂಜ್‌ನಿಂದ ಸಿಕ್ಕಿಬಿದ್ದಿದ್ದಾನೆ. ಹೀಗಾಗಿ ಗುಪ್ತಚರ ಸಂಸ್ಥೆಗಳು ಕ್ರಿಯಾಶೀಲವಾಗಿವೆ. ವಿದೇಶದಿಂದ ಭಾರತಕ್ಕೆ ಬರುವವರ ಮೇಲೆ ಪೊಲೀಸರು ಸೇರಿದಂತೆ ಗುಪ್ತಚರ ಸಂಸ್ಥೆಗಳು ನಿಗಾ ಇಡಲಿವೆ.

ಅಮೆರಿಕದ ನಿವಾಸಿ: ಪ್ರಕರಣವನ್ನು ದೃಢಪಡಿಸಿದ ಜಿಲ್ಲಾ ಕಾಂಗ್ರಾ ಎಸ್​ಪಿ ಹಿತೇಶ್ ಲಖನ್‌ಪಾಲ್ ‘ಮಾನ್ಯ ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೇ ವಿದೇಶಿ ಪ್ರಜೆಯೊಬ್ಬರು ಮೆಕ್ಲಿಯೋಡ್‌ಗಂಜ್​ನಲ್ಲಿ ವಾಸಿಸುತ್ತಿದ್ದಾರೆ ಎಂಬ ರಹಸ್ಯ ಮಾಹಿತಿ ನಮ್ಮ ಪೊಲೀಸರಿಗೆ ದೊರೆತಿತ್ತು. ಬಳಿಕ ಈ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ. ವಿದೇಶಿ ಪ್ರಜೆಯ ಹೆಸರು ಮ್ಯಾಕ್ ಟೇಲರ್ ಹೈಟ್(28). ಅವರು ಮೂಲತಃ ಅಮೆರಿಕದವರು. ಯಾವುದೇ ಮಾನ್ಯವಾದ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಹೊಂದಿಲ್ಲ. 2021ರಿಂದ ಅವರು ಮೆಕ್ಲಿಯೋಡ್‌ಗಂಜ್‌ನಲ್ಲಿ ವಾಸಿಸುತ್ತಿದ್ದರು. ಪೊಲೀಸರು ಸೆಕ್ಷನ್ 14ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ’ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

ಒಂದು ದಿನ ಪೊಲೀಸ್​ ಕಸ್ಟಡಿಗೆ: ಬಂಧಿತ ಈ ವಿದೇಶಿ ಪ್ರಜೆಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್‌ಪಿ ಹಿತೇಶ್ ಲಖನ್‌ಪಾಲ್ ತಿಳಿಸಿದ್ದಾರೆ. ಬಳಿಕ ಕಾಂಗ್ರಾ ಪೊಲೀಸರು ನ್ಯಾಯಾಲಯದಿಂದ ಒಂದು ದಿನದ ಕಸ್ಟಡಿ ಪಡೆದಿದ್ದಾರೆ. ವಿದೇಶಿ ಪ್ರಜೆಯು ಪೊಲೀಸರಿಗೆ ತಿಳಿಸಿರುವ ಯಾವುದೇ ಮಾಹಿತಿಯನ್ನು ಕ್ರಾಸ್ ವೆರಿಫಿಕೇಶನ್‌ಗಾಗಿ ಅಮೆರಿಕ ರಾಯಭಾರ ಕಚೇರಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ಆತ ನಿಜವಾಗಿ ಅಮೆರಿಕದ ನಿವಾಸಿಯೇ ಅಥವಾ ಇಲ್ಲವೇ ಎಂಬ ಬಗ್ಗೆಯೂ ಕಾಂಗ್ರಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ ತಾನು ಬೌದ್ಧ ಧರ್ಮದ ಅನುಯಾಯಿ ಎಂದು ಹೇಳಿಕೊಂಡಿದ್ದು, ಅದಕ್ಕಾಗಿಯೇ ಮೆಕ್ಲಿಯೋಡ್‌ಗಂಜ್‌ನಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.


Spread the love

About Laxminews 24x7

Check Also

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ ‌ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘ ಪ್ರತಿಭಟನೆ

Spread the loveಬೆಳಗಾವಿ ;ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ