Home / ರಾಜಕೀಯ / ಖಾನಾಪೂರ- ಗೋವಾ ರಾಜ್ಯ ಹೆದ್ದಾರಿಯ ರುಮೇವಾಡಿ ಕ್ರಾಸ್ ಬಳಿ ಈ ಸರ್ಕಸ್ ನಲ್ಲಿ ಇತ್ತೀಚೆಗೆ ಒಂದು ಜೀವಹಾನಿ ಕೂಡಾವಾಗಿದೆ.

ಖಾನಾಪೂರ- ಗೋವಾ ರಾಜ್ಯ ಹೆದ್ದಾರಿಯ ರುಮೇವಾಡಿ ಕ್ರಾಸ್ ಬಳಿ ಈ ಸರ್ಕಸ್ ನಲ್ಲಿ ಇತ್ತೀಚೆಗೆ ಒಂದು ಜೀವಹಾನಿ ಕೂಡಾವಾಗಿದೆ.

Spread the love

ನೋಡಿ, ನೋಡಿ ಸರ್ಕಸ್ ನೋಡಿ ಅದು ಎಲ್ಲಿ ಅಂತೀರಾ ಅಲ್ಲೇ ರೀ ನಮ್ಮ ಖಾನಾಪೂರ- ಗೋವಾ ರಾಜ್ಯ ಹೆದ್ದಾರಿಯ ರುಮೇವಾಡಿ ಕ್ರಾಸ್ ಬಳಿ ಈ ಸರ್ಕಸ್ ನಲ್ಲಿ ಇತ್ತೀಚೆಗೆ ಒಂದು ಜೀವಹಾನಿ ಕೂಡಾವಾಗಿದೆ.

ಗೋವಾ ದಿಂದ ಬೆಳಗಾವಿ, ಹಳಿಯಾಳ ದಿಂದ ಬೆಳಗಾವಿಗೆ ಸಂಪರ್ಕಿಸುವ ಈ ಮುಖ್ಯ ರಸ್ತೆ ಯು ಸುಮಾರು ಹತ್ತಾರು ಗ್ರಾಮಗಳಿಗೆ ಸಂಪರ್ಕದ ರಸ್ತೆ ಈ ರಸ್ತೆಯಲ್ಲಿ ಪ್ರತಿದಿನ, ಪ್ರತಿಕ್ಷಣವೂ ಸರ್ಕಸ್ ಮಾಡಿಯೇ ಮುಂದೆ ಹೋಗಬೇಕಾದ ಪರಿಸ್ಥಿತಿ.

ಇದಕ್ಕೆ ಸಂಬಂಧಿತ ಇಲಾಖೆ ಮಾತ್ರ ಜಾನ ಮೌನ ವಹಿಸಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ.ಇವರನ್ನು ಕೇಳುವವರು ಯಾರು,ಈ ರಸ್ತೆಯ ತೆಗ್ಗು ಗುಂಡಿಗಳನ್ನು ಮುಚ್ಚುವವರು ಯಾರು ಸಾರ್ವಜನಿಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೇ ನಾ ? ಅಥವಾ ರಾಜ್ಯ ಹೆದ್ದಾರಿಯ ಅಧಿಕಾರಿಗಳೇ ನಾ ಎಂಬುವ ಪ್ರಶ್ನೆ ಉದ್ಭವಿಸಿದೆ.

ಪ್ರತಿದಿನವೂ ಸಾರ್ವಜನಿಕರು ಚಿಕ್ಕ ಮಕ್ಕಳು, ಸ್ತ್ರೀಯರು ಅಂತೂ ನರಕ ಯಾತ್ರೆ ಅನುಭವಿಸುವ ಪ್ರಸಂಗ ಉದ್ಭವಿಸಿದೆ ಇದಕ್ಕೆ ನಡೆಯುವುತ್ತಿರುವ ಸರ್ಕಸ್ ಗೆ ಪೂರ್ಣ ವಿರಾಮ ನೀಡಿ ತೆಗ್ಗು ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕ ಬೇಡಿಕೆಯಾಗಿದೆ.

ಕಳೆದ ವರ್ಷ ಕೂಡ ಈ ರಸ್ತೆಯ ಮೇಲೆ ಬಹು ರಾಜಕೀಯ ಗತಿಮಾನಗಳ ನಡೆದಿದ್ದವು ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ ಸರಕಾರ ಇತ್ತು ಶಾಸಕರು ಮಾತ್ರ ಕಾಂಗ್ರೆಸ್ ಪಕ್ಷದವರಾಗಿದರು ಈಗ ಶಾಸಕರು ಕೂಡಾ ಬಿಜೆಪಿಯವರೇ ಇದ್ದಾರೆ ಲೋಕಸಭಾ ಸದಸ್ಯರು ಕೂಡ ಬಿಜೆಪಿಯವರು ಇದ್ದಾರೆ ಸರ್ಕಾರ ಮಾತ್ರ ಕಾಂಗ್ರೆಸ್ ಪಕ್ಷದ ಬಂದಿದೆ. ಸಾರ್ವಜನಿಕರು ಮಾತ್ರ ಹಗ್ಗಜಗ್ಗಾಟ ನಡುವೆ ತನ್ನ ಪ್ರಾಣದ ಸರ್ಕಸ್ ನಲ್ಲಿ ಜೀವದ ಭಯದಲ್ಲಿ ನಡೆದಾಡುತ್ತಿದ್ದಾರೆ.


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ