Breaking News

ಡೇಟಿಂಗ್ ಆಯಪ್ ಜಾಲ.. ಮಹಿಳೆ ಮಾತಿಗೆ ಮರುಳಾಗಿ ಕೋಟಿ ಕೋಟಿ ಕಳೆದುಕೊಂಡ

Spread the love

ಚೆನ್ನೈ, ತಮಿಳುನಾಡು: ಸೈಬರ್ ಅಪರಾಧಗಳಿಗೆ ಹೆಸರುವಾಸಿಯಾಗಿರುವ ಉತ್ತರ ರಾಜ್ಯದ ಹಲವು ಗ್ಯಾಂಗ್‌ಗಳು ದೇಶಾದ್ಯಂತ ನಾನಾ ರೀತಿಯಲ್ಲಿ ಅತ್ಯಾಧುನಿಕ ರೀತಿಯಲ್ಲಿ ವಂಚನೆ ನಡೆಸಿ ಸಾರ್ವಜನಿಕರಿಂದ ನಿರಂತರವಾಗಿ ಹಣ ದೋಚುತ್ತಿದ್ದಾರೆ.

ಅಷ್ಟೇ ಅಲ್ಲ ಚೆನ್ನೈ ಮೂಲದ ಚಿನ್ನದ ವ್ಯಾಪಾರಿಯೊಬ್ಬರಿಗೆ ಕೋಟಿಗಟ್ಟಲೆ ವಂಚಿಸಿದ ಪ್ರಕರಣದಲ್ಲಿ ಚೆನ್ನೈ ಸೆಂಟ್ರಲ್ ಕ್ರೈಂ ಬ್ರಾಂಚ್ ಸೈಬರ್ ಕ್ರೈಂ ಪೊಲೀಸರು ಉತ್ತರ ರಾಜ್ಯದ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಡೇಟಿಂಗ್ ಆಯಪ್ ಮೂಲಕ ವಂಚನೆ: ತಮಗೆ ಆದ ವಂಚನೆ ಬಗ್ಗೆ ಚೆನ್ನೈನ ಪಾರ್ಕ್ ಟೌನ್ ನ ಚಿನ್ನದ ವ್ಯಾಪಾರಿಯೊಬ್ಬರು ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಿದ್ದರು. ಡೇಟಿಂಗ್ ಆಯಪ್ ಮೂಲಕ ಹಲವು ಮಹಿಳೆಯರನ್ನು ಭೇಟಿಯಾಗಿದ್ದೇನೆ. ಅದರ ಆಧಾರದ ಮೇಲೆ ಮೈಮಿಲಾಪ್ ಮತ್ತು ಸೋಲ್‌ಮೇಟ್ ಎಂಬ ಆಯಪ್‌ಗಳ ಮೂಲಕ ರೂಪಾ ಎಂಬ ಮಹಿಳೆಯ ಪರಿಚಯವಾಯಿತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ ಪ್ರಕಾರ: ರೂಪಾ ಮತ್ತು ಚಿನ್ನದ ವ್ಯಾಪಾರಿ ಮಧ್ಯೆ ಪ್ರೀತಿ ಬೆಳೆದಿದೆ. ಇದರ ಮೂಲಕ ಉದ್ಯಮಿ ಬಳಿ ಕೈತುಂಬಾ ಹಣ ಇರುವುದು ರೂಪಾಗೆ ಗೊತ್ತಾಗಿದೆ. ಇದರ ನಂತರ, ರೂಪಾ ನಿಮ್ಮ ಹಣವನ್ನು ಹೆಚ್ಚಿಸಲು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಲು ಚಿನ್ನದ ವ್ಯಾಪಾರಿಗೆ ಹೇಳಿದ್ದಾಳೆ. ಆಕೆಯ ಆಕರ್ಷಕ ಮಾತು, ನಿರರ್ಗಳವಾದ ಇಂಗ್ಲಿಷ್ ಮತ್ತು ಹೂಡಿಕೆ ಜ್ಞಾನದಿಂದ ಚಿನ್ನದ ವ್ಯಾಪಾರಿ ಸ್ವಲ್ಪಮಟ್ಟಿಗೆ ಹಣ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ