Breaking News

ಬಿಎಸ್​ಇ ಸೆನ್ಸೆಕ್ಸ್​ ಮತ್ತು ನಿಫ್ಟಿ ಇಂದು ಏರಿಕೆಯಲ್ಲಿ ಕೊನೆಗೊಂಡಿವೆ.

Spread the love

ಮುಂಬೈ : ಮೂರು ದಿನಗಳಿಂದ ನಡೆದಿದ್ದ ದೇಶೀಯ ಷೇರುಪೇಟೆಯಲ್ಲಿನ ಕುಸಿತದ ಪ್ರಕ್ರಿಯೆ ಬುಧವಾರ ಅಂತ್ಯಗೊಂಡಿದೆ.

ಸೆನ್ಸೆಕ್ಸ್, ನಿಫ್ಟಿ ಇಂದು ಏರಿಕೆಯೊಂದಿಗೆ ಮುಕ್ತಾಯಗೊಂಡವು. ಬಿಎಸ್‌ಇಯ 30-ಷೇರುಗಳ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 351.49 ಪಾಯಿಂಟ್‌ಗಳು ಅಥವಾ ಶೇಕಡಾ 0.53 ರಷ್ಟು ಏರಿಕೆಯೊಂದಿಗೆ 66,707.20 ಪಾಯಿಂಟ್‌ಗಳಿಗೆ ಕೊನೆಗೊಂಡಿತು.

ಎನ್‌ಎಸ್‌ಇ ನಿಫ್ಟಿ 97.70 ಪಾಯಿಂಟ್‌ಗಳು ಅಥವಾ ಶೇಕಡಾ 0.5 ರಷ್ಟು ಏರಿಕೆಯೊಂದಿಗೆ 19,778.30 ಪಾಯಿಂಟ್‌ಗಳ ಮಟ್ಟದಲ್ಲಿ ಕೊನೆಗೊಂಡಿತು. ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ ಶೇರುಗಳು ಗರಿಷ್ಠ ಶೇ 15ರಷ್ಟು ಏರಿಕೆಯೊಂದಿಗೆ ಮುಕ್ತಾಯಗೊಂಡಿದೆ. ನಿಫ್ಟಿಯಲ್ಲಿ ಲಾರ್ಸೆನ್ ಮತ್ತು ಟೂಬ್ರೊ ಷೇರುಗಳು ಗರಿಷ್ಠ 3.56 ಶೇಕಡಾ ಗಳಿಕೆಯೊಂದಿಗೆ ಮುಕ್ತಾಯಗೊಂಡವು.

ಹಿಂದಿನ ಮುಕ್ತಾಯದ 66,355.71 ರ ವಿರುದ್ಧ ಇಂದು ಸೆನ್ಸೆಕ್ಸ್ 79 ಪಾಯಿಂಟ್‌ಗಳ ಏರಿಕೆಯೊಂದಿಗೆ 66,434.72 ನಲ್ಲಿ ಪ್ರಾರಂಭವಾಯಿತು ಮತ್ತು ಇಡೀ ದಿನ ಏರಿಕೆಯಲ್ಲಿಯೇ ಇತ್ತು. ಸೆನ್ಸೆಕ್ಸ್​ ಇಂದು ಇಂಟ್ರಾಡೇ ಗರಿಷ್ಠ 66,897.27 ಅನ್ನು ತಲುಪಿತು. ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ದಿನದಲ್ಲಿ ₹ 302.6 ಲಕ್ಷ ಕೋಟಿ ಇದ್ದದ್ದು, ಇಂದು ₹ 303.9 ಲಕ್ಷ ಕೋಟಿಗೆ ಏರಿದೆ. ಹೂಡಿಕೆದಾರರು ಒಂದೇ ದಿನದಲ್ಲಿ ₹ 1.3 ಲಕ್ಷ ಕೋಟಿಗಳಷ್ಟು ಶ್ರೀಮಂತರಾಗಿದ್ದಾರೆ.

ವಲಯವಾರು ಸೂಚ್ಯಂಕಗಳ ಬಗ್ಗೆ ನೋಡುವುದಾದರೆ- ಬಂಡವಾಳ ಸರಕುಗಳು, ಎಫ್‌ಎಂಸಿಜಿ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಿಗೆ ಸಂಬಂಧಿಸಿದ ಸೂಚ್ಯಂಕದಲ್ಲಿ 1-1 ರಷ್ಟು ಜಿಗಿತ ಕಂಡುಬಂದಿದೆ. ಅಂತೆಯೇ, ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಸಹ ಹಸಿರು ಬಣ್ಣದಲ್ಲಿ ಮುಚ್ಚಲ್ಪಟ್ಟವು.

ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಲಾರ್ಸೆನ್ ಮತ್ತು ಟೂಬ್ರೊ ಷೇರುಗಳು ಇಂದು ಗರಿಷ್ಠ 3.30 ಶೇಕಡಾ ಜಿಗಿತದೊಂದಿಗೆ ಮುಕ್ತಾಯಗೊಂಡವು. ಅದೇ ರೀತಿ ಐಟಿಸಿ ಷೇರುಗಳು ಶೇ 2.11, ಸನ್ ಫಾರ್ಮಾ ಶೇ 1.70, ರಿಲಯನ್ಸ್ ಇಂಡಸ್ಟ್ರೀಸ್ ಶೇ 1.65, ಕೋಟಕ್ ಮಹೀಂದ್ರಾ ಬ್ಯಾಂಕ್ ಶೇ 1.12, ಆಕ್ಸಿಸ್ ಬ್ಯಾಂಕ್ ಶೇ 1.10 ಮತ್ತು ಇನ್ಫೋಸಿಸ್ ಶೇ 1.07 ನಲ್ಲಿ ಮುಕ್ತಾಯಗೊಂಡವು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ