ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಾವು ಬೀಳ್ಕೊಡುಗೆ ನೀಡುತ್ತೇವೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಅನಾರೋಗ್ಯದ ನಡುವೆಯೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಖಾಸಗಿ ಹೋಟೆಲ್‍ನ ಸಭೆಯಲ್ಲಿ ತಮ್ಮ ಪುತ್ರರೂ ಆದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೊಂದಿಗೆ ಭಾಗವಹಿಸಿದ್ದ ಅವರು, ಪ್ರಧಾನಮಂತ್ರಿಯವರಿಗೆ ನಾವು ಬೀಳ್ಕೊಡುಗೆ ನೀಡುತ್ತೇವೆ ಎಂದಿದ್ದಾರೆ.
ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಈ ಸಭೆ ಅಗತ್ಯವಿದೆ. ಪ್ರಧಾನಮಂತ್ರಿಯವರ ಶಾಸನಗಳು ಜನರಿಗೆ ಮಾರಕವಾಗಿದೆ. ರೈತರು, ಕಾರ್ಮಿಕರು, ಯುವಜನರಿಗೆ ರಕ್ಷಣೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಸಭೆ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ನಂತರ ಹಿರಿಯ ನಾಯಕರ ಜೊತೆ ನಿಂತು ಫೊಟೋ ತೆಗೆಸಿಕೊಂಡು ಸಭೆಗೆ ತೆರಳಿದ್ದಾರೆ. ಪ್ರತೀ ಹಂತದಲ್ಲೂ ಲಾಲು ಪ್ರಸಾದ್ ಯಾದವ್ ಅಂತು ಗಮನ ಸೆಳೆಯುವುದು ಸಾಮಾನ್ಯವಾಗಿದೆ.
Laxmi News 24×7