Breaking News

ರಾಜ್ಯದಲ್ಲಿ ಕಳೆದ ವರ್ಷ ಸುಮಾರು 440 ಕೋಟಿ ರೂಪಾಯಿ ಬೆಳೆವಿಮೆ EX CM BOMMAI ಹಾವೇರಿ ಜಿಲ್ಲೆ ಪಡೆದಿದೆ.

Spread the love

ಹಾವೇರಿ: ರಾಜ್ಯದಲ್ಲಿ ಅತಿಹೆಚ್ಚು ಬೆಳೆವಿಮೆ ಪಡೆಯುವ ಜಿಲ್ಲೆ ಹಾವೇರಿ. ಜಿಲ್ಲೆ ಕಳೆದ ವರ್ಷ ಸುಮಾರು 440 ಕೋಟಿ ರೂಪಾಯಿ ಬೆಳೆವಿಮೆ ಪಡೆದಿದೆ.

ಜಿಲ್ಲೆ ಕಳೆದ ವರ್ಷ ಸುಮಾರು 440 ಕೋಟಿ ರೂಪಾಯಿ ಬೆಳೆವಿಮೆ ಪಡೆದಿದೆ. ಪ್ರತಿವರ್ಷ ಇಲ್ಲಿಯ ರೈತರು ಬೆಳೆಗಳಿಗೆ ಬೆಳೆವಿಮೆ ಮಾಡಿಸುತ್ತಾರೆ. ಉತ್ತಮವಾಗಿ ಮಳೆ ಬಂದು ಬೆಳೆ ಬಂದರೆ ಬೆಳೆವಿಮೆ ಬರುವುದಿಲ್ಲ. ಆದರೆ, ಸರಿಯಾಗಿ ಮಳೆಬಾರದೆ ಬೆಳೆಬಾರದ ವರ್ಷಗಳಲ್ಲಿ ಬೆಳೆವಿಮೆ ಸ್ವಲ್ಪಮಟ್ಟಿನ ಸಹಾಯವಾಗುತ್ತೆ.

ಮುಂಗಾರು ಆರಂಭವಾಗುತ್ತಿದ್ದಂತೆ ಬೆಳೆವಿಮಾ ಕಂಪನಿಗಳು ಟೆಂಡರ್ ಹಾಕುವ ಮೂಲಕ ಬೆಳೆವಿಮೆಗೆ ಅವಕಾಶ ಮಾಡಿಕೊಡುತ್ತವೆ. ಆದರೆ, ಪ್ರಸ್ತುತ ವರ್ಷ ಹವಾಮಾನ ಆಧಾರಿತ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಯಾವುದೇ ಇನ್ಶೂರೆನ್ಸ್​ ಕಂಪನಿಗಳು ಮುಂದೆ ಬಂದಿಲ್ಲ. ಈಗಾಗಲೇ ಮುಂಗಾರು ಮಳೆ ವಿಳಂಬದಿಂದ ಕೆಂಗಟ್ಟ ರೈತರಿಗೆ ಬೆಳೆವಿಮೆಗಳು ಟೆಂಡರ್ ಹಾಕಲು ಮುಂದೆ ಬರದಿರುವುದು ಮತ್ತಷ್ಟು ಆತಂಕಕ್ಕೆ ಸಿಲುಕಿಸಿದೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಬೆಳೆದ ಅಡಕೆ, ಮಾವು, ಶುಂಠಿ ಸೇರಿ ಮೆಣಸಿನಕಾಯಿ ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆವಿಮೆ ಟೆಂಡರ್ ಹಾಕಲು ವಿಮಾ ಕಂಪನಿಗಳು ಮುಂದೆ ಬಂದಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಾರಿ ಮುಂಗಾರು ಮಳೆ ಸರಿಯಾದ ಪ್ರಮಾಣದಲ್ಲಿ ಆಗದೇ ಇರುವುದು ವಿಮಾ ಕಂಪನಿಗಳು ಹಿಂದೇಟು ಹಾಕುವುದಕ್ಕೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ