Breaking News
Home / ಹುಬ್ಬಳ್ಳಿ / ಜಿಂಕೆ‌‌ಗಳ ಕಾಟದಿಂದ ಹಗಲು ರಾತ್ರಿ ಎನ್ನದೆ ರೈತರು ಜಮೀನು ಕಾಯುತ್ತಿದ್ದಾರೆ.

ಜಿಂಕೆ‌‌ಗಳ ಕಾಟದಿಂದ ಹಗಲು ರಾತ್ರಿ ಎನ್ನದೆ ರೈತರು ಜಮೀನು ಕಾಯುತ್ತಿದ್ದಾರೆ.

Spread the love

ಹುಬ್ಬಳ್ಳಿ : ಕಳೆದ ವರ್ಷ ಅತಿವೃಷ್ಟಿಯಾಗಿ ರೈತರಿಗೆ ಬರೆ ಎಳೆದರೆ. ಈ ವರ್ಷ ಮುಂಗಾರು ಸರಿಯಾಗಿ ಆಗದೆ ರೈತರು ಸಂಕಷ್ಟದಲ್ಲಿ ಇರುವ ಬೆನ್ನಲ್ಲೇ ಅಷ್ಟೋ ಇಷ್ಟೋ ಬೆಳೆದ ಬೆಳೆಗೆ ಕಾಡು ಪ್ರಾಣಿಗಳ ಕಂಟಕ ಎದುರಾಗಿದೆ.

ಇದೀಗ ಮುಂಗಾರು ಬೆಳೆ ಉಳಿಸಿಕೊಳ್ಳಲು ಧಾರವಾಡ ಜಿಲ್ಲೆಯ ಅನ್ನದಾತರು ಬಿಯರ್​ ಬಾಟಲಿ ಮೊರೆ ಹೋಗಿದ್ದಾರೆ.

ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಟಿ, ಮುಳ್ಳೊಳ್ಳಿ, ಯರಗುಪ್ಪಿ, ಚಿಕ್ಕನೇರ್ತಿ, ಯರಿನಾರಾಯಣಪುರ ಸೇರಿದಂತೆ ಬಹುತೇಕ ಹಳ್ಳಿಗಳ ರೈತರ ಜಮೀನುಗಳಲ್ಲಿ ಜಿಂಕೆಗಳ ಹಾವಳಿ ಜೋರಾಗಿದೆ. ಹಗಲು ರಾತ್ರಿ ಎನ್ನದೆ ರೈತರು ಜಮೀನು ಕಾಯುತ್ತ ಕುಳಿತಿದ್ದಾರೆ. ಆದರೂ ಜಿಂಕೆಗಳ ಹಿಂಡು ಬೆಳೆದ ಬೆಳೆ ತಿಂದು ಹೋಗುತ್ತಿವೆ. ಇವುಗಳ ಕಾಟ ಅತಿಯಾಗಿರುವ ಕಾರಣ ರೈತರು ಸ್ಥಳೀಯ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ‌. ಆದರೂ ಯಾವುದೇ ಪ್ರಯೋಜನವಾಗಿಲ್ಲ.

ಇದರಿಂದ ಕಂಗಾಲಾಗಿದ್ದ ರೈತರು ರಸ್ತೆ ಬದಿ ಕುಡಿದು ಬಿಸಾಡಿದ ಬಿಯರ್ ಬಾಟಲಿ ಆಯ್ದು ತಂದು ಕಟ್ಟಿಗೆಗೆ ನೇತು ಹಾಕಿದ್ದಾರೆ. ಗಾಳಿಗೆ ತೂಗಾಡುವಾಗ ಬಿಯರ್ ಬಾಟಲಿಗಳು ಒಂದಕ್ಕೊಂದು ಬಡಿದಾಗ ಬರುವ ಶಬ್ದದಿಂದ ಜಿಂಕೆಗಳು ಬೆದರಿ ಜಮೀನಿಗೆ ಬಾರದೆ ಇರಲು ಈ ಉಪಾಯ ಹುಡುಕಿಕೊಂಡಿದ್ದಾರೆ. ಶೇಂಗಾ, ಹೆಸರು, ಉದ್ದು, ಸೋಯಾಬಿನ್ ಬೆಳೆಯನ್ನು ದಿನನಿತ್ಯ ಜಿಂಕೆಗಳ ಕಾಟದಿಂದ ಕಾಯುತ್ತ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ರೈತ ಬೀರಪ್ಪ ಎಂಬುವರು ಕಾಡಿನಿಂದ ನಾಡಿಗೆ ಜಿಂಕೆಗಳು ಬಂದು ಸಂಪೂರ್ಣ ಬೆಳೆ ನಾಶ ಮಾಡಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿಲ್ಲ. ಸರ್ಕಾರ ಸಹ ಈ ಬಗ್ಗೆ ಗಮನಹರಿಸುತ್ತಿಲ್ಲ. ಮುಂದೆ ನಾವು ಏನು ಮಾಡುವುದು ಎಂಬುದು ತಿಳಿದಿಲ್ಲ. ಈಗಷ್ಟೇ ಸಾಲ ಮಾಡಿ ಬೀಜ, ಗೊಬ್ಬರ ಹಾಕಿ ಬಿತ್ತನೆ ಮಾಡಿದ್ದೇವೆ. ಇನ್ನೇನು ಬೆಳೆ ಮೇಲೆ ಬರುತ್ತಿದ್ದಂತೆ ಬೆಳೆಗಳನ್ನು ಜಿಂಕೆಗಳು ತಿನ್ನುತ್ತಿರುವುದರಿಂದ ಬೆಳೆಯೇ ಸಂಪೂರ್ಣ ನಾಶವಾಗಿದೆ. ಹೀಗಾಗಿ ಅರಣ್ಯ ಇಲಾಖೆ ಜಿಂಕೆ ಓಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಹುಬ್ಬಳ್ಳಿ: ಸೊಳ್ಳೆ ನಿಯಂತ್ರಣಕ್ಕಾಗಿ ಫಾಗಿಂಗ್‌

Spread the love ಹುಬ್ಬಳ್ಳಿ: ಮಳೆಗಾಲ ಪ್ರಾರಂಭವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಹಾಗೂ ಸೊಳ್ಳೆ ಹೆಚ್ಚಾಗುವ ಸಾಧ್ಯತೆಯಿದೆ. ಮುಂಜಾಗ್ರತಾ ಕ್ರಮವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ