Breaking News

ಕ್ವಾರಂಟೈನ್ ನಲ್ಲಿರುವ ಮಹಾರಾಷ್ಟ್ರಕ್ಕೆ  ವಲಸೆ ಹೋಗಿದ್ದ ರಾಜ್ಯದ ಕಾರ್ಮಿಕರ ಮಕ್ಕಳಿಗೆ ಆಟಿಕೆಯ ಸಾಮಗ್ರಿಗಳನ್ನು ನೀಡಲಾಯಿತು.

Spread the love

ಯಮಕನಮರಡಿ: ಕ್ವಾರಂಟೈನ್ ನಲ್ಲಿರುವ ಮಹಾರಾಷ್ಟ್ರಕ್ಕೆ  ವಲಸೆ ಹೋಗಿದ್ದ ರಾಜ್ಯದ ಕಾರ್ಮಿಕರ ಮಕ್ಕಳಿಗೆ ಯಮಕನಮರಡಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಆಟಿಕೆಯ ಸಾಮಗ್ರಿಗಳನ್ನು ನೀಡಲಾಯಿತು.

ಈ ಸಮಯದಲ್ಲಿ ಆಟಿಕೆ ಸಾಮಗ್ರಿಗಳನ್ನು ಪಡೆದ ಪುಟಾಣಿ ಮಕ್ಕಳ ಮೊಗದಲ್ಲಿ ಸಂತಸ ಕಂಡು ಅಲ್ಲಿದ್ದ ಜನರೆ ಬೆರಾಗಾಗಿದ್ದರು. ಕಳೆದ ಒಂದೂವರೆ ತಿಂಗಳಿಂದ ಲಾಕ್‌ಡೌನ್ ನಿಂದ ನರಕಯಾತನೆ ಅನುಭವಿಸಿದ್ದ ಮಕ್ಕಳು ಆಟಿಕೆ ಸಾಮಗ್ರಿಗಳನ್ನು ಪಡೆದು ಖುಷಿಪಟ್ಟಿದ್ದು ಅಷ್ಟಿಷ್ಟು ಅಲ್ಲ.

ಯಮಕನಮರಡಿಯ ದಡ್ಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ವಾರಂಟೈನ್ ನಲ್ಲಿರುವ ಸುಮಾರು ಸಾವಿರ ವಲಸೆ ಕಾರ್ಮಿಕರನ್ನು ಇಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಕಳೆದ ಮೂರು ದಿನಗಳಿಂದ ಕ್ವಾರಂಟೈನ್ ನಲ್ಲಿರುವ ಇವರಿಗೆ ವಸತಿ, ಊಟದ ವ್ಯವಸ್ಥೆ ಕಲ್ಪಿಸಿರುವ ಶಾಸಕರು ಮಕ್ಕಳಿಗಾಗಿ ಆಟಿಕೆಯ ಸಾಮಾನುಗಳನ್ನು ನೀಡಿ ಪುಟಾಣಿ ಮಕ್ಕಳ‌ ಪ್ರೀತಿಗೆ ಪಾತ್ರರಾಗಿದ್ದಾರೆ.

ಇಲ್ಲಿನ‌ ಅಲದಾಳ ಗೆಸ್ಟ್ ಹೌಸ್ ನಲ್ಲಿರುವ ಕಾರ್ಮಿಕರನ್ನು ನಿನ್ನೆಯಷ್ಟೆ ಭೇಟಿಯಾಗಿದ್ದ ಶಾಸಕರು ಅವರಿಗೆ ಧೈರ್ಯ ತುಂಬಿದ್ದರು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಮನಿಶಾ ರಮೇಶ ಪಾಟೀಲ, ರಾಜು ದರಗಶೆಟ್ಟಿ, ಮಹೇಶ ಕಡಪಟ್ಟಿ, ಕಿರಣಸಿಂಗ್ ರಜಪೂತ, ಪ್ರಕಾಶ ಬಾಗೇವಾಡಿ, ಪಜಲ್ ಮಕಾಂದಾರ, ಸಂತೋಷ ಶಿರಗುಪ್ಪಿ ಸೇರಿ ಇತರರು ‌ಇದ್ದರು.


Spread the love

About Laxminews 24x7

Check Also

ತಮ್ಮ ವಿರುದ್ದ ದಾಖಲಾಗಿರುವ ಎಫ್​ಐಆರ್ ಕುರಿತು ಪ್ರತಿಕ್ರಿಯಿಸಿದಚಿದಾನಂದ ಸವದಿ

Spread the loveಚಿಕ್ಕೋಡಿ (ಬೆಳಗಾವಿ) : ಕಳೆದ ಮೂರು ದಿನಗಳ ಹಿಂದೆ ನಡೆದಿರುವ ಷಡ್ಯಂತ್ರದ ವಿರುದ್ಧ ಅಥಣಿ ಮತಕ್ಷೇತ್ರದ ರೈತಬಾಂಧವರು ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ