ಛಿಂದ್ವಾರಾ, ಮಧ್ಯಪ್ರದೇಶ: ಕೆಲವರು ತಮ್ಮ ಮಕ್ಕಳನ್ನು ಮೊದಲ ಬಾರಿಗೆ ತಬ್ಬಿಕೊಂಡರೆ, ಕೆಲವರು ಅನೇಕ ವರ್ಷಗಳ ನಂತರ ತಮ್ಮ ಕುಡಿಗಳನ್ನು ನೋಡಿ ಸಂತಸದಿಂದ ಕಣ್ಣೀರು ಸುರಿಸುತ್ತಿರುವ ಪ್ರಸಂಗವೊಂದು ಜೈಲಿನಲ್ಲಿ ಕಂಡು ಬಂದಿತು.
ಇನ್ನು ಚಿಕ್ಕ ಮಕ್ಕಳು ತಮ್ಮ ತಂದೆಯ ಮಡಿಲಲ್ಲಿ ಕುಳಿತು ನಿರಾಳವಾಗಿದ್ದರು. ಈ ಮನಕಲುಕುವ ಕ್ಷಣಗಳು ಛಿಂದ್ವಾರಾ ಜಿಲ್ಲಾ ಕಾರಾಗೃಹದೊಳಗೆ ಕಂಡುಬಂದಿತು. ಛಿಂದ್ವಾರಾ ಜಿಲ್ಲಾ ಕಾರಾಗೃಹದ ಆಡಳಿತವು ಕೈದಿಗಳಿಗೆ ತಮ್ಮ ಮಕ್ಕಳನ್ನು ಭೇಟಿ ಮಾಡಲು ಕಾರ್ಯಕ್ರಮ ಆಯೋಜಿಸಿತ್ತು, ಅದಕ್ಕೆ ಸ್ಪರ್ಶ್ ಮೀಟ್ ಎಂದು ಹೆಸರಿಸಲಾಗಿತ್ತು.
ಜೈಲಿನಲ್ಲಿರುವ ಕೈದಿಗಳಿಗೆ ತಮ್ಮ ಮಕ್ಕಳನ್ನು ನೋಡಲು ಮತ್ತು ಭೇಟಿಯಾಗುವ ಅವಕಾಶವನ್ನು ಜೈಲಿನ ಅಧಿಕಾರಿಗಳು ಭಾನುವಾರದಂದು ಕಲ್ಪಿಸಿದ್ದರು. ಈ ಮೂಲಕ ಕೈದಿಗಳು ತಮ್ಮ ಮಕ್ಕಳನ್ನು ಭೇಟಿ ಮಾಡಿ ಭಾವುಕರಾದರು.
Laxmi News 24×7