ಬೆಂಗಳೂರು: ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಎಲ್ಲ ದರೋಡೆಕೋರರು ಒಟ್ಟಿಗೆ ಸೇರುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ದೇಶವನ್ನು ಲೂಟಿ ಮಾಡಿದ ದರೋಡೆಕೋರರು ಒಟ್ಟಾಗಿದ್ದಾರೆ. ಇದು
ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಎಲ್ಲ ದರೋಡೆಕೋರರ ಒಕ್ಕೂಟವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದು ಎರಡು ತಿಂಗಳಾಗಿದೆ. ಬರಗಾಲದ ಛಾಯೆ ಎದುರಾಗಿದೆ. ರೈತರ ಆತ್ಮಹತ್ಯೆ ಹೆಚ್ಚಿದೆ. ಆತಂಕದ ಛಾಯೆ ಹೆಚ್ಚಾಗಿದೆ ಎಂದು ಕಿಡಿ ಕಾರಿದರು.
ಹಿಂದೂ ಕಾರ್ಯಕರ್ತರ ಹಾಗೂ ಜೋಡಿ ಕೊಲೆಯಾಗಿದೆ. ನರೇಂದ್ರ ಮೋದಿ ಅವರನ್ನ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಒಟ್ಟಾಗ್ತಿದ್ದಾರೆ. ಕರ್ನಾಟಕದಲ್ಲಿ ಜಾಮೀನಿನ ಮೇಲಿರುವ ಎಲ್ಲ ಕುಟುಂಬಗಳು ಒಟ್ಟಿಗೆ ಸೇರಿವೆ. ಮತ್ತೆ ಮೋದಿ ಬಂದರೆ ಜೈಲೇ ಗತಿ ಅನ್ನೋದು ಗೊತ್ತಾಗಿದೆ ಎಂದರು