Breaking News

ಬಾಯಿ ಚಪ್ಪರಿಸಿ ಹಾವು ತಿಂದ ಜಿಂಕೆ!, ಹೌಹಾರುವ ವಿಡಿಯೋ ಇಲ್ಲಿದೆ ನೋಡಿ

Spread the love

ವದೆಹಲಿ: ಜಿಂಕೆ ಮಾಂಸಹಾರಿಯೇ..? ಜಿಂಕೆ ಕೇವಲ ಹುಲ್ಲು ತಿಂದು ಬದುಕುತ್ತದೆ ಅಲ್ಲವೇ? ಆದರೆ ಈ ವಿಡಿಯೋ ನೋಡಿದ್ರೆ ನೀವು ಹೌಹಾರುತ್ತೀರಿ. ಏಕೆಂದರೆ ಇಲ್ಲಿ ಜಿಂಕೆಯೊಂದು ಬಾಯಿ ಚಪ್ಪರಿಸಿ ಹಾವೊಂದನ್ನು ತಿನ್ನುತ್ತಿದೆ. ಹೌದು, ಇದು ಆಶ್ಚರ್ಯವಾದರೂ ನಿಜ.

ಜಿಂಕೆ ಹಾವು ತಿನ್ನುತ್ತಿರುವ ವಿಡಿಯೋಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ವಿಡಿಯೋ ನೋಡಿದ ನೆಟಿಜನ್‍ಗಳು ಹೌಹಾರಿದ್ದಾರೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಡಾ.ಸಾಮ್ರಾಟ್ ಗೌಡ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘Yummy crunchy snack’ ಅಂತಾ ವಿಡಿಯೋಗೆ ಕ್ಯಾಪ್ಶನ್ ಸಹ ಬರೆದಿದ್ದಾರೆ.

 

 

 

ಕಾಡಿನಲ್ಲಿ ಹೋಗುವಾಗ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ವಾಹನದಲ್ಲಿ ಹೋಗುತ್ತಿರುವವರು ಈ ಜಿಂಕೆಯನ್ನು ಗಮಿಸಿ ಸ್ಲೋ ಮಾಡುತ್ತಾರೆ. ರಸ್ತೆ ಬದಿ ಜಿಂಕೆ ಏನೋ ತಿನ್ನುತ್ತಿದೆ ಅಂದುಕೊಂಡವರಿಗೆ ಆಶ್ಚರ್ಯ ಉಂಟಾಗಿದೆ. ಜಿಂಕೆ ಬಾಯಿ ಚಪ್ಪರಿಸಿಕೊಂಡು ಹಾವನ್ನು ತಿನ್ನುತ್ತಿದೆ. ಹುಲ್ಲು ತಿನ್ನುವ ಬದಲು ಜಿಂಕೆ ಯಾಕೆ ಹಾವನ್ನು ತಿನ್ನುತ್ತಿದೆ ಅನ್ನೋದೆ ಕೆಲವರಿಗೆ ಗೊಂದಲ ಮೂಡಿಸಿದೆ.

21 ನಿಮಿಷಗಳ ಈ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ.ಜಿಂಕೆಯಾಕೆ ಹಾವು ತಿನ್ನುತ್ತಿದೆ? ಜಿಂಕೆ ಸಸ್ಯಾಹಾರಿಯೇ ಅಥವಾ ಮಾಂಸಹಾರಿಯೇ? ಅಂತಾ ಅನೇಕರು ಪ್ರಶ್ನಿಸಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ