Breaking News

48 ಸಾವಿರದ ಗಡಿಯತ್ತ ಚಿನ್ನ………ತೆರಿಗೆ ಶೇ.12.5 ಹಾಗೂ ಶೇ.3ರಷ್ಟು ಜಿಎಸ್‍ಟಿ ಸಹ ಸೇರಿದೆ.

Spread the love

ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆ ಆರ್ಥಿಕತೆ ಬುಡಮೇಲಾಗಿದ್ದು, ಇದರ ಪರಿಣಾಮ ಚಿನ್ನದ ಮೇಲೂ ಬೀರಿದೆ. ಹೀಗಾಗಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 47,740 ರೂ. ತಲುಪಿದ್ದು, ಬೆಳ್ಳಿ ಪ್ರತಿ ಕೆಜಿಗೆ 48,190 ರೂ.ಗೆ ಏರಿಕೆಯಾಗಿದೆ.

ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್(ಎಂಸಿಎಕ್ಸ್)ನಲ್ಲಿ ಸೋಮವಾರದ ಚಿನ್ನದ ಬೆಲೆ 47,740 ರೂ. ಗಡಿ ದಾಟಿದ್ದು, ಶುಕ್ರವಾರದಿಂದ ಈವರೆಗೆ ಕೇವಲ ಮೂರು ದಿನಗಳಲ್ಲಿ 10 ರೂ.ಹೆಚ್ಚಾಗಿದೆ. ಇಂದು ಪ್ರತಿ 10 ಗ್ರಾಂ. 22 ಕ್ಯಾರೆಟ್ ಚಿನ್ನದ ಬೆಲೆ 46,120 ರೂ.ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 47,740 ರೂ.ಗೆ ಏರಿಕೆಯಾಗಿದೆ. ದೆಹಲಿಯಲ್ಲಿ 48,520 ರೂ.ಗೆ ತಲುಪಿದ್ದು, ಇದರಲ್ಲಿ ಆಮದು ತೆರಿಗೆ ಶೇ.12.5 ಹಾಗೂ ಶೇ.3ರಷ್ಟು ಜಿಎಸ್‍ಟಿ ಸಹ ಸೇರಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರ, ವಿದೇಶಿ ಕರೆನ್ಸಿಗಳ ಆಧಾರದ ಮೇಲೆ ಹಾಗೂ ಸ್ಥಳೀಯ ಟಾರಿಫ್‍ಗಳ ಆಧಾರದ ಮೇಲೆ ಚಿನ್ನದ ಬೆಲೆ ಹೆಚ್ಚಾಗುತ್ತದೆ. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರ ಹೆಚ್ಚಾಗಿರುವುದೇ ಭಾರತದಲ್ಲಿಯೂ ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ.

ಎಂಜೆಲ್ ಬ್ರೋಕಿಂಗ್‍ನ ಡಿವಿಪಿ ಕಮಾಡಿಟೀಸ್ ಮತ್ತು ಕರೆನ್ಸಿ ರಿಸರ್ಚ್‍ನ ಅನುಜ್ ಗುಪ್ತಾ ಈ ಕುರಿತು ಮಾಹಿತಿ ನೀಡಿ, ಚಿನ್ನದ ದರವೂ ಹಿಂದೆಂದಿಗಿಂತಲೂ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಎಂಸಿಎಕ್ಸ್‍ನಲ್ಲಿ ಚಿನ್ನದ ಬೆಲೆ 47.711 ರೂ.ಗೆ ತಲುಪಿದೆ. ಕಳೆದ ವಾರ ಚಿನ್ನದ ದರ ಶೇ.3.42ರಷ್ಟು ಹೆಚ್ಚಾಗುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.

ಏಳು ವರ್ಷಗಳ ಹಿಂದೆ, ಅಂದರೆ ಅಕ್ಟೋಬರ್ 2012ರ ನಂತರ ಇದೀಗ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಸೋಮವಾರದ ದರ ಏಳು ವರ್ಷದ ಹಿಂದಿನ ದಾಖಲೆಯನ್ನು ಮುರಿದಿದೆ. ಅಮೆರಿಕ-ಚೀನಾ ಸಂಬಂಧ ಹಾಗೂ ಅಮೆರಿಕದ ಆರ್ಥಿಕತೆ ಕುಸಿದಿದ್ದರ ಪರಿಣಾಮ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಅಕ್ಟೋಬರ್ 2012ರ ನಂತರ ಇದೀಗ ಗರಿಷ್ಠ ಮಟ್ಟದ ಏರಿಕೆಯಾಗಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.


Spread the love

About Laxminews 24x7

Check Also

ಪ್ರಜಾಪ್ರಭುತ್ವ ಉಳಿವಿಗೆ ದೇಶದ ಜನ ಒಂದಾಗಿ: ಮಲ್ಲಿಕಾರ್ಜುನ ಖರ್ಗೆ

Spread the love ನವದೆಹಲಿ: ಚಳಿಗಾಲದ ಅಧಿವೇಶನದ ವೇಳೆ ಸಂಸತ್ತಿನ ಉಭಯ ಸದನಗಳಿಂದ 146 ಸಂಸದರನ್ನು ಅಮಾನತುಗೊಳಿಸಲಾಗಿದೆ. ಇದು ಕೇಂದ್ರ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ