ಕೊಪ್ಪಳ: ತನ್ನ ಊರಿಗೆ ತೆರಳಲು ಯಾವುದೊಂದು ಬಸ್ ನಿಲ್ಲಿಸದ ಕಾರಣ, ಕೊಪ್ಪಳದಿಂದ – ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್ಗೆ ಮಹಿಳೆಯೊಬ್ಬರು ಕಲ್ಲೆಸೆದ ಘಟನೆ ಕೊಪ್ಪಳದಲ್ಲಿ ಜರುಗಿದೆ.
ಕೊಪ್ಪಳದ ಹೊಸಲಿಂಗಾಪುರ ಬಳಿ ಈ ಘಟನೆ ನಡೆದಿದೆ. ಇಲಕಲ್ಲ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬಾಕೆ ಕೊಪ್ಪಳದ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದರು. ಹುಲಿಗೆಮ್ಮನ ದರ್ಶನ ಪಡೆದು ಲಿಂಗಾಪುರ ಬಳಿ ಬಸ್ಗಾಗಿ ಮಳೆಯಲ್ಲಿ ಕಾದು ಕುಳಿತಿದ್ದ ಲಕ್ಷ್ಮಿಗೆ ತನ್ನ ಊರಿಗೆ ತೆರಳಲು ಯಾವೊಂದು ಬಸ್ ನಿಲ್ಲಿಸದ ಕಾರಣ ಕೋಪ ಬಂದು ಬಸ್ಗೆ ಕಲ್ಲೆಸೆದಿದ್ದಾರೆ. ಪರಿಣಾಮ ಬಸ್ನ ಕಿಟಕಿ ಕೆಳಗಿನ ಗಾಜು ಒಡೆದಿದೆ.
5000 ರೂ ದಂಡ ಕಟ್ಟಿದ ಮಹಿಳೆ: ಕೊಪ್ಪಳ ಘಟಕದ KA-35, F-252 ಬಸ್ನ ಗ್ಲಾಸ್ ಡ್ಯಾಮೇಜ್ ಆದ ಕಾರಣ, ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಗೆ ಬಸ್ ನಿರ್ವಾಹಕರು ಬಸ್ ಅನ್ನು ಪ್ಯಾಸೆಂಜರ್ ಸಮೇತ ಬಸ್ ನಿಲ್ಲಿಸಿ ದೂರು ನೀಡಲು ಮುಂದಾಗಿದ್ದರು. ಆದರೆ ಡಿಪೋ ಮ್ಯಾನೇಜರ್ 5000ರೂ, ದಂಡ ಕೇಳಿದ್ದಾರೆ. ಇಲ್ಲವಾದಲ್ಲಿ ಎಫ್ ಐ ಆರ್ ಮಾಡುವುದಾಗಿ ಲಕ್ಷ್ಮಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಬಳಿಕ ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಪೊಲೀಸರಿಗೆ ಮನವಿ ಮಾಡಿ ಕೊನೆಗೆ 5000 ದಂಡ ಕಟ್ಟಿ ಅದೇ ಬಸ್ಲ್ಲಿ ಲಕ್ಷ್ಮಿ ತೆರಳಿದ್ದಾರೆ.
Laxmi News 24×7