ಜುಲೈ 2 ರಂದು ಬೆಳಗಾವಿ ನಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚಾರಣೆ ಆಚರಿಸಲಾಗುವದು ಎಂದು ಜಿಲ್ಲಾ ಅದ್ಯಕ್ಷ ದೀಲಿಪ ಕುರಂದವಾಡೆ ಹೇಳಿದರು.
ಬೆಳಗಾವಿ ನಗರದಲ್ಲಿ ಜರುಗಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಣಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡುತ್ತಾ ಬೆಳಗಾವಿ ನಗರದಲ್ಲಿ ಅಂತರಾಷ್ಟ್ರೀಯ ಮಟ್ಟದ ಪತ್ರಕರ್ತರ ಸಮ್ಮೇಳನ ಮತ್ತು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚಾರಣೆ ಆಚರಿಸುವ ಕುರಿತು ರೂಪ ರೆಷೆಗಳಂತೆ ಜಿಲ್ಲಾ ಮಟ್ಟದ ಸದಸ್ಯರಿಗೆ ವಿವಿಧ ಸಮಿತಿ ರಚಿಸಿ ಅದರಂತೆ ಕಾರ್ಯನಿರ್ವಹಿಸಲು ಸೂಚಿಸಿದರು
ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಬೆಳಗಾವಿ ನಗರದಲ್ಲಿ ಕಡಿಮೆ ದರದಲ್ಲಿ ಸೈಟ ವಿತರಣೆ ಹಾಗೂ ಸದಸ್ಯರ ಮಕ್ಕಳಿಗೆ ಉನ್ನತ ಶಿಕ್ಷಣದ ಮಾರ್ಗದರ್ಶನ ಕುರಿತು ಚರ್ಚಿಸಲಾಯಿತು.
ವೇದಿಕೆ ಮೇಲೆ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೊಜಿ, ಜಿಲ್ಲಾ ಉಪಾದ್ಯಕ್ಷ ಯಲ್ಲಪ್ಪಾ ತಳವಾರ, ರಾಜಶೇಖರ ಪಾಟೀಲ, ಮಂಜುನಾಥ ಪಾಟೀಲ, ಅರುಣ ಪಾಟೀಲ , ಮಲ್ಲಿಕಾರ್ಜುನ ಗೊಂದಿ ಉಪಸ್ಥಿತರಿದ್ದರು.