Breaking News

ಫ್ಲೈಓವರ್ ಮೇಲೆ ಬೈಕ್​ನಲ್ಲಿ ಹೋಗುತ್ತಿದ್ದ ಅತ್ತೆಗೆ ಚಾಕು ಇರಿದು ಕೊಂದು ಪರಾರಿಯಾದ ಅಳಿಯ!

Spread the love

ವಿಜಯವಾಡ (ಆಂಧ್ರಪ್ರದೇಶ): ಅತ್ತೆಯನ್ನೇ ಅಳಿಯನೋರ್ವ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಈ ಘಟನೆ ವಿಜಯವಾಡದ ಚಿಟ್ಟಿನಗರ ಸಮೀಪ ಇರುವ ಹಾಲಿನ ಕಾರ್ಖಾನೆ ಪಕ್ಕದ ಚನುಮೋಳು ವೆಂಕಟರಾವ್ ಮೇಲ್ಸೇತುವೆ ಮೇಲೆ ಶನಿವಾರ ರಾತ್ರಿ ನಡೆದಿದೆ. ರಾತ್ರಿ 9 ಗಂಟೆ ಸುಮಾರಿಗೆ ರಾಜೇಶ್ (37) ಎಂಬಾತ ನಾಗಮಣಿ (48) ಎಂಬವರನ್ನು ಹತ್ಯೆಗೈದಿದ್ದಾನೆ. ಆರೋಪಿಯ ಪತ್ನಿಯು ವಿಚ್ಛೇದನ ಕೋರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರಿಂದ ಕೋಪಗೊಂಡು ಕೃತ್ಯ ಎಸಗಿದ್ದಾನೆ ಎಂದು ವಿಜಯವಾಡ ಪಶ್ಚಿಮ ಎಸಿಪಿ ಹನುಮಂತ ರಾವ್ ತಿಳಿಸಿದರು.

ವೈಎಸ್​ಆರ್ ಕಾಲೋನಿ ಬ್ಲಾಕ್ ನಂ.68ರಲ್ಲಿ ಗೋಗುಳ ಗುರುಸ್ವಾಮಿ ಮತ್ತು ನಾಗಮಣಿ (50) ದಂಪತಿ ವಾಸವಾಗಿದ್ದಾರೆ. ಇವರಿಗೆ ಜುನ್ಸಿ, ಲಲಿತಾ ಮತ್ತು ಮಣಿ ಎಂಬ ಮೂವರು ಮಕ್ಕಳಿದ್ದು, ಎರಡನೇ ಮಗಳಾದ ಲಲಿತಾಳನ್ನು 15 ವರ್ಷಗಳ ಹಿಂದೆ ಏಕಲವ್ಯನಗರದ ಕುಂಭ ರಾಜೇಶ್ ಎಂಬವನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದ್ರೆ, ಪತಿ- ಪತ್ನಿಯರ ನಡುವೆ ಜಗಳ ನಡೆದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಒಂದು ವರ್ಷದ ಹಿಂದೆ ಲಲಿತಾ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಸದ್ಯಕ್ಕೆ ನ್ಯಾಯಾಲಯದಲ್ಲಿ ಕೇಸ್​ ವಿಚಾರಣೆ ನಡೆಯುತ್ತಿದೆ.

15 ದಿನಗಳ ಹಿಂದೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಆದರೆ ಮುಂದಿನ ವಿಚಾರಣೆ ವೇಳೆ ಡಿವೋರ್ಸ್​ ನೀಡುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಪತ್ನಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಅಳಿಯ ರಾಜೇಶ್, ಅತ್ತೆ ಮತ್ತು ಮಾವನ ವಿರುದ್ಧ ಆಕ್ರೋಶಗೊಂಡಿದ್ದ. ಬಳಿಕ, ಕೊಲೆಗೆ ಸಂಚು ರೂಪಿಸಿದ್ದ. ಗುರುಸ್ವಾಮಿ ಮತ್ತು ನಾಗಮಣಿ ಶನಿವಾರ ರಾತ್ರಿ 8.30ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಸಾಯಿರಾಂ ಥಿಯೇಟರ್‌ಗೆ ತಮ್ಮ ಹಿರಿಮಗಳು ಜುನ್ಸಿಯನ್ನು ಭೇಟಿ ಮಾಡಲು ಹೊರಟಿದ್ದರು. ಈ ವೇಳೆ ಅತ್ತೆ ಮಾವ ಹೋಗುವುದನ್ನು ಕಂಡು ಅವರನ್ನು ಫಾಲೋ ಮಾಡಿದ ಅಳಿಯ, ಚನುಮೋಳು ವೆಂಕಟರಾವ್ ಸೇತುವೆಯ ಮೇಲ್ಭಾಗದಲ್ಲಿ ಹಿಂಬದಿ ಕುಳಿತಿದ್ದ ಅತ್ತೆ ನಾಗಮಣಿ ಚಾಕುವಿನಿಂದ ಇರಿದಿದ್ದಾನೆ. ಕುತ್ತಿಗೆಗೆ ತೀವ್ರ ಗಾಯವಾದ ಕಾರಣ ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಆರೋಪಿ ಪರಾರಿ: ಘಟನೆಯ ಬಳಿಕ ಮಾವ ಗುರುಸ್ವಾಮಿ ಭಯದಿಂದ ಅಲ್ಲಿಂದ ಓಡಿ ಹೋಗಿದ್ದಾರೆ. ಆತನನ್ನು ಕೊಲ್ಲಲು ಅಳಿಯ ಬೆನ್ನಟ್ಟಿ ಹೋಗಿದ್ದು, ಪತ್ತೆಯಾಗಿಲ್ಲ. ರಾಜೇಶ್ ವಾಹನಸಮೇತ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ಕೊತ್ತಪೇಟೆ ಠಾಣೆಯ ಸಿಐ ಸುಬ್ರಹ್ಮಣ್ಯಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಗಮಣಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ರಾಜೇಶ್‌ಗಾಗಿ ಪೊಲೀಸ್ ತಂಡ ಶೋಧ ನಡೆಸುತ್ತಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ