Breaking News

ಬಿಜೆಪಿ ಮಹಾ ಜನಸಂಪರ್ಕ ಅಭಿಯಾನ: ದೇವೇಗೌಡರಿಗೆ ಕೇಂದ್ರ ಸರ್ಕಾರ, ಕ್ಷೇತ್ರದ ಸಾಧನೆಯ ವರದಿ ನೀಡಿದ ಸಂಸದ ತೇಜಸ್ವಿ ಸೂರ್ಯ

Spread the love

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ 9 ವರ್ಷಗಳ ಸೇವಾ ಅವಧಿಯಲ್ಲಿ ಮಾಡಿದ ಕಾರ್ಯಗಳು ಮತ್ತು 2019ರಿಂದ ಬೆಂಗಳೂರು ದಕ್ಷಿಣದಲ್ಲಿ ಮಾಡಿದ ಸಾಧನೆಗಳ ವರದಿಯನ್ನು ಮಾಜಿ ಪ್ರಧಾನಿ ಹೆಚ್.ಡಿ.

ದೇವೇಗೌಡರಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೀಡಿದರು. ಇದೇ ವೇಳೆ ನಮೋ ವಿದ್ಯಾನಿಧಿ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ತಲಾ 10 ಸಾವಿರ ರೂಪಾಯಿ ಶಿಷ್ಯವೇತನವನ್ನು ಹೆಚ್.ಡಿ.ದೇವೇಗೌಡರ ಮೂಲಕ ವಿತರಣೆ ಮಾಡಿಸಿ ಗಮನ ಸೆಳೆದರು.

ಸೂರ್ಯ ಅವರ ಈ ಭೇಟಿಯು ಮಹಾ ಜನ ಸಂಪರ್ಕ ಅಭಿಯಾನದ ಭಾಗವಾಗಿದ್ದು, ಇದರಲ್ಲಿ ಬಿಜೆಪಿಯ ಪ್ರತಿಯೊಬ್ಬ ಸಂಸದರು ಅವರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಿ ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಚರ್ಚಿಸಬೇಕಿದೆ. ಅದರಂತೆ ತೇಜಸ್ವಿ ಸೂರ್ಯ ದೇವೇಗೌಡರ ಜೊತೆ ಮಾತುಕತೆ ನಡೆಸಿ ಕೆಲಕಾಲ ಚರ್ಚಿಸಿದ್ದಾರೆ.

ಬಸವನಗುಡಿಯ ಎನ್‌.ಆರ್‌. ಕಾಲೋನಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನ ಠೇವಣಿದಾರರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ತಂದಿರುವ ಸುಧಾರಣೆಗಳ ಕುರಿತು ಸಂಸದ ಸೂರ್ಯ ಮಾಜಿ ಪ್ರಧಾನಿಗೆ ವಿವರಿಸಿದರು. ಸ್ಥಗಿತಗೊಂಡಿರುವ ರಿಯಲ್ ಎಸ್ಟೇಟ್ ಯೋಜನೆಗಳನ್ನು ಪೂರ್ಣಗೊಳಿಸಲು, ವಿಶೇಷವಾಗಿ ಕನಕಪುರ ರಸ್ತೆಯಲ್ಲಿರುವ ಮಂತ್ರಿ ಸೆರಿನಿಟಿ ಯೋಜನೆಯನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರವು ಸ್ವನಿಧಿಯ ಮೂಲಕ ತಂದ ಮಧ್ಯಸ್ಥಿಕೆಗಳ ಕುರಿತು ಅವರು ಮಾತನಾಡಿದರು.

 ಮಕ್ಕಳಿಗೆ ನಮೋ ವಿದ್ಯಾನಿಧಿ ವಿತರಿಸಿದ ದೇವೇಗೌಡಇದರೊಂದಿಗೆ, ನಗರದ ಅಭಿವೃದ್ಧಿಯ ವಿವಿಧ ಅಂಶಗಳನ್ನು ಚರ್ಚಿಸಿದರು. ನಗರಕ್ಕೆ ಕೇಂದ್ರದ ಕೊಡುಗೆ, ವಿಶೇಷವಾಗಿ ಉಪನಗರ ರೈಲ್ವೆ ಯೋಜನೆ, ನಮ್ಮ ಮೆಟ್ರೋ ನಿರ್ಮಾಣ, ಆಯುಷ್ಮಾನ್ ಭಾರತ್ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂ ವಸತಿ ಯೋಜನೆ) ಕುರಿತು ಹೆಚ್.ಡಿ.ದೇವೇಗೌಡರ ಜೊತೆ ಸೂರ್ಯ ವಿವರಿಸಿದರು.

ಜನೌಷಧಿ ಕೇಂದ್ರಗಳ ಸಂಖ್ಯೆಗೆ ಸಂಬಂಧಿಸಿದಂತೆ ಮತ್ತೊಂದು ಮೈಲಿಗಲ್ಲು. 2019 ರಲ್ಲಿ 14 ರಿಂದ ಶುರುವಾದ ಜನೌಷಧಿ ಕೇಂದ್ರಗಳು ಇದೀಗ ಬೆಂಗಳೂರು ದಕ್ಷಿಣದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಈ ಮಳಿಗೆಗಳು ಜನರಿಗೆ ಸುಮಾರು 50- 90% ಕಡಿಮೆ ವೆಚ್ಚದಲ್ಲಿ ಜೆನೆರಿಕ್ ಔಷಧಿಗಳನ್ನು ಒದಗಿಸುತ್ತವೆ. ಮಾಸಿಕ ಬಿಲ್‌ಗಳಲ್ಲಿ ಸಾಕಷ್ಟು ಉಳಿತಾಯಕ್ಕೆ ಕಾರಣವಾಗುತ್ತವೆ ಎಂದು ತೇಜಸ್ವಿ ಸೂರ್ಯ ಹೇಳಿದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ