ಶಕ್ತಿ ಯೋಜನೆ ಜಾರಿ ಹಿನ್ನೆಲೆ ಕಂಡಕ್ಟರ್‌ನೋರ್ವ ಸೀಟ್ ಮೇಲೆ ನಿಂತು ಪ್ರಯಾಣಿಕರಿಗೆ ಟಿಕೆಟ್ ನೀಡಿರುವ ಪ್ರಸಂಗ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ಪಟ್ಟಣದ ಇಂಗಳೇಶ್ವರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಇಂಗಳೇಶ್ವರ ಮಾರ್ಗವಾಗಿ ವಿಜಯಪುರಕ್ಕೆ ಬಸ್ ಬರುತ್ತಿದ್ದ ಬಸ್ ನಲ್ಲಿ ಈ ಪ್ರಸಂಗ ಆಗಿದೆ. ಈ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರು ಜಾಸ್ತಿಯಾಗಿದ್ದರು.
ಅದಕ್ಕಾಗಿ ನಿಂತುಕೊಳ್ಳಲು ಸ್ಥಳ ಇಲ್ಲದ ಕಾರಣಕ್ಕೆ ಬಸ್‌ನ ಸೀಟ್ ಮೇಲೇರಿ ಕಂಡಕ್ಟರ್ ಟಿಕೆಟ್ ನೀಡಿದ್ದಾನೆ.