Breaking News

ಮದುವೆ ನಿಶ್ಚಯಕ್ಕೆ ಗ್ರಾಮಕ್ಕೆ ಬರುತ್ತಿದ್ದ ಯೋಧ ರೈಲಿನಿಂದ ಬಿದ್ದು ಸಾವು: ಕುಟುಂಬಸ್ಥರ ಆಕ್ರಂದನ

Spread the love

ಬೆಳಗಾವಿ: ವಿವಾಹ ಎಂಬುದು ಎಲ್ಲರಿಗೂ ಸಂತಸದ ಕ್ಷಣ. ವ್ಯಕ್ತಿಯ ಜೀವನದಲ್ಲಿ ಪ್ರಮುಖ ಘಟ್ಟ ಎಂದೇ ಪರಿಗಣಿಸಬಹುದು. ಏಕೆಂದರೆ ಜೀವನ ಸಂಗಾತಿಯನ್ನು ಪಡೆದು ಆಕೆಯೊಂದಿಗೆ ಮುಂದಿನ ಜೀವನ ಕಳೆಯುವುದು ಎಲ್ಲರಿಗೂ ಅವಿಸ್ಮರಣೀಯವೇ.

ಆದರೆ ಇಂತಹ ಶುಭ ಕಾರ್ಯಕ್ಕೆಂದು ತೆರಳುವಾಗ ಮದುವೆ ಆಗಬೇಕಾದ ಹುಡುಗನೇ ನಿಧನನಾಧರೆ ಕುಟುಂಬಕ್ಕೆ ಅಂತಹ ದುಃಖವನ್ನು ಭರಿಸುವುದು ಕಷ್ಟ ಆಗುತ್ತದೆ. ಈ ರೀತಿಯ ಹೃದಯವಿದ್ರಾವಕ ಘಟನೆ ಒಂದು ಬೆಳಗಾವಿಯಲ್ಲಿ ನಡೆದಿದೆ.

ಮದುವೆ ದಿನಾಂಕ ನಿಗದಿ ಮಾಡಲು ಸ್ವಗ್ರಾಮಕ್ಕೆ ಆಗಮಿಸುತ್ತಿದ್ದ ಯೋಧ ಆಕಸ್ಮಿಕವಾಗಿ ರೈಲಿನಿಂದ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿರುವ ಮನಕಲುಕುವ ಘಟನೆ ಪಂಜಾಬ್​ನ ಲೂಧಿಯಾನ ರೈಲು ನಿಲ್ದಾಣದ ಬಳಿ ಗುರುವಾರ (ಜೂನ್​ 8) ನಡೆದಿದೆ. ಗೋಕಾಕ್ ತಾಲೂಕಿನ ಕನಸಗೇರಿ ಗ್ರಾಮದ ಕಾಶಿನಾಥ್ ಶಿಂಧಿಗಾರ (28) ಮೃತ ಯೋಧ.

ಇತ್ತೀಚೆಗಷ್ಟೇ ಕಾಶಿನಾಥ್​ಗೆ ನಿಶ್ಚಿತಾರ್ಥ ಆಗಿತ್ತು. ಮದುವೆಯ ದಿನಾಂಕ ನಿಗದಿ ಮಾಡಲು ಪಾಲಕರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಶಿನಾಥ್​, ಪಂಜಾಬ್​ನಿಂದ ರೈಲು ಮೂಲಕ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದರು. ಆದರೆ, ಮಾರ್ಗಮಧ್ಯೆ ಕಾಲು ಜಾರಿ ರೈಲಿನಿಂದ ಕೆಳಗೆ ಬಿದ್ದು ಉಸಿರು ಚೆಲ್ಲಿದ್ದಾರೆ.

ಸ್ವಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಸರ್ಕಾರಿ ಗೌರವದೊಂದಿಗೆ ಸ್ವಗ್ರಾಮದಲ್ಲೇ ಮೃತ ಯೋಧನ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆದಿದೆ.

 

ವಾಯು ಪಡೆಯ ಯುದ್ಧ ವಿಮಾನಗಳ ಅಪಘಾತದಲ್ಲಿ ಹನುಮಂತರಾವ್ ಸಾರಥಿ ಮರಣ: ಇತ್ತೀಚೆಗೆ (ಜನವರಿ, 28, 2023) ಭಾರತೀಯ ವಾಯು ಪಡೆಯ ಯುದ್ಧ ಜೆಟ್​ಗಳಾದ ಸುಖೋಯ್ 30 ಮತ್ತು ಮಿರಾಜ್ 2000 ವಿಮಾನಗಳು ದೈನಂದಿನ ಅಭ್ಯಾಸಕ್ಕೆ ಗ್ವಾಲಿಯರ್ ವಾಯು ನೆಲೆಯಿಂದ ಟೇಕ್​ ಆಫ್​ ಆಗಿದ್ದವು. ಆದರೆ, ಇದಾದ ಕೆಲ ಹೊತ್ತಿನಲ್ಲೇ ಗ್ವಾಲಿಯರ್ ವಾಯುನೆಲೆಯಿಂದ ಸ್ವಲ್ವ ದೂರದಲ್ಲಿ ಆಕಾಶದಲ್ಲಿ ಅಪಘಾತ ಸಂಭವಿಸಿ, ಪತನಗೊಂಡಿದ್ದವು. ಇದರಲ್ಲಿ ಹನುಮಂತರಾವ್ ಸಾರಥಿ ಸೇರಿ ಮೂವರು ಪೈಲಟ್​ಗಳು ಗಾಯಗೊಂಡಿದ್ದರು.

ಇದರಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದ ಬೆಳಗಾವಿಯ ವಿಂಗ್ ಕಮಾಂಡರ್, 34 ವರ್ಷದ ಹನುಮಂತರಾವ್ ಸಾರಥಿ ಮೃತ ಕೊನೆಯುಸಿರೆಳೆದಿದ್ದರು. ಅಲ್ಲದೇ, ಗಣೇಶಪುರದಲ್ಲಿರುವ ಹನುಮಂತರಾವ್ ಸಾರಥಿ ಮನೆಗೆ ಬೆಳಗಾವಿಯ ವಾಯುಪಡೆ ತರಬೇತಿ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು.

ಬೆಳಗಾವಿಯ ಗಣೇಶಪುರ ನಿವಾಸಿಯಾದ ಹನುಮಂತರಾವ್ ಆರ್​. ಸಾರಥಿ ಅವರು 1987ರ ಅಕ್ಬೋಬರ್​ 28ರಂದು ಜನಿಸಿದ್ದರು. ಬೆಳಗವಿಯಲ್ಲೇ ಅವರ ವಿದ್ಯಾಭ್ಯಾಸ ಮುಗಿಸಿ ಭಾರತೀಯ ವಾಯು ಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನೆಲೆಸಿದ್ದ ಹನುಮಂತರಾವ್ ಸಾರಥಿ ಅವರು ತಂದೆ, ತಾಯಿ, ಹೆಂಡತಿ ಮತ್ತು ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ. ಮೊದಲ ಮಗಳು ಮೂರು ವರ್ಷದವರಾಗಿದ್ದು, ಎರಡನೇ ಮಗ ಒಂದು ವರ್ಷದ ಪುಟ್ಟ ಕಂದ.


Spread the love

About Laxminews 24x7

Check Also

ರಾಜ್ಯದಲ್ಲಿ ವಿವಿಧ ಬೆಳೆಗಳ ಬಿತ್ತನೆ ನಡೆಯುತ್ತಿದ್ದು, ರಾಸಾಯನಿಕ ಗೊಬ್ಬರದ ಬೇಡಿಕೆ ಹೆಚ್ಚಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

Spread the loveಮೈಸೂರು: ಪ್ರಸಕ್ತ ಸಾಲಿಗೆ ರಾಸಾಯನಿಕ ಗೊಬ್ಬರದ ಕೊರತೆಯಿಲ್ಲ. ಆದರೆ, ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಯೂರಿಯಾ ಪೂರೈಕೆಯನ್ನು ಶೇ.50ರಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ