Breaking News

ನೀರು ಪೂರೈಕೆಗೆ ಹಣ ಬಿಡುಗಡೆ ಮಾಡದ ಜಿಲ್ಲಾಡಳಿತ: ಸಗಣಿ, ಗೋಮೂತ್ರದಲ್ಲಿ ಸ್ನಾನಮಾಡಿ ಗ್ರಾ ಪಂ ಅಧ್ಯಕ್ಷರ ಪ್ರತಿಭಟನೆ

Spread the love

ಶಿವಮೊಗ್ಗ: ಕುಡಿವ ನೀರು ಪೂರೈಕೆ‌ಗೆ ಹಣ ಬಿಡುಗಡೆಯಾಗದ ಹಿನ್ನೆಲೆ ನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಮಲಕರ ಶೆಟ್ಟಿ ಎಂಬುವವರು ಸಗಣಿ ಹಾಗೂ ಗೋಮೂತ್ರದಲ್ಲಿ ಸ್ನಾನ ಮಾಡುವ ಮೂಲಕ ಜಿಲ್ಲಾಡಳಿತದ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.

ಕಮಲಕರ ಶೆಟ್ಟಿ ಹೊಸನಗರ ತಾಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನ ರೂಪದಲ್ಲಿ ಸಗಣಿ ಹಾಗೂ ಗೋಮೂತ್ರದಲ್ಲಿ ಸ್ನಾನ ಮಾಡಿ ಜಿಲ್ಲಾಡಳಿತದ ವಿರುದ್ದ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಹೊಸನಗರ ತಾಲೂಕಿನಲ್ಲಿ‌ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ‌ ಉಂಟಾಗಿದೆ. ಇಲ್ಲಿ ತೆರೆದ ಬಾವಿ ಸೇರಿದಂತೆ ನೀರಿನ‌ ಮೂಲಗಳು ಬತ್ತಿ ಹೋಗಿವೆ. ಇದರಿಂದ ಜಿಲ್ಲಾಡಳಿತ ಟ್ಯಾಂಕರ್​ಗಳ ಮೂಲಕ ನೀರು ಸರಬರಾಜು ಮಾಡುವಂತೆ ಸೂಚನೆ ನೀಡಿತ್ತು. ಹೀಗೆ ನೀರು ಪೂರೈಕೆಗಾಗಿ ಪ್ರತಿ ಗ್ರಾಮ ಪಂಚಾಯಿತಿಗೆ 15 ರಿಂದ 20 ಲಕ್ಷ ರೂ‌ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ, ಇದುವರೆಗೂ ಒಂದು ನಯಾಪೈಸೆ ಹಣ ಜಿಲ್ಲಾಡಳಿತದಿಂದ ಬಿಡುಗಡೆಯಾಗಿಲ್ಲ. ಇದರಿಂದ ನೀರು ಪೂರೈಕೆ ಮಾಡಿದ ಟ್ಯಾಂಕ್ ಮಾಲೀಕರು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರ ಮನೆ ಮುಂದೆ ಬಂದು ಹಣ ಕೇಳುತ್ತಿದ್ದಾರೆ.

ಈ ಕುರಿತು ಕಳೆದ ತಿಂಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ನಂತರ ಸಭೆ ನಡೆಸಿದ್ದ ಜಿಲ್ಲಾಡಳಿತ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದರು ಸಹ ಇದುವರೆಗೂ ಹಣ ಬಂದಿಲ್ಲ. ಅಲ್ಲದೇ ಸಭೆ ನಡೆಸಿದ ಬಳಿಕ ಜಿಲ್ಲಾಡಳಿತ ಚುನಾವಣೆ ಕಾರ್ಯದಲ್ಲಿ ನಿರತವಾಗಿತ್ತು. ಈಗ ಟ್ಯಾಂಕ್ ಮಾಲೀಕರು‌ ಹಣಕ್ಕಾಗಿ ಪಿಡಿಸುತ್ತಿರುವುದರಿಂದ ಈ ರೀತಿಯ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಕಮಲಕರ ಶೆಟ್ಟಿ ತಮ್ಮ ಪ್ರತಿಭಟನೆ ಉದ್ದೇಶವನ್ನು ಈ ಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.

ಇವರು ಕಳೆದ ಎರಡು ತಿಂಗಳ ಹಿಂದೆ ಗ್ರಾಮ ಪಂಚಾಯಿತಿಗಳಿಗೆ ನೀರು ಪೂರೈಕೆ ಮಾಡಬೇಕು ಎಂದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಅಪರ ಜಿಲ್ಲಾಧಿಕಾರಿ, ಇನ್ನೂಂದು ಎರಡು ದಿನಗಳಲ್ಲಿ ಹಣ‌ಬ ಬಿಡುಗಡೆ ಮಾಡಲಾಗುವುದು ಎಂಬ ಭರವಸೆಯಿಂದ ಧರಣಿ ಕೈ ಬಿಟ್ಟಿರುವುದಾಗಿ ಕಮಲಕರ ಶೆಟ್ಟಿ‌ ದೂರವಾಣಿಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ