ಹುಬ್ಬಳ್ಳಿ: ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಕಾಂಗ್ರೆಸ್ ಗೆ ಅಧಿಕಾರವಿದೆ. ಏನು ಮಾಡುತ್ತಾರೆ ನೋಡೋಣ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಬಸವರಾಜ್ ಬೊಮ್ಮಾಯಿ, ನಾವು ಎಲ್ಲವನ್ನು ಬದಲಾಯಿಸುತ್ತೇವೆ ಎಂಬುದು ದುರಂಹಂಕಾರದ ಮಾತು. ಇದು ರಿವರ್ಸ್ ಗೇರ್ ಸರ್ಕಾರ. ಕಾಂಗ್ರೆಸ್ ಗ್ಯಾರಂಟಿಗಳಲ್ಲೂ ರಿವರ್ಸ್ ಹೊಡೆಯುತ್ತಿದೆ ಎಂದು ಕಿಡಿಕಾರಿದರು.
ನಾವು ಮಾಡಿದ ಜನಪರ ಕಾನೂನಿನಲ್ಲೂ ರಿವರ್ಸ್ ಹೋಗುತ್ತಿದ್ದಾರೆ. ಇದರ ಪರಿಣಾಮಗಳು ಜನರಿಗೆ ಅರ್ಥವಾಗುತ್ತದೆ. ಇದೊಂದು ರಿವರ್ಸ್ ಗೇರ್ ಸರ್ಕಾರ, ಸೇಡಿನ ಕ್ರಮ ಮಾಡುತ್ತಿದ್ದಾರೆ ಎಂದು ಗುಡುಗಿದರು.
Laxmi News 24×7