ಬೆಳಗಾವಿ: ಜಿಲ್ಲೆಯಲ್ಲಿ 2024-25 ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ ವಿಮಾ ಸಂಸ್ಥೆಯಿಂದ 8,309 ಬೆಳೆ ವಿಮೆ ಪ್ರಸ್ತಾವನೆಗಳು ತಿರಸ್ಕೃತವಾಗಿವೆ.
ರೈತರ ಬೆಳೆ ವಿಮೆಗೆ ನೋಂದಣಿಯಾದ ಪ್ರಸ್ತಾವನೆ ಬೆಳೆ ಸಮೀಕ್ಷೆಯ ದತ್ತಾಂಶಗಳೊಂದಿಗೆ ಹೋಲಿಕೆ ಮಾಡಿ ಸರ್ಕಾರದಿಂದ ಅನುಮೋದನೆಯಾದ ವಿನಾಯಿತಿಗೆ ಅಳವಡಿಸಿ ತಾಳೆ ಆಗಿರುವ ಪ್ರಸ್ತಾವನೆಗಳಿಗೆ ಸಂರಕ್ಷಣೆ ತಂತ್ರಾಅಶದಲ್ಲಿ ವಿಮಾ ಪರಿಹಾರಕ್ಕಾಗಿ ಲೆಕ್ಕ ಹಾಕಲಾಗಿದೆ.ಇವುಗಳಲ್ಲಿ ಮುಂಗಾರು ಹಂಗಾಮಿನ 7,490 ಹಾಗೂ ಹಿಂಗಾರು ಹಂಗಾಮಿನ 819 ಅರ್ಜಿ ತಿರಸ್ಕೃತವಾಗಿ.
ಜಿಲ್ಲೆಯ ತಾಲೂಕು ಕಚೇರಿಗಳು ಹಾಗೂ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕಗಳಲ್ಲಿ ತಿರಸ್ಕೃತ ಅರ್ಜಿದಾರರ ಮಾಹಿತಿ ಪ್ರಕಟಿಸಲಾಗಿದೆ.ವಿಮೆ ಅರ್ಜಿ ತಿರಸ್ಕೃತಗೊಂಡ ರೈತರು 15 ದಿನಗಳೊಳಗೆ ಮರು ಪರಿಶೀಲನೆಗಾಗಿ ಆಕ್ಷೇಪಣೆ ಸಲ್ಲಿಸಬಹುದು. ಇದಕ್ಕಾಗಿ ಪಹಣಿ ಪತ್ರಿಕೆ , ಬೆಂಬಲ ಬೆಲೆ ರಶೀದಿ ಅಥವಾ ಎಪಿಎಂಸಿ ಮಾರಾಟ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಂಬಂಧಿಸಿದ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ,ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಎಚ್.ಡಿ.ಕೋಳೆಕರ್ ತಿಳಿಸಿದ್ದಾರೆ.
Laxmi News 24×7