Breaking News

1ನೇ ತರಗತಿ ದಾಖಲಾತಿಗೆ 60 ದಿನಗಳ ವಿನಾಯಿತಿ – ರಾಜ್ಯ ಸರ್ಕಾರ ಅಧಿಕೃತ ಆದೇಶ

Spread the love

ಬೆಂಗಳೂರು: 1ನೇ ತರಗತಿಗೆ ದಾಖಲಾತಿ ವಯಸ್ಸಿನ ಮಿತಿ ಸಂಬಂಧ ರಾಜ್ಯ ಸರ್ಕಾರ  ಅಧಿಕೃತ ಆದೇಶ ಹೊರಡಿಸಿದೆ.

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿ 60 ದಿನಗಳವರೆಗೆ ಮಿತಿ ಸಡಿಲ  ಮಾಡಿತ್ತು. ಇಂದು ಅಧಿಕೃತವಾಗಿ ಆದೇಶ ಮಾಡಿದೆ. ಈ ಮಿತಿ ಸಡಿಲ ಆದೇಶ 2026-27ನೇ ಸಾಲಿನ ದಾಖಲಾತಿಗೆ ಮಾತ್ರ ಅನ್ವಯ ಆಗುವಂತೆ ಆದೇಶ ಮಾಡಲಾಗಿದೆ.

ಶಾಲೆಯ ಪ್ರಾರಂಭ ಜೂನ್ 1 ರಿಂದ ಅನ್ವಯವಾಗುವಂತೆ 60 ದಿನದ ಅವಧಿಗೆ ಮಗುವಿನ ವಯಸ್ಸು ಲೆಕ್ಕ ಹಾಕಿ ದಾಖಲಾತಿ ಮಾಡಿಕೊಳ್ಳುವಂತೆ ಆದೇಶದಲ್ಲಿ‌ ಉಲ್ಲೇಖ ಮಾಡಲಾಗಿದೆ.
ಮಕ್ಕಳ ಪೋಷಕರು ವಯೋಮಿತಿ ಸಡಿಲಿಕೆಗೆ ಆಗ್ರಹಿಸಿ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಸಿಎಂ, ಡಿಸಿಎಂ, ಶಿಕ್ಷಣ ಸಚಿವರ ಮನೆಗಳಿಗೆ ಪದೇಪದೇ ಹೋಗಿ ಒತ್ತಾಯ ಮಾಡುತ್ತಿದ್ದರು. ಈಗ ಸರ್ಕಾರದ ನಿರ್ಧಾರದಿಂದ ಈ ಮಕ್ಕಳ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.

ಪ್ರತೀ ಬಾರಿಯೂ ಈ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ಕಾನೂನು ತಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ನಿರ್ಧರಿಸಿತ್ತು. ಇದುವರೆಗೆ ಎಲ್‌ಕೆಜಿ, ಯುಕೆಜಿಗೆ ರೆಗ್ಯುಲೇಟರಿ ನಿಯಮ ಇರಲಿಲ್ಲ. ಇದಕ್ಕಾಗಿ ಹೊಸ ಕಾನೂನು ತಂದು ಎಲ್‌ಕೆಜಿ, ಯುಕೆಜಿಯಲ್ಲೇ ದಾಖಲಾತಿಗೆ ವಯೋಮಿತಿ ನಿಗದಿ ಮಾಡಿ ಸ್ಪಷ್ಟತೆ ಕೊಡಲಾಗುವುದು ಎಂದು ಅಧಿವೇಶನದಲ್ಲಿ ಮಧು ಬಂಗಾರಪ್ಪ ತಿಳಿಸಿದ್ದರು. ಇದೀಗ ರಾಜ್ಯ ಸರ್ಕಾರ ಅಧಿಕೃತ ಆದೇಶ ಜಾರಿಗೊಳಿಸಿದೆ.


Spread the love

About Laxminews 24x7

Check Also

ನಾಳೆ ಮಾಜಿ ಸಚಿವ ವಿನಯ್ ಕುಲಕರ್ಣಿ ಭವಿಷ್ಯ – ಯೋಗೇಶ್‌ ಗೌಡ ಕೊಲೆ ಕೇಸ್‌ ತೀರ್ಪು

Spread the loveಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ  ಕೊಲೆ ಪ್ರಕರಣದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ