Breaking News

2nd PUC Result 2026 – 100ಕ್ಕೆ 111 ಅಂಕ ನೀಡಿದ ಪಿಯು ಬೋರ್ಡ್‌!

Spread the love

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಡವಟ್ಟಾಗಿದ್ದು ವಿದ್ಯಾರ್ಥಿಯೊಬ್ಬನಿಗೆ 100ಕ್ಕೆ 111 ಅಂಕವನ್ನು ನೀಡಿ ಪಾಸ್‌ ಮಾಡಲಾಗಿದೆ.

ಹಿಂದಿ  ವಿಷಯದಲ್ಲಿ ವಿದ್ಯಾರ್ಥಿಗೆ 100 ಅಂಕಗಳಿಗೆ 111 ಅಂಕ ನೀಡಲಾಗಿದೆ. ಅಂಕಪಟ್ಟಿಯಲ್ಲಿರುವ ನೋಂದಣಿ ಸಂಖ್ಯೆಯನ್ನು ಹಾಕಿ ಫಲಿತಾಂಶವನ್ನು ಪಬ್ಲಿಕ್‌ ಟಿವಿ ಪರಿಶೀಲಿಸಿದ್ದು ಈಗಲೂ ವೆಬ್‌ಸೈಟ್‌ನಲ್ಲಿ 111 ಅಂಕವನ್ನೇ ತೋರಿಸುತ್ತಿದೆ.

ಹಿಂದಿ ವಿಷಯದಲ್ಲಿ ಥಿಯರಿಯಲ್ಲಿ ವಿದ್ಯಾರ್ಥಿಗೆ 94 ಅಂಕ ಬಂದಿದ್ದರೆ ಕಾಲೇಜು 17 ಆಂತರಿಕ ಅಂಕಗಳನ್ನು ನೀಡಿದೆ. ಇಲ್ಲಿ 80 ಅಂಕಗಳಿಗೆ 94 ಅಂಕ ನೀಡಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ.

ಈ ವಿದ್ಯಾರ್ಥಿಯದ್ದು ಮಾತ್ರ ಅಲ್ಲ ಅನೇಕ ವಿದ್ಯಾರ್ಥಿಗಳ ಫಲಿತಾಂಶವನ್ನು ತಪ್ಪಾಗಿ ಪ್ರಕಟಿಸಿದೆ. 6 ವಿಷಯದಲ್ಲೂ 100 ಕ್ಕಿಂತ ಹೆಚ್ಚು ಅಂಕವನ್ನು ನೀಡಲಾಗಿದೆ. ಓರ್ವ ವಿದ್ಯಾರ್ಥಿಗೆ 600 ಅಂಕಕ್ಕೆ 683 ಅಂಕಗಳನ್ನು ನೀಡಲಾಗಿದೆ. ಅಂಕ ಉತ್ತಮಪಡಿಸಿಕೊಳ್ಳಲು ಮರು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶದಲ್ಲೂ ತಪ್ಪಾಗಿದೆ.

ಈ ಪೈಕಿ ಡಿಜಿಲಾಕರ್‌ನಲ್ಲಿ ಕೆಲವರ ಅಂಕಪಟ್ಟಿ ಸರಿಯಾಗಿ ಬಂದಿದ್ದರೆ ವೆಬ್‌ಸೈಟ್‌ನಲ್ಲಿ ತಪ್ಪಾಗಿದೆ. ಜವಾಬ್ದಾರಿಯುತವಾಗಿ ಫಲಿತಾಂಶ ಪ್ರಕಟಿಸಬೇಕಾದ ಬೋರ್ಡ್‌ ಈ ರೀತಿಯ ತಪ್ಪು, ತಪ್ಪು ಫಲಿತಾಂಶವನ್ನು ಪ್ರಕಟಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಮೂಡಿಸುತ್ತಿದೆ.


Spread the love

About Laxminews 24x7

Check Also

ಡಾಲ್ಮಿಯಾ ಸಿಮೆಂಟ್ ಕಾರ್ಖಾನೆಯಿಂದ ಯಾದವಾಡ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ 16 ಲಕ್ಷ ರೂ. ಮತ್ತು ಕುಲಗೋಡ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ದೇಣಿಗೆ*

Spread the love *ಡಾಲ್ಮಿಯಾ ಸಿಮೆಂಟ್ ಭಾರತ ಲಿ.., ಸಮಾಜಮುಖಿ ಕಾರ್ಯಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಫೀದಾ* *ಮೂಡಲಗಿ*- ಸಿಮೆಂಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ