Breaking News

Daily Archives: ಏಪ್ರಿಲ್ 3, 2026

ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆ ಮೀರಿ ಜನಬೆಂಬಲ

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆಯುತ್ತಿದ್ದು, ಅಭಿವೃದ್ಧಿ ಮಾಡದ ಬಿಜೆಪಿಯ ಸತ್ಯವನ್ನು ಜನರು ಅರಿತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ದಾವಣಗೆರೆಯ ಎಂ.ಬಿ.ಎ ಕಾಲೇಜು ಆವರಣ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆಯುತ್ತಿದೆ. ಬಿಜೆಪಿಯವರು ನಾಲ್ಕು ವರ್ಷದಲ್ಲಿ ಯಾವ ಅಭಿವೃದ್ಧಿಯನ್ನು ಮಾಡದೇ, ರಾಜ್ಯವನ್ನು ಲೂಟಿ ಮಾಡಿದ್ದಾರೆ ಎಂಬ ಸತ್ಯವನ್ನು ಜನರು …

Read More »

ತಿಗಡಿ ಗ್ರಾಮದಲ್ಲಿ ಮಾರುತಿ ಜಾತ್ರಾ ಸಂಭ್ರಮ: ಭಕ್ತಿಪರವಶತೆಯಿಂದ ಜರುಗಿದ ಭವ್ಯ ರಥೋತ್ಸವ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಶ್ರೀ ಮಾರುತಿ ಜಾತ್ರಾ ಮಹೋತ್ಸವವು ಸಡಗರ-ಸಂಭ್ರಮದಿಂದ ಜರುಗಿದೆ. ಎರಡು ದಿನಗಳ ಕಾಲ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾರುತಿ ರಾಯನ ಕೃಪೆಗೆ ಪಾತ್ರರಾದರು. ತಿಗಡಿ ಗ್ರಾಮದ ಆರಾಧ್ಯ ದೈವ ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈ ಬಾರಿಯೂ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಜಾತ್ರೆಯ ಮೊದಲ ದಿನದಂದು ದೇವಸ್ಥಾನದಲ್ಲಿ ಮಾರುತಿ ದೇವರಿಗೆ ವಿಶೇಷ ಅಭಿಷೇಕ …

Read More »

ಶ್ರೀ ಹನುಮಂತನು ಸಾಟಿಯಿಲ್ಲದ ದೈಹಿಕ ಶಕ್ತಿ: ಸುರೇಶ ಯಾದವ್

ಬೆಳಗಾವಿ: ರಾಮತೀರ್ಥ ನಗರ ರಹವಾಸಿಗಳಿಂದ ಕಣಬರ್ಗಿಯ ಕೆರೆ ರಸ್ತೆಯ ಶ್ರೀ ಹನುಮಾನ ಮಂದಿರದಲ್ಲಿ ಶ್ರೀ ಹನುಮಾನ ಜಯಂತಿಯನ್ನು ಸಂಭ್ರಮ ದಿಂದ ಆಚರಿಸಲಾಯಿತು. ಬಳಿಕ, ಹನುಮಾನ ಜಯಂತಿ ಪ್ರಯುಕ್ತ ಮುತೈದೆಯರಿಂದ ತೋಟಿಲೋತ್ಸವವನ್ನು, ಕುಂಭ ಮೇಳ ಮೂಲಕ ಶ್ರೀ ಗಣೇಶ ಮಂದಿರ ಸರ್ಕಲದಿಂದ ಮೆರವಣಿಗೆ ನಡೆಸಲಾಯಿತು. ಮಂದಿರದಲ್ಲಿ ಗಣ ಹೋಮ , ನವಗ್ರಹ ಹೋಮ ಮಾಡಲಾಯಿತು. ಸುರೇಶ ಯಾದವ ಫೌಂಡೇಶನ್ ಅಧ್ಯಕ್ಷರಾದ ಸುರೇಶ ಯಾದವ ಅವರು ಮಾತನಾಡಿ, ಹನುಮಂತನು ಸಾಟಿಯಿಲ್ಲದ ದೈಹಿಕ ಶಕ್ತಿ, …

Read More »

ಮಹಾರಾಷ್ಟ್ರ: ಬಂಧಿಯಾದ ಮಹಿಳೆಯ ಬಳಿ ಮಗಳನ್ನು ಲೈಂಗಿಕ ಸುಖಕ್ಕೆ ಕೇಳಿದ ಎಎಸ್‌ಐ ಅಮಾನತು

ಅಕೋಲಾ: ‘ರಕ್ಷಕನೇ ಭಕ್ಷಕ’ ಎಂಬ ಮಾತಿಗೆ ಅನ್ವರ್ಥವೆಂಬಂತೆ, ಮಹಾರಾಷ್ಟ್ರದ ಅಕೋಲಾದಲ್ಲಿ ವಿಚಾರಣೆಗೆ ಬಂದಿದ್ದ ಮಹಿಳೆಯ ಬಳಿ ಆಕೆಯ ಮಗಳನ್ನು ಲೈಂಗಿಕ ಸುಖಕ್ಕಾಗಿ ತನ್ನ ಮನೆಗೆ ಕಳುಹಿಸುವಂತೆ ಬೇಡಿಕೆಯಿಟ್ಟಿದ್ದ ಸಹಾಯಕ ಪೊಲೀಸ್ ಉಪನಿರೀಕ್ಷಕ (ASI) ರಾಜೇಶ್ ಜಾಧವ್‌ನನ್ನು ಅಮಾನತುಗೊಳಿಸಲಾಗಿದೆ. ವಂಚನೆ ಪ್ರಕರಣವೊಂದರಲ್ಲಿ ವಶದಲ್ಲಿದ್ದ ಮಹಿಳೆಯ ಬಳಿ ಅಸಭ್ಯವಾಗಿ ವರ್ತಿಸಿದ ಜಾಧವ್, “ನೀನು ಸುಂದರವಾಗಿದ್ದೀಯಾ, ನಿನ್ನ ಮಗಳೂ ಸುಂದರವಾಗಿರಬೇಕು. ಆಕೆಯನ್ನು ನನ್ನ ಮನೆಗೆ ಕಳುಹಿಸಿಕೊಡು, ಬದಲಿಗೆ 10,000 ರೂ. ನೀಡುತ್ತೇನೆ” ಎಂದು ಆಮಿಷವೊಡ್ಡಿದ್ದ …

Read More »

ಬೆಳಗಾವಿಯಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ ಮಹಾನಗರ ಪಾಲಿಕೆಯಿಂದ ಐತಿಹಾಸಿಕ ಆಚರಣೆಗೆ ಬೃಹತ್ ಪ್ಲಾನ್!

ಬೆಳಗಾವಿಯಲ್ಲಿ ಈ ಬಾರಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಅತ್ಯಂತ ಸ್ಮರಣೀಯವಾಗಿ ಆಚರಿಸಲು ಮಹಾನಗರ ಪಾಲಿಕೆ ಸಜ್ಜಾಗಿದೆ. ಕೇವಲ ಮೆರವಣಿಗೆಯಷ್ಟೇ ಅಲ್ಲದೆ, ಶೈಕ್ಷಣಿಕ ಕ್ರಾಂತಿಯ ಹೊಸ ಮೈಲಿಗಲ್ಲಿಗೆ ಈ ಬಾರಿ ಮಹಾನಗರ ಪಾಲಿಕೆ ಮುನ್ನುಡಿ ಬರೆಯುತ್ತಿದೆ. ಇಂದು ಮಹಾಪೌರರ ಅಧ್ಯಕ್ಷತೆಯಲ್ಲಿ ಡಾ. ಅಂಬೇಡ್ಕರ್ ಜಯಂತಿಗೆ ಸಂಬಂಧಿಸಿದಂತೆ ಇಂದು ಪೂರ್ವಭಾವಿ ಸಭೆ ನಡೆಯಿತು. ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಪ್ರೀತಿ ಕಾಮಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ …

Read More »