Breaking News

Daily Archives: ಮಾರ್ಚ್ 26, 2026

ಪೆಟ್ರೋಲ್, ಡೀಸೆಲ್ ಕೊರತೆ – ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಾಗಿದೆ ಎಂಬ ಸುಳ್ಳು ವದಂತಿಗಳು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ವದಂತಿಗಳಿಂದ ಸಾರ್ವಜನಿಕರು ಆತಂಕಕ್ಕೊಳಗಾಗಿ ಪೆಟ್ರೋಲ್ ಬಂಕ್‌ಗಳಲ್ಲಿ ಬಾಟಲಿ ಹಾಗೂ ಕ್ಯಾನ್‌ಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಇಂಧನ ಸಂಗ್ರಹಿಸುತ್ತಿರುವುದು ಕಂಡುಬಂದಿದೆ. ಈ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸ್ಪಷ್ಟೀಕರಣ ನೀಡಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ …

Read More »

2ನೇ ಮದ್ವೆಯಾಗ್ತಿದ್ದ ಗಂಡ ತಾಳಿ ಕಟ್ಟೋ ವೇಳೆ ಮೊದಲ ಹೆಂಡ್ತಿ ಎಂಟ್ರಿ

ಚಿಕ್ಕಬಳ್ಳಾಪುರ: ಆತನಿಗೆ ಮದುವೆಯಾಗಿ  ಹೆಂಡತಿ ಇಬ್ರು ಮಕ್ಕಳಿದ್ದರೂ ಎರಡನೇ ಮದುವೆಗೆ ರೆಡಿ ಆಗಿದ್ದ. ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲೇ ಮೊದಲ ಹೆಂಡತಿ ಧಿಡೀರ್ ಎಂಟ್ರಿ ಕೊಟ್ಟು ಮದುವೆ ರದ್ದಾಗಿ, ಗಂಡ ಪೊಲೀಸರ (Police) ಅತಿಥಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಬಳಿ ಘಟನೆ ನಡೆದಿದೆ. ಅಂದಹಾಗೆ ಆಂಧ್ರ ಮೂಲದ ಕದಿರಿಯ ಸುರೇಶ್ ಎಂಬಾತ ಹಲವು ವರ್ಷಗಳ ಹಿಂದೆಯೇ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯ …

Read More »

ಎಲ್‌ಪಿಜಿ ಸಿಲಿಂಡರ್‌ಗೆ ರಾತ್ರಿಯಿಡೀ ಕ್ಯೂ ಕೂತ ಜನ

ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದಿಂದ ಜಗತ್ತಿನಲ್ಲಿ ʻಎನರ್ಜಿ ಎಮರ್ಜೆನ್ಸಿʼ  ಸೃಷ್ಟಿ ಆಗಿಬಿಡುತ್ತಾ ಅನ್ನೋ ಕಳವಳ ಹೆಚ್ಚಾಗ್ತಿದೆ. ಕೊರೊನಾ ಬಳಿಕ ಜಗತ್ತಿನಲ್ಲಿ ಮೊದಲ ಬಾರಿಗೆ ಅನಿಲ ಸಂಕಷ್ಟ ಎದುರಾಗೋ ಆತಂಕ ಮನೆ ಮಾಡಿದೆ. ರಾಜ್ಯದಲ್ಲೂ ಪೆಟ್ರೋಲ್-ಡೀಸೆಲ್ ಸಿಗಲ್ಲ ಅನ್ನೋ ಗಾಳಿಸುದ್ದಿಗೆ ಜನ ಎದ್ನೋ ಬಿದ್ನೋ ಅಂತ ಬಂಕ್‌ಗಳಿಗೆ ಲಗ್ಗೆ ಇಟ್ಟಿದ್ದಾರೆ. ಬೆಂಗಳೂರು, ಬೀದರ್, ಶಿವಮೊಗ್ಗ, ಯಾದಗಿರಿ, ಬೆಳಗಾವಿ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಬೆಂಗಳೂರಿನ ಸುತ್ತಮುತ್ತ ಆನೇಕಲ್, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದ …

Read More »

ಬೆಂಗಳೂರಲ್ಲಿ IPL 2026 ಉದ್ಘಾಟನೆ – ಮಾ.28 ರಂದು ಮಧ್ಯರಾತ್ರಿವರೆಗೂ ಮೆಟ್ರೋ ಸೇವೆ ವಿಸ್ತರಣೆ

ಬೆಂಗಳೂರು: ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ  ಐಪಿಎಲ್ ಟಿ-20 (IPL T-20) ಕ್ರಿಕೆಟ್ ಪಂದ್ಯ ನಡೆಯುವ ಹಿನ್ನೆಲೆ ಆ ದಿನದಂದು ಮೆಟ್ರೋ  ಸೇವೆಯನ್ನು ವಿಸ್ತರಿಸಲಾಗಿದೆ ಎಂದು ಬಿಎಂಆರ್‌ಸಿಎಲ್  ತಿಳಿಸಿದೆ. ಪಂದ್ಯದ ದಿನದಂದು, ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಯನ್ನು ರಾತ್ರಿ 11 ಗಂಟೆಯಿಂದ ಮುಂದಿನ ದಿನ ಮುಂಜಾನೆ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ವೈಟ್ ಫೀಲ್ಡ್ನಿಂದ (ಕಾಡುಗೋಡಿ) ರಾತ್ರಿ 12:30ಕ್ಕೆ ಮತ್ತು ಚಲ್ಲಘಟ್ಟ ದಿಂದ ರಾತ್ರಿ 12:45ಕ್ಕೆ, ರೇಷ್ಮೆ …

Read More »

ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಕೇಸಲ್ಲಿ ಟ್ವಿಸ್ಟ್ – ಚಾಲಕನ ಹೇಳಿಕೆಯಲ್ಲಿ ಸಂದೇಹ

ಬೆಂಗಳೂರು: ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಐಷಾರಾಮಿ ಕಾರು ಡ್ರಿಫ್ಟಿಂಗ್  ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮುತ್ತಪ್ಪ ರೈ ಪುತ್ರ ರಿಕ್ಕಿ ರೈ  ವಿಚಾರಣೆ ವೇಳೆ ನಾನು ಕಾರು ಓಡಿಸಿಯೇ ಇಲ್ಲ ಎಂದಿದ್ದರು. ಅಲ್ಲದೆ ರಿಕ್ಕಿ ರೈ ಡ್ರೈವರ್ ಕಾರು ಓಡಿಸಿದ್ದು ನಾನು ಎಂದು ಹೇಳಿಕೆ ಕೊಟ್ಟಿದ್ದ. ಆದರೆ ಪೊಲೀಸರು ಕಾರಿನ ಬಗ್ಗೆ ಪ್ರಶ್ನೆ ಮಾಡಿದಾಗ ಚಾಲಕನ ಹೇಳಿಕೆಗಳಲ್ಲಿ ಸಂದೇಹ ಬಂದಿದೆ. ಲ್ಯಾಂಬೋರ್ಗಿನಿ ಕಾರಿಗೆ  ಎಷ್ಟು ಗೇರ್ ಇದೆ. ಕಾರು ಸ್ಟಾರ್ಟ್ ಮಾಡುವುದು …

Read More »

ಉಪ ಚುನಾವಣೆ ಹೊತ್ತಿನಲ್ಲೇ ದಾಖಲೆಗಳಿಲ್ಲದೇ ಸಾಗಿಸ್ತಿದ್ದ 6.17 ಲಕ್ಷ ರೂ. ಜಪ್ತಿ

ದಾವಣಗೆರೆ: ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 6.17 ಲಕ್ಷ ನಗದು ಹಣವನ್ನ ವಶಕ್ಕೆ ಪಡೆದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ತಪಾಸಣೆ ನಡೆಸುತ್ತಿದ್ದ ವೇಳೆ ಕಾರಿಗನೂರ, ಮಾಗಾನಹಳ್ಳಿ ಹಾಗೂ ಭೂಮಿಕಾ ನಗರ ಚೆಕ್ ಪೋಸ್ಟ್‌ಗಳಲ್ಲಿ ಹಣ ಜಪ್ತಿ ಮಾಡಲಾಗಿದೆ. ದಾವಣಗೆರೆ ನಗರದ ಭೂಮಿಕಾ ನಗರ ಚೆಕ್‌ಪೋಸ್ಟ್‌ನಲ್ಲಿ ಜಯನಗರದ ಪವನಕುಮಾರ ಅವರು 4 ಲಕ್ಷ ರೂ., ಕಾರಿಗನೂರ ಕ್ರಾಸ್ ಚೆಕ್ ಪೋಸ್ಟ್ ನಲ್ಲಿ ಕಾರಿಗನೂರಿನ …

Read More »

ಕಾಲ್ತುಳಿತ ದುರಂತ – ಮೃತ 11 ಅಭಿಮಾನಿಗಳ ನೆನಪಿಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸ್ಮಾರಕ ನಿರ್ಮಾಣ

ಬೆಂಗಳೂರು: ಐಪಿಎಲ್  ಪಂದ್ಯಕ್ಕೆ ಕೇವಲ ಮೂರೇ ದಿನ ಬಾಕಿಯಿರುವ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗಣಹೋಮ ನೆರವೇರಿಸಲಾಯ್ತು. ಕಳೆದ ವರ್ಷ ನಡೆದ 11 ಆರ್‌ಸಿಬಿ ಅಭಿಮಾನಿಗಳ  ದಾರುಣ ಸಾವು ಎಂದಿಗೂ ಮರೆಯೋಕೆ ಸಾಧ್ಯವಿಲ್ಲ. ಮುಂದೆ ಇಂತಹ ಯಾವುದೇ ಅವಘಡ ಆಗದೇ ಇರಲಿ ಎಂದು ಮೃತ್ಯುಂಜಯ ಹೋಮ, ಗಣಪತಿ ಹೋಮ, ಲಕ್ಷ್ಮಿ ಹೋಮ ನೆರವೇರಿಸಲಾಯ್ತು. ಪೂಜೆಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್  ಸೇರಿ ಹಲವರು ಭಾಗವಹಿಸಿದ್ರು. ಕ್ರೀಡಾಂಗಣದ ಗೇಟ್‌ಗಳಿಗೆ ಬೂದಗುಂಬಳಕಾಯಿ ಒಡೆದು ದೃಷ್ಟಿ …

Read More »

ಅಂಕಲಗಿ ಘಟಕ ಹೋಮ್‌ಗಾರ್ಡಗೆ ಮುಖ್ಯಮಂತ್ರಿಗಳ ಸೇವಾ ಪದಕ ಶಾಸಕರಿಂದ ಸತ್ಕಾರ

ಗೋಕಾಕ: ತಾಲೂಕಿನ ಅಂಕಲಗಿ ಘಟಕ ಹೋಮ್‌ಗಾರ್ಡ ಆಗಿರುವ ಹೊಳೆಪ್ಪಾ ಬಸವಣ್ಣಿ ನೇಸರಗಿ ಅವರಿಗೆ ೨೦೨೫ರ ಮುಖ್ಯಮಂತ್ರಿಗಳ ಸೇವಾ ಪದಕ ದೊರೆತಿರುವುದಕ್ಕಾಗಿ ಶಾಸಕ ರಮೇಶ ಜಾರಕಿಹೊಳಿ ಅವರು ನಗರದ ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಹೊಳೆಪ್ಪಾ ನೇಸರಗಿ ಅವರ ಸಮರ್ಪಣಾ ಮನೋಭಾವವನ್ನು ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು. ದೀರ್ಘಕಾಲದ ಸೇವೆ ಬಂದೋಬಸ್ತ್ ಕರ್ತವ್ಯ, ತುರ್ತು ಸಂದರ್ಭಗಳಲ್ಲಿ ಅಗ್ನಿ ಸುರಕ್ಷತೆ, ಮತ್ತು ಶೌರ್ಯ ಪ್ರದರ್ಶಿಸಿದ ಕಾರಣ ಸಿಎಂ ಪದಕ ಲಭಿಸಿದ್ದು ಇಂಥಹ ಸಿಬ್ಬಂದಿಗಳಿಗೆ …

Read More »

ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರಾಗಿದ್ದು, ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಸಂಜೆ ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಾಸವೇನು ಆಗಿಲ್ಲ. ಆತಂಕ ಪಡುವ ಅಗತ್ಯ ಇಲ್ಲ. ಹವಾಮಾನದ ಬದಲಾವಣೆಯಿಂದ ಅಸ್ವಸ್ಥರಾಗಿದ್ದು, ಆರೋಗ್ಯದ ಮೇಲೆ ವೈದ್ಯರ ತಂಡ ನಿಗಾ ಇಟ್ಟಿದ್ದಾರೆ ಎನ್ನಲಾಗಿದೆ. ಮಗ ರಾಹುಲ್ ಗಾಂಧಿ ಹಾಗೂ ಮಗಳು ಪ್ರಿಯಾಂಕಾ ಗಾಂಧಿ ತಾಯಿಯ ಆರೋಗ್ಯ ಕಾಳಜಿ ವಹಿಸಿದ್ದಾರೆ. ಈ ಹಿಂದೆಯೂ …

Read More »

ಪ್ಯಾನ್‌ಗೆ ನೇಣು ಬಿಗಿದು ಎಂಬಿಬಿಎಸ್‌ ವಿದ್ಯಾರ್ಥಿ ಆತ್ಮಹತ್ಯೆ

ಬೀದರ್: ಪ್ಯಾನ್‌ಗೆ ನೇಣು ಬಿಗಿದುಕೊಂಡು ಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ನಗರದ ಬ್ರಿಮ್ಸ್ ಕಾಲೇಜು ವಸತಿ ನಿಲಯದಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಾಲತೆ ತಾಂಡ ನಿವಾಸಿಯಾಗಿದ್ದ ಅನಿಷ್ಕಾರ್ ಚೌಹಾಣ್ (21) ಮೃತ ವಿದ್ಯಾರ್ಥಿ. ಮೆಡಿಕಲ್ ವಿದ್ಯಾರ್ಥಿಯಾಗಿದ್ದು, ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ವಸತಿ ನಿಲಯದ ತನ್ನ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ನಿಖರ ಕಾರಣ ತಿಳಿದುಬಂದಿಲ್ಲ ಎನ್ನಲಾಗಿದೆ. …

Read More »