ಬೆಂಗಳೂರು: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ ಹಾಗೂ ಅಬಕಾರಿ ಸಚಿವರಾದ ಆರ್.ಬಿ. ತಿಮ್ಮಾಪೂರ್ ರವರ ನೇತೃತ್ವದಲ್ಲಿ ನಗರದ ರಾಡಿಸನ್ ಬ್ಲೂ (ಏಟ್ರಿಯಾ) ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ನಂತರ ಮಾತನಾಡಿದ ಸಚಿವರು ಒಳಮೀಸಲಾತಿ ಕಲ್ಪಿಸುವಲ್ಲಿ ನಮ್ಮ ಸರ್ಕಾರ ಕಂಕಣ ಬದ್ಧವಾಗಿದೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾನ್ಯ ಉಪ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ ಒಳಮೀಸಲಾತಿ ಅನುಷ್ಠಾನದ ಜೊತೆಗೆ …
Read More »Daily Archives: ಮಾರ್ಚ್ 4, 2026
ಖಾಲಿ ಹುದ್ದೆಗಳ ನೇಮಕಾತಿ ಕಡ್ಡಾಯವಾಗಿ ಜಾರಿಗೊಳಿಸಬೇಕು: ಸುರೇಶ ಐಹೊಳೆ ಒತ್ತಾಯ
ಹಾರೂಗೇರಿ: ಸಚಿವ ಸಂಪುಟ ನಿರ್ಣಯದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೊರಡಿಸಿರುವ ಸರ್ಕಾರದ ಆದೇಶದ ಪ್ರಕಾರ ಶೇ.15ರಷ್ಟು ಒಳ ಮೀಸಲಾತಿ ರೋಸ್ಟರ್ ಮಾರ್ಗಸೂಚಿಗಳಂತೆ 56,342 ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಮಾದಿಗ ಮಹಾಸಭಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ ಐಹೊಳೆ ಹೇಳಿದರು. ಪಟ್ಟಣದ ಸುರೇಶ ಐಹೊಳೆ ಗೃಹ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನ …
Read More »ಕಾರ್ಯಕರ್ತರ ಆಗಮನದಿಂದ ಕ್ಷೇತ್ರದಲ್ಲಿ ಬಿಜೆಪಿಯ ಬಲ ಹೆಚ್ಚಿದೆ
ನಿಪ್ಪಾಣಿ: ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಆಗಮನದಿಂದ ಕ್ಷೇತ್ರದಲ್ಲಿ ಬಿಜೆಪಿಯ ಬಲ ಮತ್ತಷ್ಟು ಹೆಚ್ಚಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು. ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರದ ಅಭಿವೃದ್ಧಿ ಕಾರ್ಯ ಹಾಗೂ ನಿಪ್ಪಾಣಿ ಕ್ಷೇತ್ರದಲ್ಲಿ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಮೆಚ್ಚಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದರು. ತಾಲೂಕಿನ ಕಾರದಗಾ ಗ್ರಾಮದ ಜಿಪಂ ಮಾಜಿ ಸದಸ್ಯೆ ಸುಮಿತ್ರಾ ಉಗಳೆ ಹಾಗೂ ಸುದೀಪ …
Read More »ಸ್ವಯಂ ಉದ್ಯೋಗದಿಂದ ನಿಶ್ಚಿತ ಗುರಿ ಸಾಧ್ಯ
ರಾಮದುರ್ಗ: ವಿದ್ಯಾರ್ಥಿಗಳು ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಸದ್ಭಳಕೆ ಮಾಡಿಕೊಂಡು, ಆತ್ಮವಿಶ್ವಾಸದೊಂದಿಗೆ ಸ್ವಯಂ ಉದ್ಯೋಗ ಕೆಗೊಂಡದಲ್ಲಿ ನಿಶ್ಚಿತ ಗುರಿ ತಲುಪಲು ಸಾಧ್ಯ ಎಂದು ವಿರಕ್ತಮಠ ಟ್ರಸ್ಟ್ ಅಧ್ಯ ಪ್ರದಿಪಕುಮಾರ ಪಟ್ಟಣ ಹೇಳಿದರು. ನಗರದ ಅರಮನೆ ಆವರಣದಲ್ಲಿರುವ ಕ್ಯಾಂಬ್ರೀಡ್ಜ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಈಚೆಗೆ ಉದ್ಘಾಟಿಸಿ ಮಾತನಾಡಿದರು. ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ, ಯುವಕರು ಭವಿಷ್ಯ ರೂಪಿಸಿಕೊಳ್ಳಲು ಶಿಣದ ಪಾತ್ರ ಅಲ್ಲಗಳೆಯುವಂತಿಲ್ಲ. ಪಾಲಕರು …
Read More »ರೇಣುಕಾಚಾರ್ಯರ ತತ್ವಗಳು ಸಮಾಜಕ್ಕೆ ಪ್ರೇರಣೆ: ಮುರುಂದ್ರ ಸ್ವಾಮೀಜಿ
ಸವದತ್ತಿ: ಸಮಾನತೆ, ಸಾಮರಸ್ಯ ಹಾಗೂ ಸಂಸ್ಕಾರಗಳ ಮಹತ್ವ ಸಾರಿದ ಜಗದ್ಗುರು ರೇಣುಕಾಚಾರ್ಯರ ತತ್ವಗಳು ಸಮಾಜಕ್ಕೆ ಪ್ರೇರಣೆಯಾಗಿವೆ ಎಂದು ಮುನವಳ್ಳಿ ಸೋಮಶೇಖರ ಮಠದ ಮುರುಂದ್ರ ಸ್ವಾಮೀಜಿ ಹೇಳಿದರು. ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕಾಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ರೇಣುಕಾಚಾರ್ಯರ ಉಪದೇಶಗಳು ಶಾಂತಿ ಮತ್ತು ಸೌಹಾರ್ದ ಬಲಪಡಿಸುವಲ್ಲಿ ಮಾರ್ಗದರ್ಶಕವಾಗಿವೆ ಎಂದರು. ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಉದ್ಯಮಿ ಅಶ್ವತ್ಥ ವೈದ್ಯ ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟು ಮತ್ತು ಸೌಹಾರ್ದ ಬೆಳವಣಿಗೆಗೆ ರೇಣುಕಾಚಾರ್ಯರ …
Read More »ತರಬೇತಿ ನೀಡಿ ಒಂದೂವರೆ ವರ್ಷವಾದರೂ ಪಿಎಂಕೆವಿವೈಯೋಜನೆ ತರಬೇತಿದಾರರ ಅನುದಾನ ಬಾಕಿ
ಬೆಳಗಾವಿ : ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿಎಂಕೆವಿವೈ) 4.0 ಅಡಿ ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯ ಹಾಗೂ ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮದ ಮೂಲಕ ಲಕ್ಷಾಂತರ ಯುವಕ, ಯವತಿಯರಿಗೆ ತರಬೇತಿ ನೀಡಿ ಒಂದೂವರೆ ವರ್ಷವಾದರೂ ಈವರೆಗೂ ತರಬೇತಿ ಪಾಲುದಾರ ಕೇಂದ್ರ ಬಾಕಿ ಅನುದಾನ ಬಿಡುಗಡೆಗೊಳಿಸಿಲ್ಲ ಎಂದು ರಾಷ್ಟ್ರೀಯ ಕೌಶಲ ತರಬೇತಿ ಪಾಲುದಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಗಿರಿರಾಜ ಶಿರಗೆ ಆರೋಪಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, …
Read More »ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಶ್ವಾನ ದಳದ ತಪಾಸಣೆ
ಬೆಳಗಾವಿ : ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಇರಿಸಿರುವುದಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಈಮೇಲ್ ಬಂದ ಹಿನ್ನೆಲೆ ಮಂಗಳವಾರ ತಪಾಸಣೆ ನಡೆಸಲಾಯಿತು. ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದ ತಕ್ಷಣವೇ ಡಿಸಿಪಿ ನಾರಾಯಣ ಬರಮನಿ ನೇತೃತ್ವದಲ್ಲಿ ಬಾಂಬ್ ಪತ್ತೆ ದಳ ಮತ್ತು ಶ್ವಾನ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ನ್ಯಾಯಾಲಯ ಸಂಕೀರ್ಣವನ್ನು ಇಂಚಿಂಚು ತಪಾಸಿದರು. ಈ ವೇಳೆ ಕಲಾಪಗಳಿಗೆ ವಿರಾಮ ನೀಡಲಾಗಿತ್ತು. ಎಲ್ಲೂ ಬಾಂಬ್ ಇರುವಿಕೆ ಪತ್ತೆಯಾಗಲಿಲ್ಲ. ಇದೊಂದು ಹುಸಿ …
Read More »ಭಾರತಕ್ಕೆ ಕಚ್ಚಾ ತೈಲ ಪೂರೈಸಲು ನಾವು ಸಿದ್ಧ: ರಷ್ಯಾ
ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಇಂಧನ ಪೂರೈಕೆಯಲ್ಲಿ ಅಡಚಣೆ ಉಂಟಾದರೆ ಭಾರತಕ್ಕೆ ಕಚ್ಚಾ ತೈಲ ಪೂರೈಸಲು ನಾವು ಸಿದ್ದರಿದ್ದೇವೆ ಎಂದು ರಷ್ಯಾ ಹೇಳಿದೆ. ಕಚ್ಚಾ ತೈಲಗಳು ಹಾದು ಹೋಗುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದೆ. ಅಷ್ಟೇ ಅಲ್ಲದೇ ಇರಾನ್ ಸೌದಿಯ ತೈಲ ಸಂಸ್ಕರಣಾ ಘಟಕಗಳ ಮೇಲೆ ಡ್ರೋನ್ ದಾಳಿ ನಡೆಸಿದೆ. ಈ ಸುದ್ದಿಗಳು ಪ್ರಕಟವಾದ ಬೆನ್ನಲ್ಲೇ ಕಚ್ಚಾ ತೈಲಗಳ ಬೆಲೆ ಏರಿಕೆ ಕಾಣುತ್ತಿವೆ. ತೈಲ ವಿಚಾರಲ್ಲಿ ಇಡೀ ವಿಶ್ವ ಈಗ …
Read More »ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಘಟನೆಗೆ ನಾವು ಹೊಣೆಯಲ್ಲ – ಆರ್‌ಸಿಬಿ
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಘಟನೆಗೆ ನಾವು ಹೊಣೆಯಲ್ಲ ಎಂದು ಆರ್‌ಸಿಬಿ (RCB) ಪರ ವಕೀಲರು ವಾದಿಸಿದ್ದಾರೆ. ಚಿನ್ನಸ್ವಾಮಿ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ರದ್ದು ಕೋರಿ ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ಹೈಕೋರ್ಟ್‌ನಲ್ಲಿಂದು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿದೆ. ಸರ್ಕಾರ ಪರ ವಕೀಲರಾದ ಎಸ್‌ಪಿಪಿ ಬಿ.ಟಿ.ವೆಂಕಟೇಶ್ ಅವರು ಪ್ರಕರಣದ …
Read More »ಅಟ್ರಾಸಿಟಿ ಕಾನೂನಿನ ದುರುಪಯೋಗ ಬೇಡ, ತೊಂದರೆ ಕೊಡಲು ಬಳಸಬೇಡಿ : ಕೆಎನ್ ರಾಜಣ್ಣ
ತುಮಕೂರು: ಇತ್ತಿಚಿನ ದಿನದಲ್ಲಿ ದಲಿತರಿಗಾಗಿ ಇರುವ ಅಟ್ರಾಸಿಟಿ ಸೇರಿದಂತೆ ಕೆಲವು ಕಾನೂನುಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ಮಾಜಿ ಸಚಿವ ಕೆ ಎನ್ ರಾಜಣ್ಣ ಬೇಸರ ಹೊರಹಾಕಿದ್ದಾರೆ. ತುಮಕೂರಿನಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಚರಕ ಚಾರಿಟಬಲ್ ಟ್ರಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಲಿತ ಸಮುದಾಯದ ಯುವ ಸಮೂಹವೇ ಈ ಕಾನೂನನ್ನು ಹೆಚ್ಚು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಹೇಳಿದರು. ದಲಿತರು ಬೇರೆ ಸಮುದಾಯದ ಪ್ರೀತಿ ವಿಶ್ವಾಸವನ್ನು ಗಳಿಸಬೇಕೇ ಹೊರತು ನಮಗಾಗಿ ಇರುವ …
Read More »
Laxmi News 24×7