Daily Archives: ಫೆಬ್ರವರಿ 17, 2026

ಇವರ ಸಾಧನೆ ಸಾಲದ ಹೊರೆ ಅಷ್ಟೇ

ವಿಜಯಪುರ: ರಾಜ್ಯ ಸರ್ಕಾರ 1000 ದಿನಗಳ ಸಂಭ್ರಮ ಆಚರಿಸಿದೆ. ಆದರೆ ಇವರ ಸಾಧನೆ ಕೇವಲ ಸಾಲದ ಹೊರೆ ಅಷ್ಟೇ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, 1000 ದಿನ ರಾಜ್ಯ ಸರ್ಕಾರ ಪೂರೈಸಿದೆ ಎಂದು ಸಂಭ್ರಮಿಸುತ್ತಿದ್ದಾರೆ. ಪ್ರತಿನಿತ್ಯ ಗದ್ದುಗೆ ಗುದ್ದಾಟ ನಡೆಯುತ್ತಿದೆ. ಒಂದೆ ಕಡೆ ರಾಜ್ಯ ಸೊರಗಿ ಹೋಗಿದೆ. ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ …

Read More »

ಗ್ರಾಮ ಪಂಚಾಯತ್ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ರೈತ

ವಿಜಯನಗರ: ಮನೆ ಕಟ್ಟಲು ಪರವಾನಗಿ ನೀಡದ ಹಿನ್ನೆಲೆಯಲ್ಲಿ ರೈತೊಬ್ಬ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡಬಗೆರೆ ಗ್ರಾಮ ಪಂಚಾಯತ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕಡಬಗೆರೆ ಪಂಚಾಯತ್ ವ್ಯಾಪ್ತಿಯ ಪವನಪುರ ಗ್ರಾಮದ ನಿವಾಸಿ ಕೆ. ಬಸವರಾಜ್ ಎಂಬವರು ಗ್ರಾ.ಪಂ. ಕಚೇರಿಯಲ್ಲೇ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮನೆ ನಿರ್ಮಾಣಕ್ಕಾಗಿ ಇ-ಸೊತ್ತು ಹಾಗೂ ಪರವಾನಗಿ ನೀಡುವಂತೆ ಹಲವಾರು ಬಾರಿ ಅರ್ಜಿ ಸಲ್ಲಿಸಿದ್ದರೂ …

Read More »

ಯತೀಂದ್ರ ಕೂಡ ವಿಜಯೇಂದ್ರನಂತೆ ವಸೂಲಿಗೆ ಇಳಿದಿದ್ದಾನೆ: ಯತ್ನಾಳ್

ವಿಜಯಪುರ: ವಿಜಯೇಂದ್ರ ಹೇಗೆ ಯಡ್ಡಿಯೂರಪ್ಪ ಸಿಎಂ ಇದ್ದಾಗ ವಸೂಲಿ ಮಾಡಿದ್ದ, ಹಾಗೆ ಸಿದ್ದರಾಮಯ್ಯ ಮಗ ಕೂಡ ವಿಜಯೇಂದ್ರನಂತೆ ವಸೂಲಿಗೆ ನಿಂತಿದ್ದಾನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯಲ್ಲಿ ಮಾತನಾಡಿದ ಅವರು, ಯತೀಂದ್ರ ಕೂಡ ವಸೂಲಿ ಕಂಪನಿಯಾಗಿದ್ದಾನೆ. ವಿಜಯೇಂದ್ರ ಹೇಗೆ ಯಡ್ಡಿಯೂರಪ್ಪ ಸಿಎಂ ಇದ್ದಾಗ ವಸೂಲಿ ಮಾಡಿದ್ದ. ಹಾಗೆ ಸಿದ್ದರಾಮಯ್ಯ ಮಗ ಕೂಡ ವಿಜಯೇಂದ್ರ ಹಾಗೆ ವಸೂಲಿಗೆ ನಿಂತಿದ್ದಾನೆ. ವಿಜಯೇಂದ್ರ ಕಡೆ ರಾತ್ರಿ ಟ್ರೇನಿಂಗ್ ತೆಗೆದುಕೊಳ್ಳುತ್ತಾನಂತೆ. ಹೇಗೆ …

Read More »

ಮುಖ ತೊಳೆಯುವಾಗ ಕಾಲುಜಾರಿ ಮಗ ನೀರುಪಾಲು – ರಕ್ಷಿಸಲು ಹೋಗಿ ತಂದೆಯೂ ಸಾವು

ಬೀದರ್: ಮುಖ ತೊಳೆಯಲು ಹೋಗಿ ಕಾಲು ಜಾರಿ ನೀರುಪಾಲಾಗಿದ್ದ ಮಗನನ್ನು ರಕ್ಷಿಸಲು ಹೋಗಿ ತಂದೆಯೂ ಜಲಸಮಾಧಿಯಾಗಿರುವ ಘಟನೆ ಬೀದರ್‌ನ  ಹಾಲಳ್ಳಿ ಗ್ರಾಮದ ಕಾರಂಜಾ ನದಿಯ ಹಿನ್ನೀರಿನ ಕಾಲುವೆಯಲ್ಲಿ ನಡೆದಿದೆ. ಮೃತರನ್ನು ಹಳ್ಳೆಖೇಡ್(ಬಿ) ಗ್ರಾಮದ ತಂದೆ ಈಶಪ್ಪ (50) ಮತ್ತು ಮಗ ಅಮರೇಶ (23) ಎಂದು ಗುರುತಿಸಲಾಗಿದೆ. ತಂದೆ-ಮಗ ಬೀದರ್‌ನಲ್ಲಿ ಸಿಮೆಂಟ್ ಖಾಲಿ ಮಾಡಿ, ವಾಪಸ್ ಹಳ್ಳಿಖೇಡ್‌ಗೆ ಹೋಗುತ್ತಿದ್ದರು. ಈ ವೇಳೆ ಕಾರಂಜಾ ನದಿಯ ಹಿನ್ನೀರಿನ ಕಾಲುವೆಯಲ್ಲಿ ಮಗ ಮುಖ ತೊಳೆಯಲು …

Read More »

AI Impact Summit 2026 – ಜಾಗತಿಕ ಶೃಂಗಕ್ಕೆ ಮೋದಿ ಚಾಲನೆ

ನವದೆಹಲಿ: ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತ ಸೂಪರ್‌ ಪವರ್‌ ಆಗಬೇಕೆಂಬ ನಿಟ್ಟಿನಲ್ಲಿ ಆಯೋಜನೆಗೊಂಡಿರುವ ಜಾಗತಿಕ ಎಐ ಶೃಂಗಕ್ಕೆ ದೆಹಲಿಯಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ. ಭಾರತ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಐ ಇಂಪ್ಯಾಕ್ಟ್‌ ಶೃಂಗ ಮತ್ತು ಎಐ ಇಂಪ್ಯಾಕ್ಟ್‌ ಎಕ್ಸ್‌ಪೋವನ್ನು  ಉದ್ಘಾಟಿಸಿದರು. ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 500 ಅಧಿವೇಶನ ನಡೆಯಲಿದ್ದು 3 ಸಾವಿರ ಭಾಷಣಕಾರರು ಭಾಗಿಯಾಗಲಿದ್ದಾರೆ. ಜಾಗತಿಕ ತಂತ್ರಜ್ಞಾನ ಕಂಪನಿಗಳು, ಸ್ಟಾರ್ಟ್‌ಅಪ್‌ಗಳು, ಶೈಕ್ಷಣಿಕ ಮತ್ತು …

Read More »

ನಾನು ರಾಹುಲ್‌ವಾದಿಯಲ್ಲ, ಕೇರಳ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಲ್ಲ: ಮಣಿಶಂಕರ್‌ ಅಯ್ಯರ್‌

ತಿರುವಂತಪುರಂ: ಮುಂಬರುವ ಕೇರಳ ಚುನಾವಣೆಯಲ್ಲಿ  ಕಾಂಗ್ರೆಸ್ ಗೆಲ್ಲುವುದಿಲ್ಲ. ಕಮ್ಯುನಿಸ್ಟ್ ವಿರೋಧಕ್ಕಿಂತ ಪಕ್ಷದೊಳಗಿನ ನಾಯಕರ ನಡುವೆಯೇ ಪರಸ್ಪರ ವಿರೋಧ, ಭಿನ್ನಾಭಿಪ್ರಾಯ ಇದೆ ಎಂದು ಕಾಂಗ್ರೆಸ್ಸಿಗ ಮಣಿಶಂಕರ್ ಅಯ್ಯರ್ ಬಾಂಬ್‌ ಸಿಡಿಸಿದ್ದಾರೆ. ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ (Congress) ಗೆಲ್ಲಬೇಕೆಂದು ಬಯಸುತ್ತೇನೆ. ಆದರೆ ಕಾಂಗ್ರೆಸ್ ನಾಯಕರು ಪಕ್ಷದ ಒಳಗಡೆಯೇ ಕಚ್ಚಾಟ ನಡೆಸುತ್ತಿರುವುದರಿಂದ ಇದು ಸಾಧ್ಯವಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಕಮ್ಯುನಿಸ್ಟರನ್ನು ದ್ವೇಷಿಸುವುದಕ್ಕಿಂತ ಹೆಚ್ಚಾಗಿ ಪರಸ್ಪರ ದ್ವೇಷಿಸುತ್ತಾರೆ ಎಂದು …

Read More »

 ಕರಾವಳಿಯಲ್ಲಿನ ವಾತಾವರಣ ಸುಧಾರಿಸಲು ಸರ್ಕಾರ ಶ್ರಮಿಸುತ್ತಿದೆ

ಬೆಳಗಾವಿ : ಕರಾವಳಿಯಲ್ಲಿ ಕೋಮು ಗಲಭೆಗಳ ಕಾರಣಕ್ಕೆ ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದಾರೆ ಎಂದಿರುವ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಯಲ್ಲಿ ಅರ್ಥವಿದೆ ಎಂದಿರುವ ಸಚಿವ ದಿನೇಶ ಗುಂಡೂರಾವ್, ನಮ್ಮ ಸರ್ಕಾರ ಅಲ್ಲಿನ ವಾತಾವರಣ ಸುಧಾರಿಸಲು ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ. ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದ ಬಳಿಕ ಕರಾವಳಿ ಭಾಗದ ವಾತಾವರಣ ಸುಧಾರಿಸಲು ಸಾಕಷ್ಟು ಕ್ರಮ ಕೈಗೊಂಡಿದ್ದರಿಂದ ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ. ಬಂಡವಾಳ ಹೆಚ್ಚು ಹೂಡಲಿಕ್ಕೆ …

Read More »

ನೆಹರೂ ನಗರದ ಬಸವಣ್ಣ, ಮಹಾದೇವ ಮಂದಿರದಲ್ಲಿ ಮಹಾಶಿವರಾತ್ರಿ

ಬೆಳಗಾವಿ: ಮಹಾಶಿವರಾತ್ರಿ ಪ್ರಯುಕ್ತ ನೆಹರೂ ನಗರದಲ್ಲಿರುವ ಬಸವಣ್ಣ, ಮಹಾದೇವ ಮಂದಿರದಲ್ಲಿ ಸೋಮವಾರ ಮಹಾರುದ್ರ ಯಾಗ, ಹೋಮ ಹಾಗೂ ಮಹಾಪ್ರಸಾದ ಜರುಗಿತು. ಬೆಳಗ್ಗೆ ಗಣೇಶ ಪೂಜೆ, ಮಹಾದೇವನಿಗೆ ಅಭಿಷೇಕ, ಮಹಾರುದ್ರ ಹೋಮಗಳಲ್ಲಿ ನೆಹರೂ ನಗರ ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು. ಸರ್ಕಾರದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ ಪಾಟೀಲ, ಇತರ ಗಣ್ಯರು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು. ದೇವಸ್ಥಾನ ಮಂಡಳಿಯ ಶಿವಾಜಿ ಠಕ್, ವಿಶ್ವನಾಥ ಪಾಟೀಲ, ವಿಜಯ …

Read More »

ಕೆಲಸ ಮಾಡದ ಸಿಬ್ಬಂದಿಗಳ ವಿರುದ್ಧ ಕ್ರಮ

ಬೆಳಗಾವಿ : ಒಂದಿಬ್ಬರು ಮಾಡುವ ತಪ್ಪಿನಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ತಡೆಗಟ್ಟುವ ಕಾರ್ಯವಾಗಬೇಕಿದ್ದು, ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು. ಜಿಲ್ಲಾ ಪೊಲೀಸ್ ಇಲಾಖೆಯ ಮಾಸಿಕ ಪಥಸಂಚಲನ ಪರಿವೀಕ್ಷಿಸಿ ಮಾತನಾಡಿದ ಅವರು, ಖಾಕಿ ಬಟ್ಟೆಗೆ ತನ್ನದೇ ಆದ ಗೌರವವಿದೆ. ಕಿವಿ ಮತ್ತು ಕಣ್ಣು ಸಕ್ರಿಯವಾಗಬೇಕೆ ಹೊರತು ಕಿವುಡರು ಕುರುಡರಂತೆ ವರ್ತಿಸಬಾರದು. ಅಕ್ರಮಗಳ ವಿರುದ್ದ ಕ್ರಮ ಕೈಗೊಳ್ಳಲೇಬೇಕು. ಕೆಲಸ …

Read More »

ಮಾ.6 ರಂದು ಬಜೆಟ್‌ – ದಾಖಲೆ ಬರೆಯಲಿದ್ದಾರೆ ಸಿದ್ದರಾಮಯ್ಯ

ಬೆಂಗಳೂರು: ಮಾರ್ಚ್‌ 6 ರಂದು ಸಿಎಂ ಸಿದ್ದರಾಮಯ್ಯ  ದಾಖಲೆಯ 17ನೇ ಬಜೆಟ್‌  ಮಂಡನೆ ಮಾಡಲಿದ್ದಾರೆ. ಬಜೆಟ್ ಅಧಿವೇಶನದ ವೇಳಾಪಟ್ಟಿ ಅಧಿಕೃತ ಪ್ರಕಟವಾಗಿದ್ದು ಬೆಳಗ್ಗೆ 10:15ಕ್ಕೆ ಮಂಡನೆಯಾಗಲಿದೆ. ಕಳೆದ ಬಾರಿ ಮಾರ್ಚ್‌ 7 ರಂದು ಸಿದ್ದರಾಮಯ್ಯ ಬೆಳಗ್ಗೆ 10:15ಕ್ಕೆ ಬಜೆಟ್‌ ಮಂಡನೆ ಮಾಡಿದ್ದರು. ಮಾರ್ಚ್ 6 ರಿಂದ ಮಾರ್ಚ್ 27 ರವರೆಗೆ ಒಟ್ಟು 14 ದಿನ ಬಜೆಟ್‌ ಅಧಿವೇಶನ ನಡೆಯಲಿದೆ. ಸಿದ್ದರಾಮಯ್ಯನವರು ಈಗಾಗಲೇ ಇಲಾಖಾವಾರು ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದು, ಮುಂಬರುವ ಚುನಾವಣೆ …

Read More »