Breaking News

Daily Archives: ಫೆಬ್ರವರಿ 6, 2026

ದಾವಣಗೆರೆ | ಸನ್ಯಾಸತ್ವ ಸ್ವೀಕರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿನಿ

ದಾವಣಗೆರೆ: ನಗರದ  ಚೌಕಿಪೇಟೆಯ 26 ವರ್ಷದ ಯುವತಿಯೊಬ್ಬರು ಸಂಸಾರ ತೊರೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಮುಖೇಶ್ ಕುಮಾರ್ ಹಾಗೂ ಸುನೀತಾ ಅವರ ಪುತ್ರಿ ಆಂಚಲ್ ಕುಮಾರಿ (26) ಜೈನ ಧೀಕ್ಷೆ ಪಡೆದಿದ್ದಾರೆ. ಅವರು ಖಾಸಗಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದರು. ಅಲ್ಲದೇ ಕಾಲೇಜಿನಲ್ಲಿ ಟಾಪರ್ ಆಗಿದ್ದರು. ಇಂದು (ಫೆ.6) ಸೂರತ್‌ನಲ್ಲಿ ಅವರು ಸನ್ಯಾಸ ಧೀಕ್ಷೆ ಪಡೆದಿದ್ದಾರೆ. ಯುವತಿಯ ಆಯ್ಕೆಯನ್ನು ಕುಟುಂಬಸ್ಥರು ಸಹ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಇತ್ತೀಚಿಗೆ ಆಂಚಲ್ ಕುಮಾರಿಯವರು ಆಧ್ಯಾತ್ಮದ ಕಡೆ …

Read More »

ಮುಗಳಿಹಾಳ ಜಾತ್ರಾ ಮಹೋತ್ಸವ ಹಾಗೂ ನಾಟಕ ಚಾಲನೆ ನೀಡಿದ ಅಶ್ವಥ್ ವೈದ್ಯ

ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಜರುಗಿದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ನಾಟಕ ಉದ್ಘಾಟನಾ ಸಮಾರಂಭದಲ್ಲಿ  ಅಶ್ವಥ್ ವೈದ್ಯ ಅವರು ಭಾಗವಹಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ​ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮುಖಂಡರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Read More »

ಮಂಡ್ಯ ಅಬಕಾರಿ ಡಿಸಿ ಅಮಾನತು…ಲೈಸೆನ್ಸ್ ನೀಡಲು ಲಂಚ ಆರೋಪ ಸಾಬೀತಾದ ಹಿನ್ನಲೆ ಕ್ರಮ

ಮಂಡ್ಯ ಅಬಕಾರಿ ಇಲಾಖೆ ಲಂಚಾವತಾರಕ್ಕೆ ಮತ್ತೊಂದು ನಿದರ್ಶನ. ಮಂಡ್ಯ ಅಬಕಾರಿ ಡಿಸಿ ಅಮಾನತ್ತು.ಸಿಎಲ್ 7 ಲೈಸೆನ್ಸ್ ನೀಡಲು ಲಂಚಕೇಳಿದ ಆರೋಪ ಸಾಬೀತಾದ ಹಿನ್ನಲೆ ಅಬಕಾರಿ ಉಪ ಆಯುಕ್ತ ನಾಗಶಯನ ಅಮಾನತಾಗಿದ್ದಾರೆ. ಲೈಸೆನ್ಸ್ ‌ನೀಡಲು‌ ಸುಂದರ್ ಎಂಬುವವರಿಂದ 60 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.ಸುಂದರ್ ಆಡಿಯೋ‌ ಸಹಿತ ಲೋಕಾಯುಕ್ತಕ್ಕೆ ದೂರು ನೀಡಿದ್ದರು.ಕೆ.ಆರ್.ಪೇಟೆಯ ಸೋಮನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಸಿಎಲ್ 7 ಬಾರ್ ತೆರೆಯಲು ಲೈಸೆನ್ಸ್ ನೀಡಲು ಸುಂದರ್ ಅರ್ಜಿ ಸಲ್ಲಿಸಿದ್ದರು. ಲೈಸೆನ್ಸ್ ನೀಡದೇ ಸಣ್ಣ …

Read More »

ಟೀ ಕಪ್ ಹಿಡಿದುಕೊಂಡು ನಗುವ ಈ ವೈರಲ್ ಹುಡುಗ ಯಾರು?: ಆತ ಏನು ಕೆಲಸ ಮಾಡುತ್ತಿದ್ದಾನೆ?

ಇತ್ತೀಚಿನ ದಿನಗಳಲ್ಲಿ ನೀವು ಇನ್ಸ್ಟಾಗ್ರಾಮ್ ಅಥವಾ ಯೂಟ್ಯೂಬ್ ರೀಲ್ಸ್ ನೋಡುವಾಗ ಕೈಯಲ್ಲಿ ಟೀ ಕಪ್ ಹಿಡಿದು ನಗುವ ಒಬ್ಬ ಹುಡುಗನ ವಿಡಿಯೋ ಖಂಡಿತ ನಿಮ್ಮ ಕಣ್ಣಿಗೆ ಬಿದ್ದಿರುತ್ತದೆ. ಈ ಹುಡುಗ ಯಾರು? ಆತ ಎಲ್ಲಿಯವನು? ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ. ಯಾರು ಈ ಹುಡುಗ?:ಈ ವೈರಲ್ ಹುಡುಗನ ಹೆಸರು ಅರುಣ್. ಈತ ದಕ್ಷಿಣ ಭಾರತದ ತೆಲಂಗಾಣ ರಾಜ್ಯದ ಜಯಶಂಕರ್ ಬೊಪ್ಪಲಪಲ್ಲಿ ಜಿಲ್ಲೆಯ ನಾಲಪು ಚಟುಪಲ್ಲಿ ಎಂಬ ಹಳ್ಳಿಯವನು. ವಿಡಿಯೋ ವೈರಲ್ …

Read More »

ದುಬೈನಲ್ಲಿ ಮಿಂಚಿದ ಸದಲಗಾ ಪಟ್ಟಣದ ಡಾ.ಶಿವಶಂಕರ ಮರಜಕ್ಕೆ

ಚಿಕ್ಕೊಡಿ:ಸದಲಗಾ ಪಟ್ಟಣದವರು ಹಾಗೂ ಕೊಲ್ಲಾಪುರ ಸಿದ್ದಗಿರಿ ಕನೇರಿ ಮಠದ ಆಸ್ಪತ್ರೆಯಲ್ಲಿ 12 ವರ್ಷದಿಂದ ತಜ್ಞ ನರ ಶಸ್ತ್ರ ಚಿಕಿತ್ಸಾ ವೈದ್ಯರಾಗಿ ಸೇವೆ ಸಲ್ಲಿಸಿಸುತ್ತಿರುವ ಡಾ.ಶಿವಶಂಕರ ಮರಜಕ್ಕೆ ಅವರು ದುಬೈನಲ್ಲಿ ನಡೆದ ವಿಶ್ವ ನರ ಶಸ್ತ್ರಚಿಕಿತ್ಸಾ ಒಕ್ಕೂಟದ ಸಮ್ಮೇಳನದಲ್ಲಿ ಮೂರು ಪ್ರಬಂಧ ಮಂಡಿಸಿ ನರ ಚಿಕಿತ್ಸಕರ ಮೆಚ್ಚುಗೆಗೆ ಪಾತ್ರರಾದರು. ದುಬೈನಲ್ಲಿ ನಡೆದ ಮೂರು ದಿನ ನಡೆದ ಸಮ್ಮೇಳನದಲ್ಲಿ ವಿವಿಧ ದೇಶದ 2000ಕ್ಕೂ ಹೆಚ್ಚು ನರ ಶಿಸ್ತ್ರ ಚಿಕಿತ್ಸಕರು ಭಾಗವಹಿಸಿದ ಸಂದರ್ಭದಲ್ಲಿ ಡಾ.ಶಿವಶಂಕರ್ …

Read More »

ಅಜಿತ್ ಪವಾರ್ ವಿಮಾನ ದುರಂತ: ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ..! ಮಹಾರಾಷ್ಟ್ರದ ರಾಜಕೀಯ ಧ್ರುವತಾರೆ, ಉಪಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಅವರ ಅಕಾಲಿಕ ನಿಧನಕ್ಕೆ ಕಾರಣವಾದ ಬೊಂಬಾರ್ಡಿಯರ್ ಲಿಯರ್‌ಜೆಟ್ 45 ವಿಮಾನ ಅಪಘಾತದ ಪ್ರಾಥಮಿಕ ತನಿಖಾ ವರದಿ ಹೊರಬಿದ್ದಿದೆ. ದುರಂತಕ್ಕೆ ಕಾರಣವಾದ ಕೆಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಜನವರಿ 28ರ ಬುಧವಾರ ಬೆಳಿಗ್ಗೆ ಸಂಭವಿಸಿದ ಈ ಭೀಕರ ಘಟನೆಯು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ದುರಂತದ ಹಿಂದಿನ ಪ್ರಮುಖ ಕಾರಣಗಳು: ದೃಶ್ಯಮಾನತೆ ಮತ್ತು ತಾಂತ್ರಿಕ ದೋಷ..? ತನಿಖಾ ಮೂಲಗಳ ಪ್ರಕಾರ, ಅಪಘಾತಕ್ಕೆ ಎರಡು ಪ್ರಮುಖ ಕಾರಣಗಳನ್ನು ಗುರುತಿಸಲಾಗಿದೆ. ಕಡಿಮೆ ದೃಶ್ಯಮಾನತೆ: ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಮಯದಲ್ಲಿ ರನ್‌ವೇ ಮೇಲೆ ದಟ್ಟವಾದ ಮಂಜು ಕವಿದಿತ್ತು. ದೃಶ್ಯಮಾನತೆ ತೀರಾ ಕಡಿಮೆ ಇದ್ದರೂ ಸಹ, ವಿಮಾನವನ್ನು ಲ್ಯಾಂಡಿಂಗ್ ಮಾಡಲು ನಿರ್ಧರಿಸಿದ್ದು ಈ ದುರಂತಕ್ಕೆ ಒಂದು ಮುಖ್ಯ ಕಾರಣವೆಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಪೈಲಟ್‌ಗಳು ಎರಡನೇ ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸುತ್ತಿದ್ದಾಗ ವಿಮಾನವು ನಿಯಂತ್ರಣ ತಪ್ಪಿ ಬೆಂಕಿ ಹೊತ್ತಿಕೊಂಡಿದೆ.

ಮಹಾರಾಷ್ಟ್ರದ ರಾಜಕೀಯ ಧ್ರುವತಾರೆ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ಕಾರಣವಾದ ಬೊಂಬಾರ್ಡಿಯರ್ ಲಿಯರ್‌ಜೆಟ್ 45 ವಿಮಾನ ಅಪಘಾತದ ಪ್ರಾಥಮಿಕ ತನಿಖಾ ವರದಿ ಹೊರಬಿದ್ದಿದೆ. ದುರಂತಕ್ಕೆ ಕಾರಣವಾದ ಕೆಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಜನವರಿ 28ರ ಬುಧವಾರ ಬೆಳಿಗ್ಗೆ ಸಂಭವಿಸಿದ ಈ ಭೀಕರ ಘಟನೆಯು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ದುರಂತದ ಹಿಂದಿನ ಪ್ರಮುಖ ಕಾರಣಗಳು: ದೃಶ್ಯಮಾನತೆ ಮತ್ತು ತಾಂತ್ರಿಕ ದೋಷ..? ತನಿಖಾ ಮೂಲಗಳ ಪ್ರಕಾರ, ಅಪಘಾತಕ್ಕೆ ಎರಡು …

Read More »

ಶ್ರೀನಗರದಲ್ಲಿ ಹಿಂದೂ ಸಮ್ಮೇಳನ

ಬೆಳಗಾವಿ: ಮಹಾಂತೇಶ ನಗರ, ಶ್ರೀನಗರ ಹಾಗೂ ಶಿವಬಸವ ನಗರ ಹಿಂದೂ ಸಮ್ಮೇಳನ ಸಮಿತಿಯಿಂದ ಫೆ.6ರಂದು ಸಂಜೆ 6ಕ್ಕೆ ಶ್ರೀನಗರ ಸಾಯಿ ಮಂದಿರ ಎದುರಿನ ಮೈದಾನದಲ್ಲಿ  ವಿರಾಟ ಹಿಂದೂ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಎ.ಆರ್.ಪಾಟೀಲ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಪ್ರಮುಖ ಭಾಷಣ ಮಾಡುವರು. ಸಮುತ್ಕರ್ಷದ ಜಿಲ್ಲಾ ಮುಖ್ಯಸ್ಥೆ ಪರಿಣಿತಾ ಪಾಟೀಲ ಇತರರು …

Read More »

ಆಸ್ತಿ ದಾಖಲೆ ಡಿಜಿಟಲೀಕರಣಕ್ಕೆ ಮುಂದಾದ ಪಾಲಿಕೆ!

ಬೆಳಗಾವಿ: ಆಡಳಿತದಲ್ಲಿ ಪಾರದರ್ಶಕತೆ, ಖಾಸಗಿ, ಸರ್ಕಾರಿ ಆಸ್ತಿಗಳ ದಾಖಲೆ ಸಂರಕ್ಷಣೆ ಹಾಗೂ ಅಕ್ರಮ ಕಡಿವಾಣಕ್ಕೆ ಹಾಕುವ ನಿಟ್ಟಿನಲ್ಲಿ 50 ವರ್ಷದ ಹಳೆ ದಾಖಲೆ ಡಿಜಿಟಲೀಕರಣಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ! ಹೌದು. ಮಹಾನಗರ ಪಾಲಿಕೆಯ ಕಂದಾಯ ವಿಭಾಗದಲ್ಲಿ 58 ವಾರ್ಡ್ ವ್ಯಾಪ್ತಿಯ ಪ್ರದೇಶದಲ್ಲಿ ಅಂದಾಜು 1.52 ಲಕ್ಷ ವಸತಿ, ವಾಣಿಜ್ಯ ಮಳಿಗೆ, ಖಾಲಿ ನಿವೇಶನಗಳು ಹಾಗೂ ಸರ್ಕಾರಿ ಆಸ್ತಿಗಳಿವೆ.  ಆದರೆ, 1980 ರಿಂದ 2020ರ ನಡುವಿನ ಅವಧಿಯಲ್ಲಿ ಆಸ್ತಿ ಮೂಲ ದಾಖಲೆಗಳು ಸಿಗುತ್ತಿಲ್ಲ. …

Read More »

ಯೋಧನಿಗೆ ಅಂತಿಮ ವಿದಾಯ

ಬೆಳಗಾವಿ: ಪಂಜಾಬ ರಾಜ್ಯದ ಭಟಿಂಡಾದಲ್ಲಿ ನಡೆದ ಸೇನಾವಾಹನ ಅಪಘಾತದಲ್ಲಿ ಸೋಮವಾರ ಮೃತಪಟ್ಟಿದ್ದ ತಾಲೂಕಿನ ಕಂಗ್ರಾಳಿ ಖುರ್ದ (ಕೆಎಚ್) ಗ್ರಾಮದ ಯೋಧ ಹವಾಲ್ದಾರ್ ಜಗದೀಶ ಮನೋಹರ ಶಿಂಧೆ ಅಂತ್ಯಕ್ರಿಯೆ ಸಕಲ ಸೇನಾ ಹಾಗೂ ಸರ್ಕಾರಿ ಗೌರವಗಳೊಂದಿಗೆ  ಬುಧವಾರ ನೆರವೇರಿತು. 24 ವರ್ಷಗಳಿಂದ ಸೇನೆಯಲ್ಲಿದ್ದ ಜಗದೀಶ ಇನ್ನು ನಾಲ್ಕು ತಿಂಗಳಿಗೆ ನಿವೃತ್ತರಾಗಲಿದ್ದರು. ಭಟಿಂಡಾ ಆರ್ಮಿ ಏರ್ ಡಿಫೆನ್ಸ್ ಸೇನಾ ಕೇಂದ್ರದಲ್ಲಿ ಅವರು ಸೇವೆಯಲ್ಲಿದ್ದರು. ಜಗದೀಶ ಅವರ ಪಾರ್ಥಿವ ಶರೀರ ಬುಧವಾರ ಬೆಳಗ್ಗೆ ಸಾಂಬ್ರಾ ವಿಮಾನ …

Read More »

ಆಲ್ ಇಂಡಿಯಾ ಕ್ರಿಕೆಟ್ ಟೂರ್ನಿ 12ರಿಂದ

ಬೆಳಗಾವಿ: ಪ್ರಥಮ ಬಾರಿಗೆ ಬೆಳಗಾವಿ ನಗರದಲ್ಲಿ ಮುರುಘೇಂದ್ರಗೌಡ ಫೌಂಡೇಷನ್ ಆಶ್ರಯದಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಪಟುಗಳನ್ನು ಒಳಗೊಂಡಿರುವ ‘ಆಲ್ ಇಂಡಿಯಾ ಓಪನ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ-26’  ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಮುರೇಂದ್ರಗೌಡ ಪಾಟೀಲ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸರ್ದಾರ ಮೈದಾನದಲ್ಲಿ ಫೆ.12ರಿಂದ ಫೆ.22ರ ವರೆಗೆ 11 ದಿನಗಳ ಕಾಲ ನಡೆಯಲಿರುವ  ಟೂರ್ನಿಯಲ್ಲಿ 48 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ. ಕರ್ನಾಟಕ ಮಾತ್ರವಲ್ಲದೆ ಉತ್ತರಪ್ರದೇಶ, …

Read More »