ಬೆಳಗಾವಿ: ನಗರದಲ್ಲಿರುವ ಗೂಡಂಗಡಿಗಳಲ್ಲಿ ಸ್ವಚ್ಚತೆಯ ಬಗ್ಗೆ ಪಾಲಿಕೆಯ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ರಾಠೋಡ್ ಸೂಚನೆ ನೀಡಿದರು. ಸೋಮವಾರ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದರು. ನಗರದಲ್ಲಿರುವ ಗೂಡಂಗಡಿಗಳಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆಯಿಂದ ಕ್ರಮ ಕೈಗೊಳ್ಳಬೇಕು. ಖೋಕಾ ಅಂಗಡಿಯಲ್ಲಿ ಸ್ವಚ್ಚತೆಯ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಪಾಲಿಕೆಯಿಂದ ಮಾಡಬೇಕು ಎಂದರು. ನಗರದಲ್ಲಿರುವ ಬಡಾವಣೆಗಳಲ್ಲಿ …
Read More »Daily Archives: ಫೆಬ್ರವರಿ 3, 2026
ಪರೋಕ್ಷವಾಗಿ ಶಾಸಕ ಯತ್ನಾಳರಿಗೆ ತಿವಿದ ಸಚಿವ ಎಂ.ಬಿ.ಪಾಟೀಲ
ವಿಜಯಪುರ: ರಾಜ್ಯಪಾಲರು ಬಿಜೆಪಿಯವರು ಏನ್ ಹೇಳ್ತಾರೆ ಅದನ್ನ ಮಾಡ್ತಾರೆ. ಈ ರೀತಿ ಮಾಡ್ತಾರೆ ಎಂದು ನಮಗೆ ಗೊತ್ತಿತ್ತು.. ರಾಜ್ಯಪಾಲರಿಂದ ಇನ್ನೇನೂ ನಿರೀಕ್ಷೆ ಮಾಡಲಾಗಲ್ಲಾ ಎಂದು ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಕಿಡಿ ಕಾರಿದರು. ದ್ವೇಷ ಭಾಷಣ ವಿಧೇಯಕ ಗೌವರ್ನರ್ ತಿರಸ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ದಲ್ಲಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದರು. ದ್ವೇಷ ಭಾಷಣ ವಿಧೇಯಕ ಹಿಂದೆ ಒಂದು ಧರ್ಮದ ಟಾರ್ಗೆಟ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ …
Read More »ಕ್ಯಾಂಪ್ ಪ್ರದೇಶದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ ಶಾಸಕ ಆಸೀಫ್ ಸೇಠ್
ಬೆಳಗಾವಿ ಕ್ಯಾಂಪ್ ಪ್ರದೇಶದ ಜನರ ದಶಕಗಳ ಕನಸು ನನಸಾಗುವ ಕಾಲ ಹತ್ತಿರವಾಗಿದ್ದು, ಶಾಸಕ ಆಸೀಫ್ ಸೇಠ್ ರಸ್ತೆ ಕಾಮಗಾರಿಗೆ ಅಧಿಕೃತ ಚಾಲನೆ ನೀಡಿದ್ದಾರೆ. ಮೂಲಸೌಕರ್ಯ ವೃದ್ಧಿಗೆ ಆದ್ಯತೆ ನೀಡಿರುವ ಶಾಸಕರು, ಗುಣಮಟ್ಟದ ಕೆಲಸಕ್ಕೆ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡುವ ಮೂಲಕ ನಿವಾಸಿಗಳಲ್ಲಿ ಭರವಸೆ ಮೂಡಿಸಿದ್ದಾರೆ. ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಕ್ಯಾಂಪ್ ಪ್ರದೇಶದಲ್ಲಿ ಬಹುಕಾಲದ ಬೇಡಿಕೆಯಾಗಿದ್ದ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಆಸೀಫ್ ಸೇಠ್ ಅವರು ಅಧಿಕೃತವಾಗಿ ಚಾಲನೆ ನೀಡಿದರು. …
Read More »ಕೋಣದ ಬರ್ತ್‌ಡೇಗೆ 300 ಜನಕ್ಕೆ ಊಟ, 10 ಕೇಜಿ ಕೇಕ್,ಚಿಕ್ಕೋಡಿ ತಾಲೂಕಿನ ಚಿಕ್ಕಲವಾಳ ಗ್ರಾಮದಲ್ಲಿ ಅಪರೂಪದ ಆಚರಣೆ
ಮನೆ ಮಗನಂತೆ ಬೆಳೆಸಿದ ಕೋಣದ ಒಂದು ವರ್ಷದ ಜನ್ಮದಿನ ಆಚರಿಸುವ ಮೂಲಕ ಚಿಕ್ಕಲವಾಳ ಗ್ರಾಮದ ಯುವಕ ಮಾದರಿಯಾಗಿದ್ದಾನೆ. ಗ್ರಾಮದ ಕೂಲಿಕಾರ ಸಂಜಯ ರಾಮಚಂದ್ರ ಸಠಾಲೆ(30) ಮನೆಯಲ್ಲಿ ಐದು ಎಮ್ಮೆಗಳನ್ನು ಸಾಕಿದ್ದಾರೆ. ಕಬ್ಬು ಕಟಾವು ಹಂಗಾಮಿನಲ್ಲಿ ಕೂಲಿ ಕಾರ್ಮಿಕನಾಗಿ ಕಾರ್ಯ ಮಾಡುವ ಇವರಿಗೆ ಇರುವುದು ಕೇವಲ 10 ಗುಂಟೆ ಜಮೀನು ಮಾತ್ರ. ಬೇರೆಯವರ ಜಮೀನಿನಿಂದ ಎಮ್ಮೆಗಳಿಗೆ ಮೇವು ತಂದು ಸಲಹುತ್ತಾರೆ. ಗುಜರಾತಿನ ಮುರ್ರಾ ಜಾತಿ ಎಮ್ಮೆಗಳನ್ನು ಸಾಕಿರುವ ಇವರು ಒಂದು ಎಮ್ಮೆಗೆ …
Read More »ರಂಕಾರಿ ಸತ್ಸಂಗ ಮನೆ ಮನೆಗೆ ತಲುಪಿಸಿ – ಜ್ಞಾನ ಪ್ರಚಾರಕ ಮಾರುತಿ ಮೊರೆ.
ನಿರಂಕಾರಿ ಮಂಡಳಿಯ ಸತ್ಸಂಗ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಹುಕ್ಕೇರಿ ಸಂತ ನಿರಂಕಾರಿ ಸತ್ಸಂಗ ಮಂಡಳಿ ಜ್ಞಾನ ಪ್ರಚಾರಕ ಮತ್ತು ಸಂಯೋಜಕ ಮಾರುತಿ ಮೊರೆ ಹೇಳಿದರು. ಹುಕ್ಕೇರಿ ನಗರದ ಸಂತ ನಿರಂಕಾರಿ ಮಂಡಳಿಯ ವತಿಯಿಂದ ಮಾತಾ ಸುನಿತಾ ಮೊರೆ ಇವರ ಶ್ರದ್ದಾಂಜಲಿ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಕರ್ನಾಟಕ ಜೋನಲ್ ಇನ್ ಚಾರ್ಜ ಸುನೀಲ್ ಕುಮಾರ ರಾತ್ರಾಜಿ ಮಾತನಾಡಿ ಮನುಷ್ಯನ ಜಿವಿತಾವಧಿಯಲ್ಲಿ ಇನ್ನೊಬ್ಬರಿಗೆ ಸಹಾಯ ಸಹಕಾರ ಮತ್ತು ಸತ್ಸಂಗ …
Read More »ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು – ಎಕರೆಗಟ್ಟಲೆ ಸೂಕ್ಷ್ಮ ಹುಲ್ಲುಗಾವಲು ಬೆಂಕಿಗಾಹುತಿ
ಚಿಕ್ಕಮಗಳೂರು: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿ ಅರಣ್ಯ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಸುಮಾರು ಒಂದೂವರೆ-ಎರಡು ಕಿ.ಮೀ. ಪಶ್ಚಿಮ ಘಟ್ಟಗಳ ತಪ್ಪಲಿನ ಅಪರೂಪದ ಹುಲ್ಲುಗಾವಲು ಬೆಂಕಿಗೆ ಆಹುತಿಯಾಗಿದೆ. ಮೂಡಿಗೆರೆ ಅರಣ್ಯ (Forest) ವಲಯದೊಳಗೆ ಕಾಣಿಸಿಕೊಂಡಿರುವ ಬೆಂಕಿಯಿಂದ ಪಶ್ಚಿಮ ಘಟ್ಟಗಳ ಸಾಲಿನ ಸೂಕ್ಷ್ಮ ಹುಲ್ಲುಗಾವಲು ಪ್ರದೇಶ ಸಂಪೂರ್ಣವಾಗಿ ಧಗಧಗಿಸಿ ಉರಿಯುತ್ತಿದೆ. ಗಾಳಿಯ ವೇಗ ಕೂಡ ಹೆಚ್ಚಿರುವುದರಿಂದ ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಹರಡಿದ್ದು ಅರಣ್ಯ …
Read More »
Laxmi News 24×7